Mysuru Dasara Ambari Bus: ಅಂಬಾರಿ ಬಸ್‌ನಲ್ಲಿ ಮೈಸೂರು ಸುತ್ತಿ! ಸಮಯ, ಟಿಕೆಟ್ ಬೆಲೆ, ಬಸ್ ಮಾರ್ಗದ ವಿವರ
ಈ ಬಾರಿ ಮೈಸೂರು ದಸರಾ ನೋಡಲು ಹೋಗುವ ಪ್ರಯಾಣಿಕರಿಗೆ ಅಂಬಾರಿಯಲ್ಲಿ ಮೈಸೂರು ನಗರ ಸುತ್ತುವ ಅವಕಾಶ ಸಿಗಲಿದೆ!. ಹೌದು, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ದಸರಾ ವಿಶೇಷವಾಗಿ ಐಷಾರಾಮಿ ಡಬಲ್ ಡೆಕ್ಕರ್ ಬಸ್ ಸೇವೆಯನ್ನು ಆರಂಭಿಸಿದ್ದು, ಬಸ್‌ಗಳಿಗೆ ಅಂಬಾರಿ ಎಂದು ಹೆಸರಿಟ್ಟಿದೆ.
ಅಕ್ಟೋಬರ್ 15ರಿಂದ ಮೈಸೂರು ನಗರದಲ್ಲಿ ಅಂಬಾರಿ ಬಸ್ ಸೇವೆ ಆರಂಭವಾಗಲಿದೆ. ಅಕ್ಟೋಬರ್ ಅಂತ್ಯದವರೆಗೆ ಬಸ್ ಸೇವೆ ಇರಲಿದ್ದು, ಪ್ರಯಾಣಿಕರು ಅಂಬಾರಿ ಬಸ್‌ನಲ್ಲಿ ಮೈಸೂರು ನಗರವನ್ನು ಸುತ್ತಬಹುದಾಗಿದೆ.

ಪ್ರಯಾಣಿಕರಿಗೆ ಮೈಸೂರು ನಗರದ ದರ್ಶನ ಮಾಡಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಆರು ಐಷಾರಾಮಿ ಡಬಲ್ ಡೆಕ್ಕರ್ ಬಸ್‌ಗಳನ್ನು ನಿಯೋಜನೆ ಮಾಡಿದೆ. ಸಂಜೆ 6, 8 ಮತ್ತು 9 ಗಂಟೆಗೆ ಸಿಟಿ ಸುತ್ತಾಟಕ್ಕೆ ಹೋಗಲಿವೆ.
ಮಾರ್ಗ, ಟಿಕೆಟ್ ದರ
ಐಷಾರಾಮಿ ಅಂಬಾರಿ ದಸರಾ ಬಸ್‌ಗಳು ಕೆಳ ಡೆಕ್‌ನಲ್ಲಿ 24 ಆಸನಗಳನ್ನು ಹೊಂದಿದ್ದರೆ ಮೇಲಿನ ಡೆಕ್‌ನಲ್ಲಿ 24 ಆಸನಗಳನ್ನು ಹೊಂದಿವೆ. ಕೆಳಗಿನ ಡೆಕ್‌ನಲ್ಲಿ ಪ್ರತಿ ಆಸನಕ್ಕೆ 250 ರೂಪಾಯಿ ನಿಗದಿ ಮಾಡಿದ್ದರೆ, ಮೇಲಿನ ಡೆಕ್‌ನಲ್ಲಿರುವ ಆಸನಗಳಿಗೆ 500 ರೂಪಾಯಿ ದರ ನಿಗದಿ ಮಾಡಲಾಗಿದೆ. ಒಂದು ಗಂಟೆಯ ಪ್ರಯಾಣದ ಅವಧಿ ಇರಲಿದ್ದು, ದಸರಾ ಸಂಭ್ರಮದಲ್ಲಿರುವ ನಗರದ ದರ್ಶನ ಮಾಡಬಹುದಾಗಿದೆ.
ಅಂಬಾರಿ ದಸರಾ ಬಸ್ ನಗರದ ಮಯೂರ ಹೊಯ್ಸಳ ಹೋಟೆಲ್‌ನಿಂದ ಆರಂಭಗೊಂಡು ಹಳೆ ಡಿಸಿ ಕಚೇರಿ, ಕ್ರಾಫರ್ಡ್ ಹಾಲ್, ಓರಿಯಂಟಲ್ ರಿಸರ್ಚ್, ರಾಮಸ್ವಾಮಿ ಸರ್ಕಲ್, ಸಂಸ್ಕೃತ ಪಾಠಶಾಲೆ, ಅರಮನೆ ದಕ್ಷಿಣ ಬಾಗಿಲು, ಜಯ ಮಾರ್ತಾಂಡ ಸರ್ಕಲ್, ಹೋರ್ಡಿಂಗ್ ಸರ್ಕಲ್, ಸಯ್ಯಾಜಿ ರಾವ್ ರಸ್ತೆ, ಆಯುರ್ವೇದಿಕ್ ಮೆಡಿಕಲ್ ಕಾಲೇಜು, ರೈಲ್ವೇ ನಿಲ್ದಾಣದ ಮೂಲಕ ಸಾಗಿ ಹೋಟೆಲ್ ಮಯೂರ ಹೊಯ್ಸಳ ಬಳಿ ಮುಕ್ತಾಯಗೊಳ್ಳುತ್ತದೆ.
https://www.kstdc.co/tour-packages/mysuru-sightseeing-by-ambaari-3/ ಈ ವೆಬ್‌ಸೈಟ್‌ಗೆ ತೆರಳಿ ಅಂಬಾರಿ ಬಸ್ ಟಿಕೆಟ್ ಬುಕ್ ಮಾಡಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ 0821-2423652/ 8970656400 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
ಮೈಸೂರು ದಸರಾ ಆಚರಣೆಗೆ ಸಿದ್ಧತೆ
ಮೈಸೂರು ದಸರಾ ಆಚರಣೆಗೆ ಈಗಾಗಲೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಂಬಾರಿ ಹೊರುವ ಆನೆಗಳು ಮೈಸೂರಿಗೆ ಆಗಮಿಸಿದ್ದು, ತಾಲೀಮು ನಡೆಸುತ್ತಿವೆ. ಖ್ಯಾತ ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಅವರು ಈ ಬಾರಿ ಮೈಸೂರು ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ.












Click it and Unblock the Notifications