ಗಜಪಡೆಗೆ ಪೂಜೆ ಸಲ್ಲಿಸುವುದೆಂದರೆ ಸುಮ್ನೆನಾ..? ಅರ್ಚಕರು ಆನೆಗಳ ಭಾಷೆ ಕಲಿತಿದ್ದೇಗೆ?
ಮೈಸೂರು, ಸೆಪ್ಟೆಂಬರ್ 13: ಐತಿಹಾಸಿಕ ಮೈಸೂರು ದಸರಾದ ಜಂಬೂಸವಾರಿಗೆ ಬೇಕಾದ ಸಿದ್ಧತೆಗಳು ಒಂದರ ಮೇಲೊಂದರಂತೆ ನಡೆಯುತ್ತಲೇ ಇವೆ. ಗಜಪಡೆಯ ತಾಲೀಮು ಒಂದು ಕಡೆಯಾದರೆ ಮತ್ತೊಂದು ಕಡೆ ಜಂಬೂಸವಾರಿಗೆ ಸಾಥ್ ನೀಡುವ ಇತರೆ ಕಾರ್ಯಗಳ ಸಿದ್ಧತೆಯೂ ಭರದಿಂದ ಸಾಗುತ್ತಿದೆ.
ಇದೆಲ್ಲದರ ನಡುವೆ ಗಜಪಡೆ ಮೈಸೂರಿಗೆ ಆಗಮಿಸುವ ಮುನ್ನ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ನಡೆಯುವ ಗಜಪಯಣದಿಂದ ಆರಂಭವಾಗಿ ಜಂಬೂಸವಾರಿ ಮುಗಿಸಿ ಹಾಡಿಗೆ ಬೀಳ್ಕೊಡುಗೆ ನೀಡುವ ತನಕ ಗಜಪಡೆಗಳಿಗೆ ವಿವಿಧ ಹಂತದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುವ ಅರಮನೆ ಪುರೋಹಿತರ ಬಗ್ಗೆ ಹೇಳಲೇ ಬೇಕಾಗುತ್ತದೆ.

ಗಜಪಡೆಗಳಿಗೆ ಪ್ರತಿಹಂತದಲ್ಲಿಯೂ ಪೂಜಾ ಕೈಂಕರ್ಯಗಳು ನಡೆಯುತ್ತಲೇ ಇರುತ್ತದೆ. ಇದನ್ನು ಎಲ್ಲರೂ ಮಾಡುವುದಿಲ್ಲ ಅದಕ್ಕೆಂದೇ ಒಬ್ಬರು ಅರ್ಚಕರಿರುತ್ತಾರೆ. ಅವರೇ ಅರಮನೆ ಪುರೋಹಿತರಾದ ವಿದ್ವಾನ್ ಪ್ರಹ್ಲಾದ್ ರಾವ್. ಕಳೆದ ಇಪ್ಪತ್ತಾರು ವರ್ಷಗಳಿಂದ ಆನೆಗಳ ಒಡನಾಟದಲ್ಲಿದ್ದುಕೊಂಡು ಗಜಪಡೆಗಳಿಗೆ ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ ಆನೆಗಳ ಬಳಿಗೆ ಹೋಗಲು ಸಾಧ್ಯವಿಲ್ಲ. ಭಯವಾಗುತ್ತದೆ. ಆದರೆ ಆನೆಗಳ ಒಡನಾಟದಲ್ಲಿರುವ ಅವರು ಅವುಗಳಿಗೆ ಒಗ್ಗಿಕೊಂಡಿದ್ದು ಅವುಗಳ ಭಾವನೆಗಳನ್ನರಿತಿದ್ದಾರೆ. ಹೀಗಾಗಿ ಸುಸೂತ್ರವಾಗಿ ಪೂಜೆಯನ್ನು ನೆರವೇರಿಸುತ್ತಾ ಬಂದಿದ್ದಾರೆ.

ಮೈಸೂರು ದಸರಾ ಸಿದ್ಧತೆಗಳು ಆರಂಭವಾಗುವುದೇ ಗಜಪಯಣದ ಮೂಲಕ ಎಂದರೆ ತಪ್ಪಾಗುವುದಿಲ್ಲ. ವೀರನಹೊಸಹಳ್ಳಿಯಲ್ಲಿ ಗಜಪಡೆಯ ಮೊದಲ ತಂಡಕ್ಕೆ ಅಂದರೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡಗಳಿಗೆ ಶಾಸ್ತ್ರೋಕ್ತವಾಗಿ ನಿಗದಿತ ಶುಭ ಮಹೂರ್ತದಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತದೆ. ಈ ಸಂದರ್ಭ ಗಜಪಡೆಗಳಿಗೆ ಪೂಜೆ ಸಲ್ಲಿಸುವ ಮೂಲಕ ದಸರಾ ಪೂಜಾ ಕೈಂಕರ್ಯಗಳನ್ನು ಪುರೋಹಿತರಾದ ಪ್ರಹ್ಲಾದ್ ರಾವ್ ಆರಂಭಿಸುತ್ತಾರೆ.
26 ವರ್ಷಗಳಿಂದ ಪೂಜೆ ಸಲ್ಲಿಸುತ್ತಿರುವ ಅರ್ಚಕರು
ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಿ ಸ್ವಲ್ಪ ದೂರಗಳ ತನಕ ಗಜಪಯಣ ನಡೆಯುತ್ತದೆ. ಆ ನಂತರ ಅವುಗಳನ್ನು ಲಾರಿಯಲ್ಲಿ ಕರೆತಂದು ನಗರದ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಲು ಅವಕಾಶ ಮಾಡಿಕೊಡಲಾಗುತ್ತದೆ. ತದನಂತರ ಅರಣ್ಯಭವನದಿಂದ ಅರಮನೆ ತನಕ ಮೆರವಣಿಗೆಯಲ್ಲಿ ಸಾಗಿ ಅರಮನೆಯ ಜಯಮಾರ್ತಾಂಡ ದ್ವಾರದ ಮೂಲಕ ಸ್ವಾಗತಿಸಲಾಗುತ್ತದೆ.
ಈ ಸಂದರ್ಭ ಅರಮನೆ ಪುರೋಹಿತರಾದ ಪ್ರಹ್ಲಾದ್ ರಾವ್ ಅವರು ಆನೆಗಳ ಪಾದ ತೊಳೆದು, ಕುಂಕುಮ, ಅರಿಸಿಣ ಹಚ್ಚಿ, ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯ, ಎಲೆ, ಅಡಿಕೆಗಳನ್ನು ಇಟ್ಟು ಪೂಜೆ ಸಲ್ಲಿಸುತ್ತಾರೆ. ಅಲ್ಲಿಂದ ಪ್ರತಿದಿನವೂ ಗಜಪಡೆಗೆ ಪೂಜೆ ಸಲ್ಲಿಸುತ್ತಾರೆ.

ತಾಲೀಮು ಆರಂಭಕ್ಕೂ ಮುನ್ನ ಹಾಗೆಯೇ ಭಾರದ ತಾಲೀಮು, ಮರದ ಅಂಬಾರಿ ಹೊರುವ ಸಂದರ್ಭ, ಗಣೇಶ ಚತುರ್ಥಿ, ಅಮಾವಾಸ್ಯೆಗೆ, ಆಯುಧಪೂಜೆಗೆ, ಜಂಬೂಸವಾರಿಗೆ ಹೀಗೆ ಪೂಜೆ ನಡೆಯುತ್ತದೆ. ನವರಾತ್ರಿ ವೇಳೆ ಪಟ್ಟದ ಆನೆಯ ಪೂಜೆ ಹೀಗೆ ಎಲ್ಲವನ್ನು ಪ್ರಹ್ಲಾದ್ ರಾವ್ ಅವರು ನೆರವೇರಿಸುತ್ತಾರೆ. ಕಳೆದ ಇಪ್ಪತ್ತಾರು ವರ್ಷಗಳಿಂದ ಗಜಪಡೆಗೆ ಪೂಜೆ ಸಲ್ಲಿಸುತ್ತಾ ಬರುತ್ತಿದ್ದು ಅದನ್ನು ಶ್ರದ್ಧಾಪೂರ್ವಕವಾಗಿ ಮಾಡುತ್ತಾ ಬರುತ್ತಿದ್ದಾರೆ.
ಗಜಪಡೆಗಳ ಒಡನಾಟದಲ್ಲಿ ಪ್ರಹ್ಲಾದ್ ರಾವ್
ದಸರಾ ಜಂಬೂಸವಾರಿ ಯಶಸ್ವಿಯಾಗಿ ನಡೆಯಬೇಕೆಂದರೆ ಅದರ ಹಿಂದೆ ಹಲವರ ಶ್ರಮವಿದ್ದು ಅದರಲ್ಲಿ ಪುರೋಹಿತ ಪ್ರಹ್ಲಾದ್ ರಾವ್ ಅವರ ಶ್ರಮವಿರುವುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅವರ ಈ ಕಾರ್ಯವನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಮೇಲ್ನೋಟಕ್ಕೆ ಗಜಪಡೆಗಳಿಗೆ ಪೂಜೆ ಮಾಡುವುದರಲ್ಲೇನಿದೆ? ಎಂಬ ಭಾವ ಮೂಡಬಹುದು.
ಆದರೆ ನಾಡಿನ ಜನತೆಗೆ ಸುಖ ಶಾಂತಿ ಸಮೃದ್ಧಿ ಸಿಗಲೆಂದು ನಾಡದೇವತೆಯಲ್ಲಿ ಪ್ರಾರ್ಥನೆ ಸಂಕಲ್ಪಿಸಿ ಪ್ರತಿದಿನ ನವರಾತ್ರಿಯಲ್ಲಿ ಆನೆಗೆ ಪೂಜೆ ಮಾಡಿ, ನೈವೇದ್ಯ ಪ್ರಸಾದ ಕೊಟ್ಟು, ಜಂಬೂಸವಾರಿ ಹೊರಡುವ ಸಂದರ್ಭದಲ್ಲಿ ಅಂಬಾರಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವುದು ಮಹಾನ್ ಕಾರ್ಯವೇ
ಇನ್ನು ಪುರೋಹಿತ ಪ್ರಹ್ಲಾದ್ ರಾವ್ ಅವರು ಗಜಪಡೆಗಳೊಂದಿಗೆ ಒಡನಾಟ ಹೊಂದಿದ್ದರೂ ಈ ಹಿಂದೆ ಅಂಬಾರಿಯನ್ನು ಹೊರುತ್ತಿದ್ದ ಮತ್ತು ಕಾಡಾನೆ ದಾಳಿಗೆ ಒಳಗಾಗಿ ಸಾವನ್ನಪ್ಪಿದ ಅರ್ಜುನನೊಂದಿಗೆ ಹೆಚ್ಚಿನ ಒಡನಾಟ ಹೊಂದಿದ್ದರು. ಅದನ್ನು ನೆನಪಿಸಿಗೊಂಡಾಗ ಭಾವುಕರಾಗುತ್ತಾರೆ. ಬಹಳ ಬುದ್ಧಿವಂತ ಆನೆಯಾಗಿದ್ದ ಅರ್ಜುನ ಈ ಬಾರಿ ಜಂಬೂಸವಾರಿಯಲ್ಲಿಲ್ಲ ಎನ್ನುವ ನೋವಂತು ಅರ್ಚಕ ಪ್ರಹ್ಲಾದ್ ರಾವ್ ಮಾತ್ರವಲ್ಲ ಎಲ್ಲರನ್ನು ಕಾಡುತ್ತಿದೆ.
ಅರ್ಚಕರು ಆನೆಗಳ ಭಾಷೆ ಕಲಿತಿದ್ದೇಗೆ?
ಇದೆಲ್ಲದರ ನಡುವೆ ಸಾಕಾನೆಗಳ ನಡುವೆ ಪ್ರಹ್ಲಾದ್ ರಾವ್ ಅವರಿಗೆ ಒಡನಾಟ ಹೇಗೆ ಬೆಳೆಯಿತು? ಆನೆಗಳ ಭಾಷೆಗಳನ್ನು ಕಲಿತದ್ದು ಹೇಗೆ? ಆನೆಗಳಿಗೆ ಪೂಜೆ ಸಲ್ಲಿಸುವ ಕಾರ್ಯವನ್ನು ಏಕೆ ಆಯ್ಕೆ ಮಾಡಿಕೊಂಡರು? ಮುಂತಾದ ಪ್ರಶ್ನೆಗಳು ಎಲ್ಲರಲ್ಲಿ ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉತ್ತರವೂ ಇಲ್ಲದಿಲ್ಲ. ಕಾಡಿನ ಪ್ರದೇಶವಾದ ಎನ್. ಬೇಗೂರು ಗ್ರಾಮದಲ್ಲಿ ಪ್ರಹ್ಲಾದ್ ರಾವ್ ಅವರ ತಂದೆ ವಾಸುದೇವರಾವ್ ಅವರು ವಲಯ ಅರಣ್ಯಾಧಿಕಾರಿಯಾಗಿದ್ದರಂತೆ. ಹೀಗಾಗಿ ಕುಟುಂಬದವರಿಗೆ ಆನೆಗಳ ಒಡನಾಟ ಸಿಕ್ಕಿತಂತೆ.
ಈ ನಡುವೆ ಪ್ರಹ್ಲಾದ್ ರಾವ್ ಆನಗಳ ನಡುವೆ ಇರುತ್ತಿದ್ದರಿಂದ ಆನೆಗಳ ಭಾಷೆಗಳನ್ನು ಕಲಿತರಂತೆ ಹಾಗೆಯೇ ಅವುಗಳೊಂದಿಗೆ ಬಾಂಧವ್ಯವೂ ಬೆಳೆಯಿತಂತೆ. ಅವುಗಳೊಂದಿಗೆ ಆನೆಯ ಭಾಷೆಯಲ್ಲಿಯೇ ಮಾತನಾಡುವುದರಿಂದ ಅವು ಪ್ರೀತಿ ಮಮತೆ ತೋರಿಸುತ್ತವೆ. ಪೂಜಾಕೈಂಕರ್ಯ ಸಲ್ಲಿಸುವಾಗ ಮಂತ್ರಗಳನ್ನು ಹೇಳುವ ಸಂಧರ್ಭದಲ್ಲಿ ಆನೆಯ ಭಾಷೆಗಳ ಮೂಲಕ ಮಾತನಾಡಿಸಿದಾಗ ಗಜಪಡೆ ಬಹಳ ಶಾಂತಿಯಿಂದ ಭಕ್ತಿಪೂರ್ವಕವಾಗಿ ಭಾಗವಹಿಸುತ್ತವೆಯಂತೆ. ಹೀಗಾಗಿಯೇ ಆನೆಗಳಿಗೆ ಪೂಜೆ ಸಲ್ಲಿಸುವುದನ್ನು ಪುಣ್ಯಕಾರ್ಯವೆಂದು ನಂಬಿ ಅದನ್ನು ಮಾಡಿಕೊಂಡು ಬರುತ್ತಿದ್ದಾರೆ. ಅವರ ಕಾರ್ಯಕ್ಕೊಂದು ಸಲಾಂ.
-
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ












Click it and Unblock the Notifications