Dasara Elephant Death: ವಿದ್ಯುತ್ ಶಾಕ್‌ನಿಂದ ದಸರೆ ಆನೆ 'ಅಶ್ವತ್ಥಾಮ' ಸಾವು
ಮೈಸೂರು, ಜೂನ್ 11: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದ ಆನೆ 'ಅಶ್ವತ್ಥಾಮ' ವಿದ್ಯುತ್ ಸ್ಪರ್ಶದಿಂದ ಮಂಗಳವಾರ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ.
38 ವರ್ಷ 'ಅಶ್ವತ್ಥಾಮ' ಆನೆಯು ಮೈಸೂರು ದಸರಾದಲ್ಲಿ ಎರಡು ಭಾರಿ ಪಾಲ್ಗೊಂಡಿತ್ತು. ಹುಣಸೂರು-ಪಿರಿಯಾಟ್ಟಣ ತಾಲೂಕಿನ ಗಡಿ ಭಾಗದ ನಾಗರಹೊಳೆ ಹುಲಿ ಸುರಕ್ಷಿತ ಪ್ರದೇಶ ವ್ಯಾಪ್ತಿಯ ಭೀಮನಕಟ್ಟೆ ಆನಿ ಶಿಬಿರದಿಂದ ಆಹಾರ ಹುಡುಕಿಕೊಂಡು ಕಾಡಿಗೆ ತೆರಳಿತ್ತು.

ಈ ವೇಳೆ ಸೋಲಾರ್ ಬೇಲಿಯ ವಿದ್ಯುತ್ ತಂತಿ ತಗುಲಿ ಆನೆಗೆ ವಿದ್ಯುತ್ ಆಘಾತವಾಗಿತ್ತು. ಉರುಳಿ ಬಿದ್ದ ಆನೆ ಕ್ಷಣಾರ್ಧದಲ್ಲಿ ಜೀವ ಬಿಟ್ಟಿದೆ. ಹಾಸನ ಜಿಲ್ಲೆಯ ಸಕಲೇಶಪುರದ ಕಾಡಿನಲ್ಲಿ 2017ರಲ್ಲಿ ಸೆರೆ ಹಿಡಿದು ತರಲಾಗಿತ್ತ. ನಂತರ ಮೈಸೂರು ಉತ್ಸವದಲ್ಲಿ ಪಾಲ್ಗೊಳ್ಳಲು ಅದಕ್ಕೆ ತರಬೇತಿ ನೀಡಲಾಗಿತ್ತು.
ಆನೆ ಶಿಬಿರದಲ್ಲಿ ತರೇಬೇತಿ ಪಡೆದಿದ್ದ 'ಅಶ್ವತ್ಥಾಮ' ನನ್ನು 2021ರ ದಸರಾ ಮಹೋತ್ಸವದಲ್ಲಿ ಕರೆತರಲಾಗಿತ್ತು. ಅಲ್ಲಿಂದ ಒಟ್ಟು ಎರಡು ಭಾರಿ ದಸರೆಯಲ್ಲಿ ಪಾಲ್ಗೊಂಡು ಗಮನ ಸೆಳೆದಿತ್ತು. ಅಷ್ಟೊತ್ತಿಗಾಗಲೇ ಉತ್ಸವಕ್ಕೆ ಬೇಕಾಗಿದ್ದ ತಾಲೀಮನ್ನು ಈ ಆನೆ ಪಡೆದುಕೊಂಡು ಪಳಗಿತ್ತು ಎಂದು ಮಾವುತರೊಬ್ಬರು ಮಾಹಿತಿ ನೀಡಿದ್ದಾರೆ.
ಮೂಗಳ ಪ್ರಕಾರ, ಈ ಅಶ್ವತ್ಥಾಮ ಆನೆ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿರಲಿಲ್ಲ ಎನ್ನಲಾಗಿದೆ. ಮೂಲತಃ ಶಾಂತ ಮತ್ತು ಗಾಂಭೀರ್ಯ ಸ್ವಭಾವ ಹೊಂದಿದ 'ಅಶ್ವತ್ಥಾಮ' ಸಾವಿನ ಸುದ್ದಿಯಿಂದ ಮಾವುತರು ಕಣ್ಣೀರು ಹಾಕಿದ್ದಾರೆ.












Click it and Unblock the Notifications