ದಸರಾಕ್ಕೆ ತೆರೆದುಕೊಳ್ಳುತ್ತಿರುವ ಮೈಸೂರು: ಈ ಕ್ಷಣಗಳು ಪ್ರವಾಸಿಗರಿಗೆ ಇಷ್ಟವಾಗುವುದೇಕೆ?
ಮೈಸೂರು, ಸೆಪ್ಟೆಂಬರ್ 11: ದಿನಕಳೆದಂತೆಲ್ಲ ಮೈಸೂರು ನಗರಕ್ಕೆ ದಸರಾ ಕಳೆ ಬರಲಾರಂಭಿಸಿದೆ. ಹೀಗಾಗಿ ನಗರದ ವ್ಯಾಪಾರಿಗಳು ಸೇರಿದಂತೆ ಆಟೋ, ಟ್ಯಾಕ್ಸಿ ಚಾಲಕರು, ಹೋಟೆಲ್ ಉದ್ಯಮಿಗಳು ಹೀಗೆ ಎಲ್ಲರೂ ಪ್ರವಾಸಿಗರ ನಿರೀಕ್ಷೆಯಲ್ಲಿದ್ದು, ಪ್ರವಾಸಿಗರು ಬಂದರೆ ವ್ಯಾಪಾರ ವಹಿವಾಟುಗಳು ಚೇತರಿಸಿಕೊಳ್ಳುವುದರೊಂದಿಗೆ ಆರ್ಥಿಕವಾಗಿ ಪ್ರಗತಿ ಕಾಣಬಹುದೆಂಬ ಬಯಕೆ ಎಲ್ಲರಲ್ಲಿಯೂ ಗರಿಗೆದರಿದೆ.
ದಸರಾ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಜತೆಗೆ ಪ್ರವಾಸಿ ತಾಣ ಸೇರಿದಂತೆ ನಗರದಾದ್ಯಂತ ಅಡ್ಡಾಡಿ ತಮಗೆ ಬೇಕಾದನ್ನು ಸವಿದು, ಒಂದಷ್ಟು ಪದಾರ್ಥಗಳನ್ನು ಖರೀದಿಸುತ್ತಾರೆ. ಹೀಗಾಗಿ ಎಲ್ಲರಿಗೂ ವ್ಯಾಪಾರವಾಗುತ್ತದೆ. ಸ್ಥಳೀಯವಾಗಿ ದೂರದಿಂದಲೂ ದಸರಾ ಸಮಯದಲ್ಲಿ ವ್ಯಾಪಾರ ಮಾಡಲೆಂದು ವ್ಯಾಪಾರಿಗಳು ಬರುತ್ತಾರೆ. ಎಲ್ಲರದೂ ಒಂದೇ ಉದ್ದೇಶ ದಸರಾದಲ್ಲಿ ಒಂದಿಷ್ಟು ಆದಾಯ ಮಾಡಿಕೊಳ್ಳುವುದಾಗಿದೆ. ಹೀಗೆ ಬೀದಿಯಿಂದ ಆರಂಭವಾಗಿ ದೊಡ್ಡ ಮಟ್ಟದವರೆಗೂ ದಸರಾ ಲಾಭ ತಂದುಕೊಡುತ್ತದೆ.

ಇತರೆ ದಿನಗಳಿಗೆ ಹೋಲಿಸಿದರೆ ದಸರಾ ಸಮಯದಲ್ಲಿ ಮೈಸೂರಿಗೆ ಬಂದರೆ ಅದೊಂಥರಾ ಖುಷಿ ಕೊಡುತ್ತದೆ. ನಗರದ ಪ್ರತಿ ಬೀದಿಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಎಲ್ಲರೂ ದಸರಾವನ್ನು ಸ್ವಾಗತಿಸುವ ಸಡಗರದಲ್ಲಿರುತ್ತಾರೆ. ಹಗಲೆಲ್ಲ ದೂರದಿಂದ ಬಂದಿರುವ ಪ್ರವಾಸಿಗರು ಕಾಣಿಸಿದರೆ, ರಾತ್ರಿಯಾಯಿತೆಂದರೆ ನಗರದ ಜನ ತಮ್ಮ ಮನೆಗಳಿಂದ ಕುಟುಂಬದೊಂದಿಗೆ ಹೊರ ಬಂದು ಎಲ್ಲೆಂದರಲ್ಲಿ ಅಡ್ಡಾಡಿಕೊಂಡು ಖುಷಿಪಡುತ್ತಾರೆ. ಇಂತಹದೊಂದು ಸಂಭ್ರಮವನ್ನು ಬಹುಶಃ ಮೈಸೂರು ಬಿಟ್ಟರೆ ಬೇರೆಲ್ಲೂ ನೋಡಲು ಸಾಧ್ಯವಿಲ್ಲವೇನೋ?
ಹಲವು ಪ್ರಥಮಗಳಿಗೆ ಸಾಕ್ಷಿಯಾದ ಮೈಸೂರು
ಇನ್ನು ಪ್ರವಾಸಿಗರು ಮೈಸೂರನ್ನು ಇಷ್ಟಪಡಲು ಹಲವು ಕಾರಣಗಳಿವೆ. ಏಕೆಂದರೆ ಇದು ಜಗತ್ತಿನ ಸುಂದರ ನಗರಗಳಲ್ಲೊಂದಾಗಿದೆ. ಹಿಂದಿನಿಂದಲೂ ನತನ್ನದೇ ಆದ ವಿಶೇಷತೆಗಳಿಂದ ದೇಶ ವಿದೇಶಗಳ ಜನರ ದೃಷ್ಠಿ ಇತ್ತ ನೆಡುವಂತೆ ಮಾಡಿದೆ. ಅಷ್ಟೇ ಅಲ್ಲದೆ ತನ್ನದೇ ಮಹತ್ವದೊಂದಿಗೆ ಸಾಂಸ್ಕೃತಿಕ ನಗರಿ, ಅರಮನೆಗಳ ನಗರಿ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಹೀಗೆ ವಿವಿಧ ಹೆಸರುಗಳಿಂದಲೂ ಕರೆಯಿಸಿಕೊಂಡು ದೇಶ ವಿದೇಶಗಳ ಹಲವು ಪ್ರಥಮಗಳಿಗೂ ಸಾಕ್ಷಿಯಾಗಿ ನಿಂತಿದೆ. ಭೌಗೋಳಿಕ ವಿಶೇಷತೆಗಳಿಂದಲೂ ಗಮನಸೆಳೆಯುತ್ತಿದೆ.

ಇತಿಹಾಸದ ಪುಟಗಳನ್ನು ತಿರುವುತ್ತಾ ಹೋದರೆ ಮೈಸೂರಿನ ಹಿರಿಮೆ, ಗರಿಮೆಗಳೆಲ್ಲವೂ ಒಂದೊಂದಾಗಿ ನಮ್ಮ ಮುಂದೆ ಹಾದು ಹೋಗುತ್ತದೆ. ಮೈಸೂರು ಸಂಸ್ಥಾನವನ್ನು. 1399 ರಿಂದ 1950ರವರೆಗೆ ಸುಮಾರು 550 ವರ್ಷಗಳ ಕಾಲ 25ಮಂದಿ ಮಹಾರಾಜರು ಆಳಿದ್ದಾರೆ. ಆ ಮೂಲಕ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಹೀಗೆ ಆಳ್ವಿಕೆ ನಡೆಸಿದ ಮಹಾರಾಜರಲ್ಲಿ ಅನೇಕರು ಮೇಧಾವಿಗಳೂ, ಶೂರರೂ, ಸ್ವತಃ ಸಾಹಿತಿಗಳೂ, ಕವಿಗಳು, ದೇಶಭಕ್ತರೂ, ಆಡಳಿತದಲ್ಲಿ ಮಹಾದಕ್ಷರೂ ಆಗಿದ್ದರು
ಮೈಸೂರು ಹೆಸರು ಬಂದಿದ್ದೇಗೆ?
ಇದರಿಂದಲೇ ಕಲೆ, ಸಂಸ್ಕೃತಿ ಉಳಿದು ಬೆಳೆದಿದ್ದು ಐತಿಹಾಸಿಕ ದಸರಾವನ್ನು ನೋಡುವಂತಾಗಿದೆ. ಕೇವಲ ಪಾಳೇಗಾರ ಮಟ್ಟದಲ್ಲಿದ್ದ ಮೈಸೂರನ್ನು ತಮ್ಮ ಧೈರ್ಯ ಪರಾಕ್ರಮಗಳಿಂದ ರಾಜ್ಯಮಟ್ಟಕ್ಕೆ ಕೊಂಡೊಯ್ದು ಇಡೀ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಕೀರ್ತಿಯನ್ನು ಬೆಳಗಿಸಿದ್ದು ಇಲ್ಲಿನ ಮಹಾರಾಜರ ಸಾಧನೆಯಾಗಿದೆ. ಇದೆಲ್ಲದರ ನಡುವೆ ಈಗಿನ "ಮೈಸೂರು" ಎಂಬ ಹೆಸರು ಹೇಗೆ ಬಂತು ಎಂಬುವುದನ್ನು ನಾವು ನೋಡಿದರೆ ಪುರಾಣದ ಕಥೆಯೊಂದು ಬಿಚ್ಚಿಕೊಳ್ಳುತ್ತದೆ.

ಪೌರಾಣಿಕ ಯುಗದಲ್ಲಿ ಮಹಿಷಾಸುರನೆಂಬ ಅಸುರ ಇಲ್ಲಿದ್ದನೆಂದೂ ಆತ ತನ್ನ ತಪಸ್ಸಿನ ಮೂಲಕ ಶಿವನಿಂದ ಅಧಿಕ ಶಕ್ತಿಯನ್ನು ಪಡೆದಿದ್ದನಂತೆ. ಹೀಗಾಗಿ ದೇವತೆಗಳು ಸೇರಿದಂತೆ ಜನರನ್ನು ವಿವಿಧ ರೀತಿಯ ತೊಂದರೆ ನೀಡಿ ಹಿಂಸಿಸುತ್ತಿದ್ದನಂತೆ. ಈತನ ಉಪಟಳ ತಾಳಲಾರದೆ ಜನರು ಶ್ರೀ ಚಾಮುಂಡೇಶ್ವರಿಯಲ್ಲಿ ಮೊರೆಯಿಟ್ಟರಂತೆ ಆಗ ಚಾಮುಂಡೇಶ್ವರಿ ಮಹಿಷಾಸುರನೊಂದಿಗೆ ಯುದ್ದ ಮಾಡಿದಳಂತೆ. ಆದರೆ ಯುದ್ದದ ಸಮಯದಲ್ಲಿ ಆತನ ದೇಹದಿಂದ ಒಂದು ತೊಟ್ಟು ರಕ್ತ ಬಿದ್ದರೂ ಆ ನೆಲದಿಂದ ಸಹಸ್ರ ರಕ್ಷಸರು ಹುಟ್ಟುತ್ತಿದ್ದರಂತೆ.
ಹಳೆಯ ಶಾಸನ ಹೇಳುವುದೇನು ಗೊತ್ತಾ?
ಮಹಿಷಾಸುರನ ಈ ಶಕ್ತಿಯನ್ನು ತಿಳಿದ ಚಾಮುಂಡೇಶ್ವರಿಯ ಸಹೋದರಿ ಉತ್ತನಳಮ್ಮ ತನ್ನ ವಿಶಾಲವಾದ ನಾಲಿಗೆಯನ್ನು ಚಾಚಿ ಆತನ ರಕ್ತ ನೆಲಕ್ಕೆ ಬೀಳದಂತೆ ನೋಡಿಕೊಂಡಳಂತೆ. ಆ ಸಂದರ್ಭ ಚಾಮುಂಡೇಶ್ವರಿ ಉಗ್ರರೂಪ ತಾಳಿ ಮಹಿಷಾಸುರನನ್ನು ಸಂಹರಿದಳಂತೆ. ಮಹಿಷಾಸುರ ನೆಲೆಸಿದ ಊರು "ಮಹಿಷೂರು" ಆಯಿತೆಂದೂ ಕ್ರಮೇಣ ಬಾಯಿಯಿಂದ ಬಾಯಿಗೆ ಮೈಸೂರಾಗಿ ಬದಲಾಯಿತೆಂದು ಹೇಳಲಾಗುತ್ತಿದೆ. ಹತ್ತನೇ ಶತಮಾನದಿಂದಲೂ ಮೈಸೂರು ಎಂದೇ ಕರೆಯುತ್ತಾ ಬರಲಾಗಿದೆ. ಮೈಸೂರು ನಗರ ಮತ್ತು ಸುತ್ತಮುತ್ತ ದೊರೆತ ಹಳೆಯ ಶಾಸನಗಳ ಪ್ರಕಾರ ಮೈಸೂರು ಸುಮಾರು 70 ಹಳ್ಳಿಗಳಿಂದ ಕೂಡಿ "ಮೈಸೂರು ನಾಡು" ಎಂದು ಕರೆಯಲ್ಪಡುತ್ತಿತ್ತು ಎಂದು ಹೇಳಲಾಗಿದೆ.

ಹಾಗೆನೋಡಿದರೆ ಮೈಸೂರು ಬೆಟ್ಟ, ಅರಮನೆ, ಸುಂದರ ಉದ್ಯಾನವನ, ಕೆರೆ, ಪಾರಂಪರಿಕ ಕಟ್ಟಡಗಳಿಂದ ಹಾಗೂ ದೊಡ್ಡ ದೊಡ್ಡ ರಸ್ತೆಗಳಿಂದ ಕೂಡಿದ ಸುಂದರ ನಗರವಾಗಿದೆ. ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲಿ ಇಲ್ಲವಾದರೂ ಉತ್ತಮ ವ್ಯಾಪಾರ ಕೇಂದ್ರವಾಗಿದೆ. ಜೊತೆಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಕಾಲೇಜುಗಳು ಇಲ್ಲಿವೆ. ಸಮುದ್ರಮಟ್ಟದಿಂದ ಸುಮಾರು 2525ಅಡಿ ಎತ್ತರದಲ್ಲಿದ್ದು, ಬೇಸಿಗೆಯಲ್ಲಿ ಹೆಚ್ಚು ಸೆಖೆಯೂ ಇಲ್ಲದೆ, ಚಳಿಗಾಲದಲ್ಲಿ ಹೆಚ್ಚು ಚಳಿಯೂ ಇಲ್ಲದೆ ಆಹ್ಲಾದಕರ ವಾತಾವರಣದಿಂದ ಕೂಡಿರುತ್ತದೆ. ಹೀಗಾಗಿ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರು ಇತ್ತ ದೌಡಾಯಿಸುತ್ತಾರೆ.
ಪ್ರವಾಸಿಗರಿಗೆ ಮೈಸೂರು ಸ್ವರ್ಗ
ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ, ಸುಂದರ ಬೃಂದಾವನದ ಕೃಷ್ಣರಾಜಸಾಗರ ಜಲಾಶಯ, ಮೃಗಾಲಯ, ಚಾಮುಂಡಿಬೆಟ್ಟ, ಸುಂದರ ಕೆರೆಗಳಲ್ಲದೆ, ವಿವಿಧ ಐತಿಹಾಸಿಕ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಪ್ರವಾಸಿ ತಾಣಗಳಾಗಿವೆ. ಮೈಸೂರಿಗೆ ಸುತ್ತಮುತ್ತ ಹಲವು ಪ್ರವಾಸಿ ತಾಣಗಳಿದ್ದು, ದೂರದಿಂದ ಬರುವ ಪ್ರವಾಸಿಗರಿಗೆ ಸ್ವರ್ಗವಾಗಿದೆ. ಮೈಸೂರು ಮಸಾಲೆ, ಮೈಸೂರು ಪಾಕ, ಮೈಸೂರು ಮಲ್ಲಿಗೆ, ಮೈಸೂರು ಪೇಟ, ಮೈಸೂರು ವೀಳ್ಯದೆಲೆ ಎಲ್ಲವೂ ಮೈಸೂರಿನ ವಿಶೇಷತೆಗೆ ಸಾಕ್ಷಿಯಾಗಿವೆ.
ಒಟ್ಟಾರೆ ಹಲವು ವಿಶೇಷತೆಗಳನ್ನು ತನ್ನೊಳಗೆ ಹುದುಗಿಸಿಕೊಂಡು ದೇಶ, ವಿದೇಶಿಗರನ್ನು ಸೆಳೆಯುತ್ತಿರುವ ಮೈಸೂರು ಮುಂದೆ ಬರಲಿರುವ ದಸರಕ್ಕಾಗಿ ನಿಧಾನವಾಗಿ ಸಜ್ಜಾಗುತ್ತಿದೆ. ಒಂದೆಡೆ ಸರ್ಕಾರ ದಸರಾಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರೆ, ಜನಸಾಮಾನ್ಯರು ಕೂಡ ಬರಲಿರುವ ದಸರಾದಲ್ಲಿ ಸಂಭ್ರಮಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ದೂರದ ಪ್ರವಾಸಿಗರು ಈಗಿನಿಂದಲೇ ಹೋಟೆಲ್, ಲಾಡ್ಜ್ ಗಳಲ್ಲಿ ಕೊಠಡಿಗಳನ್ನು ಕಾದಿರಿಸಿಕೊಳ್ಳುತ್ತಿದ್ದಾರೆ. ದಿನಕಳೆದಂತೆಲ್ಲ ಮೈಸೂರಿನ ದಸರಾ ರಂಗು ಹೆಚ್ಚುತ್ತಾ ಹೋಗಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
-
ಮಾರ್ಚ್ 19ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಔಷಧಿ ಪೂರೈಸುವ ಕೆಸ್ಎಂಸಿಎಲ್ಗೆ ಐಎಎಸ್ ಅಧಿಕಾರಿ ಮುಖ್ಯಸ್ಥ, ಇ-ಔಷಧಿ ಸಾಫ್ಟವೇರ್ ಜಾರಿ: ದಿನೇಶ್ ಗುಂಡೂರಾವ್ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Ugadi 2026: ಹಬ್ಬದ ಕಳೆ ಹೆಚ್ಚಿಸುವ ಸುಂದರ ರಂಗೋಲಿಗಳು; ಸರಳ, ಚುಕ್ಕಿ ಹಾಗೂ ಬಣ್ಣದ ರಂಗೋಲಿ ಐಡಿಯಾ ಇಲ್ಲಿದೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್












Click it and Unblock the Notifications