ಎಲೈಟ್ ಸಂಸ್ಥೆಯ ಮಿಸ್ ಇಂಡಿಯಾ ಸ್ಪರ್ಧೆಗೆ ಮೈಸೂರಿನ ಅಪೂರ್ವ ಆಯ್ಕೆ
ಮೈಸೂರು, ಜನವರಿ 13: ಬೆಂಗಳೂರಿನ ಪ್ರತಿಷ್ಠಿತ ಎಲೈಟ್ ಸಂಸ್ಥೆ ಆಯೋಜಿಸಿರುವ ಮಿಸ್ ಇಂಡಿಯಾ' ಸ್ಪರ್ಧೆಯ ಫೈನಲ್ ಗೆ ಮೈಸೂರಿನ ಅಪೂರ್ವ ಜೈನ್ ಆಯ್ಕೆಯಾಗಿದ್ದಾರೆ.
ಇವರು ನಗರದ ಮನ್ಮಹಾರಾಜ ಕಾಲೇಜಿನ ವಿಶ್ರಾಂತ ಜೈನಾಗಮ ಪ್ರಾಧ್ಯಾಪಕಿ ಪ್ರೊ.ಎಸ್.ಎ.ಕಮಲಾಜೈನ್ ಅವರ ಪುತ್ರಿ.
ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯ ಆಡಿಷನ್ ನಲ್ಲಿ 2 ಸಾವಿರಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗಿಯಾಗಿದ್ದರು.
ಡಿಪ್ಲೊಮಾ ಇನ್ ಇಂಟಿರೀಯರ್ ಡಿಸೈನ್, ಡಿಪ್ಲೊಮಾ ಇನ್ ಸಾಫ್ಟ್‍ವೇರ್ ವಿದ್ಯಾಭ್ಯಾಸ ಮಾಡಿರುವ ಅಪೂರ್ವ ಜೈನ್ ಈಗಾಗಲೇ ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಉದಯೋನ್ಮುಖ ಮಾಡೆಲ್ ಆಗಿ ಛಾಪು ಮೂಡಿಸಿದ್ದಾರೆ.

2016ರ ಮಿಸ್ ಸೌತ್ ಕರ್ನಾಟಕ, ಮಿಸ್ ಕರ್ನಾಟಕ, ಮಿಸ್ ಮೈಸೂರು(ಬೆಸ್ಟ್ ಆಟಿಟ್ಯೂಡ್) ಮಿಸ್ ಫ್ಯಾಷನ್ ಪಿನ್ಸೆಸ್, ಮಿಸ್ ಫೋಟೋ ಗ್ರಾಫಿಕ್ 2017 ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೇ ಯುವ ಕವಯತ್ರಿಯೂ ಆಗಿರುವ ಅಪೂರ್ವ ಈಗಾಗಲೇ ಅರಳು ಮಲ್ಲಿಗೆ' ಕವನ ಸಂಕಲವನ್ನು ಹೊರತಂದು ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.












Click it and Unblock the Notifications