ಮೈಸೂರು: ಮರ್ಯಾದಾ ಹತ್ಯೆ, ತಂದೆ ಸೇರಿ ಐವರ ಬಂಧನ
ಮೈಸೂರು, ಜೂನ್ 26 : ಜಿಲ್ಲೆಯ ಜಿಲ್ಲೆಯ ನಂಜನಗೂಡು ತಾಲೂಕಿನ ಪಾರ್ವತಿಪುರದಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣವೊಂದು ಭಾನುವಾರ ಬೆಳಕಿಗೆ ಬಂದಿದ್ದು, ಇದೀಗ ಹತ್ಯೆಯ ಆರೋಪಿಗಳನ್ನು ಹೆಚ್ ಡಿ ಕೋಟೆ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ಪಾಪಿ ತಂದೆ ಮಗಳನ್ನು ಕೊಂದು ಸುಟ್ಟು ಹಾಕಿದ್ದನು ಎನ್ನಲಾಗಿದೆ. ಇದೀಗ ತಂದೆ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರನ್ನು ಕೊಲೆಯಾದ ಯುವತಿ ತಂದೆ ಬಂಧಿತರನ್ನು ತಂದೆ ಗುರುಸಿದ್ದೇಗೌಡ, ತಾಯಿ ಮಹದೇವಮ್ಮ, ಸಂಬಂಧಿಕರಾದ ಕಿರಣ್, ಮಹೇಶ್,ರಾಮೇಗೌಡ ಎಂದು ಗುರುತಿಸಲಾಗಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಪಾರ್ವತಿಪುರದ 19 ವರ್ಷದ ಶೋಭಾ ಮತ್ತು ಕೃಷ್ಣ ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಓಡಿ ಹೋಗಲು ಯತ್ನಿಸಿದಾಗ ಶೋಭಾ ತಂದೆ ಗುರುಸಿದ್ದೇಗೌಡ ಮತ್ತು ನಾಲ್ವರು ಹಲ್ಲೆ ನಡೆಸಿದ್ದರು. ಈ ವೇಳೆ ಕೃಷ್ಣ ತಪ್ಪಿಸಿಕೊಳ್ಳಲುಓಡಿ ಹೋಗಿದ್ದನು.
ಇದಾದ ನಂತರ ಮೂರು ತಿಂಗಳಾದರೂ ಶೋಭಾ ಕೃಷ್ಣ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹಾಗೂ ತಂದೆ ಮನೆಯಲ್ಲೂ ಕಾಣಿಸಿಕೊಂಡಿರಲಿಲ್ಲ.
ಇದರಿಂದ ಅನುಮಾನಗೊಂಡ ಆಕೆ ಪ್ರಿಯಕರ ಕೃಷ್ಣ ಈ ಬಗ್ಗೆ ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದನು.












Click it and Unblock the Notifications