Dasara 2024: ಮೈಸೂರು ದಸರಾದಲ್ಲಿ ಗಮನಸೆಳೆದ ತ್ಯಾಜ್ಯ ನಿರ್ವಹಣಾ ಅಭಿಯಾನ: ಏನಿದರ ವಿಶೇಷ?
ಮೈಸೂರು, ಅಕ್ಟೋಬರ್ 17: ಕೋಕಾ-ಕೋಲಾ ಬಿವರೇಜಸ್ (ಹೆಚ್ಸಿಸಿಬಿ) ಕಂಪನಿಯು ಕೋಕಾ-ಕೋಲಾ ಇಂಡಿಯಾ ಫೌಂಡೇಶನ್ ಆನಂದನ ಸಂಸ್ಥೆ ಹಾಗೂ ಮೈಸೂರು ನಗರಪಾಲಿಕೆಯ ಜೊತೆಗೂಡಿ ಮೈಸೂರು ದಸರಾ ಸಂದರ್ಭದಲ್ಲಿ ಬಿದ್ದಿದ್ದ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಮಹತ್ತರ ಕೆಲಸ ಮಾಡಿ ಗಮನಸೆಳೆದಿದೆ.
ಅಕ್ಟೋಬರ್ 3 ರಿಂದ ಅಕ್ಟೋಬರ್ 12ರವರೆಗೆ ನಡೆದ 10 ದಿನಗಳ ಮೈಸೂರು ದಸರಾ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗದ ಸಾವಿರಾರು ಪ್ರವಾಸಿಗರು ಮತ್ತು ಭಕ್ತರು ಭಾಗವಹಿಸಿದ್ದರು. ಈ ಹಬ್ಬದ ಸಮಯದಲ್ಲಿಯೇ ಹೆಚ್ಸಿಸಿಬಿ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಯೋಜನೆ ಪ್ರಾರಂಭಿಸಿದ್ದು, ಈ ತ್ಯಾಜ್ಯ ನಿರ್ವಹಣಾ ಅಭಿಯಾನದಲ್ಲಿ 30ಕ್ಕೂ ಹೆಚ್ಚು ಸ್ವಯಂಸೇವಕರು ಸಕ್ರಿಯವಾಗಿ ಪಾಲ್ಗೊಂಡು ಶ್ಲಾಘನೀಯ ಕಾರ್ಯ ಮಾಡಿದ್ದಾರೆ.

ದಸರಾ ಹಬ್ಬದ ಪ್ರಯುಕ್ತ ಕಾರ್ಯಕ್ರಮ ನಡೆಯುವ ಪ್ರಮುಖ ಸ್ಥಳಗಳಾದ ಚಾಮುಂಡಿ ಬೆಟ್ಟ, ಆಹಾರ ಮೇಳ ಮತ್ತು ಇತರ ಪ್ರಧಾನ ಸ್ಥಳಗಳಲ್ಲಿ ಕಸ ಸಂಗ್ರಹಣಾ ತೊಟ್ಟಿಗಳನ್ನು ಇಡಲಾಗಿತ್ತು ಮತ್ತು ರೀಸೈಕ್ಲಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಈ ಮೂಲಕ ಖಾಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸಿ ಅದನ್ನು ಪ್ರತ್ಯೇಕಿಸಲು ಗೋದಾಮುಗಳಿಗೆ ಸಾಗಿಸಲಾಯಿತು. ಪ್ರತ್ಯೇಕಿಸಿದ ಬಳಿಕ ಅದನ್ನು ಪಿಇಟಿ ಬಾಟಲ್ ರೀಸೈಕ್ಲಿಂಗ್ ಪಾಲುದಾರ ಸಂಸ್ಥೆಗೆ ಸಾಗಿಸಲಾಯಿತು.
ಈ ಕುರಿತು ಮಾತನಾಡಿದ ಹೆಚ್ಸಿಸಿಬಿಯ ಚೀಫ್ ಪಬ್ಲಿಕ್ ಅಫೇರ್ಸ್ ಕಮ್ಯುನಿಕೇಷನ್ಸ್ ಆಂಡ್ ಸಸ್ಟೇನೇಬಿಲಿಟಿ ಆಫೀಸರ್ ಶ್ರೀ ಹಿಮಾಂಶು ಪ್ರಿಯದರ್ಶಿ, "ಮೈಸೂರು ದಸರಾ ಕೇವಲ ಹಬ್ಬ ಮಾತ್ರವೇ ಅಲ್ಲ, ಅದು ನಮ್ಮ ಸಾಂಸ್ಕೃತಿಕ ಪರಂಪರೆಯ ಸಂಭ್ರಮಾಚರಣೆ. ಭಕ್ತಿ, ಆಚರಣೆ ಮತ್ತು ಪರಿಸರ ಜವಾಬ್ದಾರಿ ಸಾರುವ ಮೂಲಕ ಸಮುದಾಯಗಳನ್ನು ಒಂದುಗೂಡಿಸುತ್ತದೆ. ಈ ಹಬ್ಬದಲ್ಲಿ ಪಿಇಟಿ ಬಾಟಲಿಗಳನ್ನು ಸಂಗ್ರಹಿಸುವ ಮತ್ತು ಅದನ್ನು ಮರುಬಳಕೆ ಮಾಡುವ ಮೂಲಕ ಆವರ್ಥ ಆರ್ಥಿಕತೆಗೆ ಕೊಡುಗೆ ನೀಡಿದ್ದೇವೆ. 'ಬಳಸಿದ ಪಿಇಟಿ ಬಾಟಲ್ ಮುಕ್ತ ದಸರಾ' ಯೋಜನೆಯು ತ್ಯಾಜ್ಯ ರಹಿತ ಜಗತ್ತನ್ನು ನಿರ್ಮಿಸುವ ಮತ್ತು ಪರಿಸರಕ್ಕೆ ಒಳಿತು ಮಾಡುವ ನಮ್ಮ ಬದ್ಧತೆಗೆ ಪುರಾವೆಯಾಗಿದೆ' ಎಂದು ಹೇಳಿದ್ದಾರೆ.
ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಸಸ್ಟೇನೇಬಿಲಿಟಿ ಆಂಡ್ ಸಿಎಸ್ಆರ್ ವಿಭಾಗದ ಹಿರಿಯ ನಿರ್ದೇಶಕ ರಾಜೇಶ್ ಆಯಪಿಳ್ಳ ಮಾತನಾಡಿ, 'ತ್ಯಾಜ್ಯ ರಹಿಕ ಜಗತ್ತು ಎಂಬ ಕಾರ್ಯತಂತ್ರವು ಕೋಕಾ-ಕೋಲಾದ ಪ್ರಮುಖ ಉದ್ದೇಶವಾಗಿದ್ದು, ಈ ಮೂಲಕ ನಾವು ಪ್ಯಾಕೇಜಿಂಗ್‌ಗೆ ಬಾಟಲ್‌ಗಳು ಮತ್ತು ಕ್ಯಾನ್‌ಗಳನ್ನು ಹೇಗೆ ವಿನ್ಯಾಸಗೊಳಿಸಲಾಗುತ್ತದೆ ಎಂಬುದರಿಂದ ಹಿಡಿದು ಅವು ಹೇಗೆ ರೀಸೈಕಲ್ ಆಗುತ್ತವೆ ಮತ್ತು ಹೇಗೆ ಮರುಬಳಕೆಗೆ ಒದಗುತ್ತವೆ ಎಂಬುದರ ಕಡೆಗೆ ಗಮನ ಹರಿಸಿದ್ದು, ಆವರ್ತ ಆರ್ಥಿಕತೆಯನ್ನು ಸಾಧಿಸಲು ಯತ್ನಿಸುತ್ತಿದ್ದೇವೆ ಎಂದರು.

ಇನ್ನು ನಮ್ಮ ಸಾಂಸ್ಕೃತಿಕ ಹಬ್ಬಗಳನ್ನು ಆಚರಿಸುವ ಸಂದರ್ಭದಲ್ಲಿ ಪರಿಸರ ಮತ್ತು ಜನರಿಗೆ ಒಳಿತಾಗುವ ನಿಟ್ಟಿನಲ್ಲಿ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಳ್ಳುವು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ಇಂಥಾ ಸಂದರ್ಭಗಳಲ್ಲಿ ಸ್ಥಳೀಯ ಸಂಸ್ಥೆಗಳ ಜೊತೆ ಪಾಲುದಾರಿಕೆ ಮಾಡಿಕೊಂಡು ತ್ಯಾಜ್ಯ ವಿಂಗಡಣೆ ಮತ್ತು ಜವಾಬ್ದಾರಿಯುತ ತ್ಯಾಜ್ಯ ವಿಲೇವಾರಿ ಕುರಿತು ಭಾಗವಹಿಸಿದವರಿಗೆ ಅರಿವು ಮೂಡಿಸುತ್ತಾ, ತ್ಯಾಜ್ಯ ಸಂಗ್ರಹಣೆ ವ್ಯವಸ್ಥೆ ರೂಪಿಸಲು ನಾವು ಸಹಾಯ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.
ಒಟ್ಟಾರೆ ದಸರಾ ಹಬ್ಬದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಎಸೆಯುವ ತ್ಯಾಜ್ಯಗಳನ್ನು ಸಂಗ್ರಹಿಸಿ ಅದನ್ನು ಸೂಕ್ತ ಸ್ಥಳಕ್ಕೆ ವಿಲೇವಾರಿ ಮಾಡುವ ಮೂಲಕ ಸ್ವಚ್ಛ ಮೈಸೂರನ್ನಾಗಿಸಲು ಶ್ರಮಿಸಿರುವುದು ಗಮನಾರ್ಹವಾಗಿದೆ. ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಿದ್ದೇ ಆದರೆ ನಿಜವಾಗಿಯೂ ಮೈಸೂರನ್ನು ಸ್ವಚ್ಛವಾಗಿಡಲು ಸಾಧ್ಯವಾಗಲಿದೆ.
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications