ಜೂ.16ರಂದು ಮೈಸೂರು ವಿಭಾಗದ ಈ 5 ಜಿಲ್ಲೆಗಳಲ್ಲಿ ಪೆಟ್ರೋಲ್ ಬಂಕ್ ಬಂದ್

ಮೈಸೂರು, ಜೂನ್ 15 : ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ತಕ್ಕಂತೆ ಪ್ರತಿದಿನವೂ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ನಾಳೆ (ಗುರುವಾರ) ಮೈಸೂರು ವಿಭಾಗದ ಎಲ್ಲಾ ಪೆಟ್ರೋಲ್ ಬಂಕ್ ಬಂದ್ ಗೆ ಕರೆ ಕೊಡಲಾಗಿದೆ.

ಪ್ರತಿದಿನ ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಬಗ್ಗೆ ಇಂದು (ಗುರುವಾರ) ಮೈಸೂರು ವಿಭಾಗದ ಪೆಟ್ರೋಲ್ ಬಂಕ್ ಮಾಲೀಕರ ಸಂಘ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದೆ. ಮೈಸೂರು ವಿಭಾಗದಲ್ಲಿ ಬರುವ ಹಾಸನ, ಚಾಮರಾಜನಗರ, ರಾಮನಗರ, ಕೊಡಗು, ಮಂಡ್ಯ ಜಿಲ್ಲೆಗಳಲ್ಲಿ ಇಂದು ಮಧ್ಯರಾತ್ರಿಯಿಂದ ನಾಳೆ ಮಧ್ಯರಾತ್ರಿವರೆಗೆ ಬಂದ್ ಮಾಡಲಾಗುವುದು ಎಂದು ಪೆಟ್ರೋಲ್ ಬಂಕ್ ಪ್ರಧಾನ ಕಾರ್ಯದರ್ಶಿ ರಂಜಿತ್ ಹೆಗ್ಗಡೆ ತಿಳಿಸಿದ್ದಾರೆ.

Mysuru division Petrol pump association called strike on June 16th against daily price revision

ನಾಳೆಯಿಂದ ಅಂದರೆ ಜೂನ್ 16ರಿಂದ ದೇಶದಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ನ ಬೆಲೆ ಆಯಾ ದಿನವೇ ಪರಿಷ್ಕರಣೆ ಆಗುತ್ತದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಪೆಟ್ರೋಲ್ ಮಾಲೀಕರ ಸಂಘ ವಿರೋಧಿಸಿದೆ. ಅದರಂತೆ ಮೈಸೂರು ವಿಭಾಗದ ಎಲ್ಲಾ ಪೆಟ್ರೋಲ್ ಬಂಕ್ ಗಳನ್ನು ಬಂದ್ ಮಾಡಲಾಗುತ್ತಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ತಕ್ಕಂತೆ ಪ್ರತಿದಿನವೂ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಒಕ್ಕೂಟ ಬಂದ್ ಗೆ ಕರೆನೀಡಲಾಗಿತ್ತು. ಬಳಿಕ ಒಕ್ಕೂಟ ಬಂದ್ ನ್ನು ವಾಪಸ್ಸ್ ತೆಗೆದುಕೊಂಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+