Get Updates
Get notified of breaking news, exclusive insights, and must-see stories!

ದಸರಾ ಕಲಾ ಪ್ರದರ್ಶನಕ್ಕೆ ನೀವೂ ಕಲಾಕೃತಿ ಕಳಿಸಬಹುದು: ಹೇಗೆ? ಏನು? ವಿವರ ಇಲ್ಲಿದೆ

ಮೈಸೂರು, ಸೆಪ್ಟೆಂಬರ್‌ 19: ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಸಂಬoಧ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಸಿದ್ದಾರ್ಥನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಆವರಣದಲ್ಲಿ ಅಕ್ಟೋಬರ್ 04 ರಿಂದ 07 ರವರೆಗೆ ನಡೆಯುವ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾವಿದರಿಂದ ಕಲಾಕೃತಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ತಮ್ಮ ಕಲಾಕೃತಿಗಳನ್ನು ಕಳಿಸಬಹುದಾಗಿದೆ.

ಮೈಸೂರು ದಸರಾದಲ್ಲಿ ಪ್ರತಿವರ್ಷವೂ ಲಲಿತಕಲೆ ಮತ್ತು ಕರಕುಶಲ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾ ಬರಲಾಗುತ್ತಿದ್ದು, ಇದರಿಂದ ಕಲಾವಿದರಿಗೆ ಪ್ರೋತ್ಸಾಹ ದೊರೆಯುತ್ತಿದೆ. ಅಷ್ಟೇ ಅಲ್ಲದೆ ಪ್ರತಿಭೆಗಳನ್ನು ಕಲಾಪ್ರದರ್ಶನ ಮತ್ತು ಪ್ರೋತ್ಸಾಹಕ್ಕೂ ಇದು ಕಾರಣವಾಗುತ್ತಿದೆ. ಹೀಗಾಗಿ ಪ್ರತಿಭಾನ್ವಿತ ಕಲಾವಿದರು ಇದರಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

Mysuru Dasara 2024 You Can Also Submit Artwork For Dasara Art Exhibition

ಕಲಾಪ್ರದರ್ಶನದಲ್ಲಿ ಭಾಗವಹಿಸುವವರ ಅನುಕೂಲಕ್ಕಾಗಿ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ, ಅನ್ವಯ ಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳನ್ನು ಮಾಡಲಾಗಿದ್ದು, ಕಲಾಕೃತಿಗಳನ್ನು ಸೆಪ್ಟೆಂಬರ್ 30 ರೊಳಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ಸಂಸ್ಥೆಯ ಕಛೇರಿ ಅವಧಿಯಲ್ಲಿ ಸಲ್ಲಿಸಬೇಕು. ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನ ನೀಡಲಾಗುವುದು. ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸಬೇಕು.

ಕಲಾಕೃತಿಯನ್ನು ಕಳಿಸುವುದು ಹೇಗೆ?

ಕಲಾಕೃತಿಯು ಅಕ್ಟೋಬರ್ 2023 ರ ನಂತರ ರಚಿಸಿರಬೇಕು ಹಾಗೂ ಬಹುಮಾನ ಪಡೆದ ಕಲಾಕೃತಿಯಾಗಿರಬಾರದು. ಒಂದು ವಿಭಾಗಕ್ಕೆ ಎರಡು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಕಳುಹಿಸಬಹುದು. ಯಾವುದೇ ಒಂದು ವಿಭಾಗದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಕಲಾಕೃತಿಯು 1x1 ಅಡಿಗಿಂತ ಚಿಕ್ಕದು, 3x3 ಅಡಿಗಿಂತ ದೊಡ್ಡದಿರಬಾರದು. ಶಿಲ್ಪವು 20 ಕಿ.ಜಿ ಗಿಂತ ಕಡಿಮೆ ಭಾರವಾಗಿರಬೇಕು. ಚಿತ್ರಕಲಾಕೃತಿಯನ್ನು ಫ್ರೇಮ್ ನೊಂದಿಗೆ ಮತ್ತು ಶಿಲ್ಪಕೃತಿಯನ್ನು ಪೀಠದೊಂದಿಗೆ ಕಳುಹಿಸಬೇಕು. ಶಿಲ್ಪವು ದುರ್ಬಲ ಮಾಧ್ಯಮದಿಂದ ನಿರ್ಮಿತವಾಗಿರಬಾರದು. ಕಲಾ ಪ್ರದರ್ಶನ ಮುಗಿದ ನಂತರ ಅಕ್ಟೋಬರ್ 8 ರಿಂದ 14 ರೊಳಗೆ ಕಲಾಕೃತಿಗಳನ್ನು ಹಿಂಪಡೆಯಬೇಕು.

Mysuru Dasara 2024 You Can Also Submit Artwork For Dasara Art Exhibition

ಅರ್ಜಿ ನಮೂನೆಯನ್ನು https://cavamysore.karnataka.gov.in ಅಥವಾ https://mysore.nic.in ವೆಬ್ಸೈಟ್ ಮೂಲಕ ಪಡೆಯಬಹುದು. ಹೆಚ್ಚಿನ ವಿವರಗಳಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಚಂದ್ರಶೇಖರ ಎ.ಪಿ ಅವರ ಮೊ.ಸಂ:9844595568 ಮತ್ತು ರವಿಮೂರ್ತಿ.ಕೆ ಅವರ ಮೊ.ಸಂ: 9844082579 ಅನ್ನು ಸಂರ್ಪಕಿಸಬಹುದು ಎಂದು ಮೈಸೂರು ದಸರಾ ಮಹೋತ್ಸವದ ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರು ತಿಳಿಸಿದ್ದಾರೆ.

ಹತ್ತು ಹಲವು ವಿಶೇಷತೆಗಳ ಪ್ರದರ್ಶನ

ಈ ಬಾರಿಯ ರಾಜ್ಯ ಮಟ್ಟದ ದಸರಾ ಕಲಾ ಪ್ರದರ್ಶನದಲ್ಲಿ ಕರ್ನಾಟಕ ರಾಜ್ಯ ಉದಯಿಸಿ ಐವತ್ತು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಕರ್ನಾಟಕ ಏಕೀಕರಣ ಹೋರಾಟದ ಸಂದರ್ಭ, ಪ್ರಜಾಪ್ರಭುತ್ವದ ಮೌಲ್ಯ, ಸಂವಿಧಾನದ ಮಹತ್ವ, ಬುಡಕಟ್ಟು ಸಂಸ್ಕೃತಿ ಇತ್ಯಾದಿಗಳ ಚಿತ್ರಕಲಾ, ಕ್ಯಾನ್ವಾಸ್ ಪೈಂಟಿಂಗ್, ಚಿತ್ರಕಲಾ ಮತ್ತು ಮಣ್ಣಿನ ಆಕೃತಿಗಳನ್ನು ರಚಿಸಿ ಪ್ರದರ್ಶನದಲ್ಲಿಡಲಾಗುತ್ತದೆ. ಇನ್ನು ಜಿಲ್ಲೆಯ ಹಿರಿಯ ಕಲಾವಿದರು ಸೇರಿದಂತೆ ರಾಜ್ಯದ 31 ಜಿಲ್ಲೆಗಳ ಕಲಾವಿದರು, ಒಡಿಶಾ, ಮಹಾರಾಷ್ಟ್ರ, ಬಿಹಾರ, ತಮಿಳುನಾಡು, ರಾಜ್ಯಗಳ ಕಲಾವಿದರು ತಮ್ಮಲ್ಲಿನ ನವರಾತ್ರಿ ಆಚರಣೆ ವೈಭವದೊಂದಿಗೆ ಅಲ್ಲಿನ ಕಲಾವಿದರ ಕೈಚಳಕದಲ್ಲಿ ಸಾಂಪ್ರಾದಾಯಿಕ ಕಲೆಗಳು ಮೂಡಿಬರಲಿವೆ.

Mysuru Dasara 2024 You Can Also Submit Artwork For Dasara Art Exhibition

ಅ. 6ರಂದು ಜಿಲ್ಲೆಯ ನಾನಾ ಮೂಲಗಳ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿದ್ಯಾರ್ಥಿಗಳ ಚಿತ್ರಕಲಾ ಮತ್ತು ಮಣ್ಣಿನಲ್ಲಿ ಕಲಾಕೃತಿಗಳ ಶಿಲ್ಪಕಲೆ ಸ್ಪರ್ಧೆಯು ವಯಸ್ಸಿನ ಆಧಾರದಲ್ಲಿ 3ವಿಭಾಗಗಳಲ್ಲಿ 2 ಅವಧಿಯಲ್ಲಿ ನಡೆಯಲಿದ್ದು, 1ರಿಂದ 4ನೇ ತರಗತಿವರೆಗೆ, 5ರಿಂದ 7ನೇ ತರಗತಿವರೆಗೆ ಮತ್ತು 8ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+