ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ.23ರಂದು ಮೈಸೂರಿನಲ್ಲಿ 144 ಸೆಕ್ಷನ್ ಜಾರಿ

|
Google Oneindia Kannada News

ಮೈಸೂರು, ಮೇ 20: ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಮೇ 23 ರಂದು ನಗರದ ಪಡವಾರಹಳ್ಳಿಯ ವಾಲ್ಮೀಕಿ ರಸ್ತೆ ಜಂಕ್ಷನ್ ನ ಮಹಾರಾಣಿ ಕಾಲೇಜಿನಲ್ಲಿ ನಡೆಯಲಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಂದು ಬೆಳಗ್ಗೆ 6 ರಿಂದ ಮಧ್ಯರಾತ್ರಿ 12ರವರೆಗೆ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ಕರ್ನಾಟಕದಲ್ಲಿ ಬಿಜೆಪಿ ಜಯಭೇರಿಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

ಇದರನ್ವಯ ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ 5 ಮಂದಿಗಿಂತ ಹೆಚ್ಚು ಗುಂಪು ಗೂಡುವುದು, ಸಭೆ - ಸಮಾರಂಭ ನಡೆಸುವುದು, ಗೆದ್ದ ಅಭ್ಯರ್ಥಿಗಳ ವಿಜಯೋತ್ಸವ, ಮೆರವಣಿಗೆ, ಸಾರ್ವಜನಿಕ ಸ್ಥಳದಲ್ಲಿ ಪಟಾಕಿ ಸಿಡಿಸುವುದು, ಯಾವುದೇ ವ್ಯಕ್ತಿ ಸ್ಫೋಟಕ ವಸ್ತು- ಮಾರಕಾಸ್ತ್ರ ಇಟ್ಟುಕೊಳ್ಳುವುದು, ಪ್ರಚೋದನಕಾರಿ ಭಾಷಣ ಮತ್ತು ಡಿಜೆ ಉಪಯೋಗಿಸಿ ಬೈಕ್ ರಾಲಿ ನಡೆಸುವುದನ್ನು ನಿಷೇಧಿಸಲಾಗಿದೆ.

Mysuru is all set for counting of lokasabha election votes on May 2

ಈ ನಿಷೇಧಾಜ್ಞೆ ಉಲ್ಲಂಘಿಸಿದರೆ ಅವರ ವಿರುದ್ಧ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಮಡಿಕೇರಿ ಕೇತ್ರದ 369 ಮತಗಟ್ಟೆಗಳ ಎಣಿಕೆ ಕಾರ್ಯವು 18 ಸುತ್ತುಗಳಲ್ಲಿ , ವಿರಾಜಪೇಟೆ ಕೇತ್ರದ 274 ಮತಗಟ್ಟೆಗಳ ಎಣಿಕೆ ಕಾರ್ಯ 19 ಸುತ್ತುಗಳಲ್ಲಿ, ಪಿರಿಯಾಪಟ್ಟಣ ಕೇತ್ರದ 235 ಮತಗಟ್ಟೆಗಳ ಎಣಿಕೆ ಕಾರ್ಯವು 16 ಸುತ್ತುಗಳಲ್ಲಿ, ಹುಣಸೂರು ಕೇತ್ರದ 274 ಮತಗಟ್ಟೆಗಳ ಎಣಿಕೆ 19 ಸುತ್ತುಗಳಲ್ಲಿ, ಚಾಮುಂಡೇಶ್ವರಿ ಕೇತ್ರದ 338 ಮತಗಟ್ಟೆಗಳ ಎಣಿಕೆ 19 ಸುತ್ತುಗಳಲ್ಲಿ, ಕೃಷ್ಣರಾಜ ಕೇತ್ರದ 270 ಮತಗಟ್ಟೆಗಳ ಎಣಿಕೆ 18 ಸುತ್ತುಗಳಲ್ಲಿ, ಚಾಮರಾಜ ಕೇತ್ರದ 245 ಮತಗಟ್ಟೆಗಳ ಎಣಿಕೆ 17 ಸುತ್ತುಗಳಲ್ಲಿ, ನರಸಿಂಹರಾಜ ಕೇತ್ರದ 282 ಮತಗಟ್ಟೆಗಳ ಎಣಿಕೆ 19 ಸುತ್ತುಗಳಲ್ಲಿ ನಡೆಯುವುದು ಮತ್ತು ಅಂಚೆ ಮತಪತ್ರ ಹಾಗೂ ಇ.ಟಿ.ಪಿ.ಬಿ.ಎಸ್‌ ಸ್ಕ್ಯಾ‌ನಿಂಗ್‌ ಕೂಡ ನಡೆಯುವುದು.

English summary
Mysuru is all set for counting Of lokasabha election votes On May 23. Counting of votes polled is set to take place at Maharani’s College. Tight security is given to college.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X