Get Updates
Get notified of breaking news, exclusive insights, and must-see stories!

Mysuru dasara 2023: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ನಾದಬ್ರಹ್ಮ ಹಂಸಲೇಖ ವಿಧ್ಯುಕ್ತ ಚಾಲನೆ

ಮೈಸೂರು, ಅಕ್ಟೋಬರ್‌, 15: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಭಾನುವಾರ (ಅಕ್ಟೋಬರ್‌) ವಿಧ್ಯುಕ್ತ ಚಾಲನೆ ನೀಡಿದರು.

ದಸರಾ ಮಹೋತ್ಸವ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಹಬ್ಬದ ವಾತಾವರಣ ನಿರ್ಮಾವಾಗಿತ್ತು. ರಸ್ತೆಗಳ ತುಂಬಾ ರಂಗೋಲಿಗಳ ಚಿತ್ತಾರ ಆಕರ್ಷಕವಾಗಿತ್ತು. ವೀರಗಾಸೆ, ಡೊಳ್ಳು, ಕಂಸಾಲೆ ಹಾಗೂ ನಗಾರಿ ಕಲಾತಂಡಗಳು ಹಂಸಲೇಖ ಅವರನ್ನು ಬರಮಾಡಿಕೊಂಡರು. ಬೆಳಗ್ಗೆ 10.15ರಿಂದ 10.36ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ತಾಯಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ ಹತ್ತು ದಿನಗಳ ನಾಡಹಬ್ಬಕ್ಕೆ ಚಾಲನೆ ನೀಡಿದರು.

Mysuru dasara 2023: Music director Hamsalekha inaugurate Dasara

ಈ ವೇಳೆ ಹಂಸಲೇಖ ಅವರಿಗೆ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೇಯರ್ ಶಿವಕುಮಾರ್, ಸಂಸದ ಪ್ರತಾಪಸಿಂಹ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶದ, ಇಂಧನ ಸಚಿವ ಕೆ.ಜೆ.ಜಾರ್ಚ್ ಸೇರಿದಂತೆ ಇತರ ಸಚಿವರು ಹಾಗೂ ಶಾಸಕರು ಸಾಥ್ ನೀಡಿದರು.

ನಾದಬ್ರಹ್ಮ ಹಂಸಲೇಖ ಪೂಜ್ಯ‌ ಕನ್ನಡಿಗರಿಗೆ ಎನ್ನುತ್ತಲೇ ಮಾತು ಶುರು ಮಾಡಿದರು. ಕರ್ನಾಟಕದ ಏಕೀಕರಣಕ್ಕೆ ಇದೀಗ 50 ವರ್ಷ ತುಂಬಿದೆ. ನನ್ನ ಕಲಾ ಕಾಯಕಕ್ಕೂ 50 ವರ್ಷ ತುಂಬಿದೆ. ಇಂದು ನನಗೆ ಸಿಕ್ಕಿರುವ ಈ ಅವಕಾಶ ಬಹಳ ಬೆಲೆ ಬಾಳುವಂತದ್ದು. ಸಾವಿರ ಮೆಟ್ಟಿಲು ಹತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಈ ಬೆಟ್ಟ, ಈ ಹಬ್ಬ, ಈ ದೀಪ ಹಚ್ಚೋದು ಪುಣ್ಯದ ಕೆಲಸ. ಈ ಸಂಭ್ರಮಕ್ಕೆ ನಾನು ಯಾರನ್ನು ನೆನೆಯಲಿ ಎಂದು ತಿಳಿಸಿದರು.

ನಾನು ಹಚ್ಚಿದ್ದು ಕನ್ನಡದ ದೀಪ. ಈ ದೀಪ ಹಚ್ಚಲು ನನಗೆ ಇಡೀ ನಾಡಿನ ಆಶಯ ಇದೆ. ದಸರಾ ಒಂದು ಜೀವಂತ ಮಹಾಕಾವ್ಯ. ವೀರತೆಂಕಣದ ಮಹಾಕಾವ್ಯ ಇದು. ಕನ್ಮಡ ನಮ್ಮ ಶೃತಿ ಆಗಬೇಕು. ಆಳಿದರೆ ಕೃತಿಯಂತಿರಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಅದರ ಭಾವಕ್ಕೆ ಎಲ್ಲಿ ಮಿತಿ ಇದೆ. ದೆಹಲಿ ನಮಗೆ ಬೇಕು. ದೆಹಲಿಗೂ ಕನ್ನಡ ಬೇಕು ಎಂದರು.

ಆದರೆ, ದೆಹಲಿಗೆ ಯಾಕೋ ಕನ್ನಡ ಬೇಡವಾಗಿದೆ. ಕನ್ನಡ ವಿಶ್ವಭಾಷೆ ಆಗಬೇಕು. ಅಭಿವೃದ್ಧಿ ಶಾಂತಿಮಂತ್ರ ಒಂದಂಶದ ಕಾರ್ಯಕ್ರಮ ಆಗಬೇಕು. ಹೊರ ರಾಜ್ಯದ ಕಾರ್ಪೋರೇಟ್ ಕಂಪನಿಯ ನೌಕರರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿಸುವ ಪುಸ್ತಕ ಹೊರಬರಬೇಕೆಂದು ತಿಳಿಸಿದರು.

ಮಂಗಳೂರು ಮೈಸೂರು ಜೋಡಿ ಜಿಲ್ಲೆ ಆಗಬೇಕು. ಈ ಎರಡು ಜಿಲ್ಲೆಯಲ್ಲಿ ಅಪಾರ ಸಾಂಸ್ಕೃತಿಕ ಕಣಜವಿದೆ. ವ್ಯಾಪಾರ-ವಿನಿಮಯ ಆಗಬೇಕು. ಎಲ್ಲಾ ಜಿಲ್ಲೆಗಳನ್ನು ಎರಡು ಜಿಲ್ಲೆಯಾಗಿ ಜೋಡಿಸಬೇಕಿದೆ. ಕೃಷಿಕರು-ಕಾರ್ಪೋರೇಟರ್ ಒಂದಾಗಿ ಸಾಗಬೇಕು. ಕನ್ನಡದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಬದ್ಧರಾಗೋಣ. ಮಗುವಿಗೆ ಕನ್ನಡವನ್ನು ತಾಯಿ ಕಲಿಸಬೇಕು. ಮನುಜ ಮತ ವಿಶ್ವ ಪಥ ಎಲ್ಲೆಡೆ ಪರಿಸಬೇಕು. ಶಾಂತಿಮಂತ್ರವನ್ನು ನಾವೆಲ್ಲರೂ ಮಾಡೋಣ ಎಂದರು.

9ನೇ ಬಾರಿ ಯದುವೀರ್ ಖಾಸಗಿ ದರ್ಬಾರ್

ದಸರಾ ಮಹೋತ್ಸವಕ್ಕೆ‌ ಚಾಲನೆ ನೀಡುತ್ತಿದ್ದಂತೆ ಇತ್ತ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರು ನಡೆಸಿದರು. ಪತ್ನಿ ತ್ರಿಷಿಕಾ ಕುಮಾರಿ, ಮಗ ಆದ್ಯವೀರ್ ಜತೆಗೂಡಿ ಸಂಪ್ರದಾಯದಂತೆ ಕಂಕಣ ತೊಡಿಸಿದರು. ಬಳಿಕ ಪಾದಪೂಜೆ ನಡೆಯಲಿದೆ. ನಂತರ ಸಿಂಹಾಸನದಲ್ಲಿ ಯದುವೀರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಬಿಗಿ ಪೊಲೀಸ್ ಭದ್ರತೆ

ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಬಿಗಿ ಪೊಲೀಸ್ ಭದ್ರತೆ ಹಮ್ಮಿಕೊಳ್ಳಲಾಗಿತ್ತು. 10 ದಿನಗಳ ಭದ್ರತೆಗಾಗಿ 7 ಸಾವಿರ ಮಂದಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳೀಯವಾಗಿ 2,500 ಮಂದಿ ಪೊಲೀಸರ ನಿಯೋಜನೆಯೊಂದಿಗೆ ನೆರೆ ಜಿಲ್ಲೆಗಳಿಂದ 4,500 ಮಂದಿ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಒಟ್ಟು 7 ಸಾವಿರ ಮಂದಿ ಪೊಲೀಸರು ದಸರಾ ಭದ್ರತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಮೊದಲ ದಿನ ಏನೆಲ್ಲಾ ಉದ್ಘಾಟನೆ?

ಕಲಾಮಂದಿರದಲ್ಲಿ ದಸರಾ ಚಲನ ಚಿತ್ರೋತ್ಸವ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳ, ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಸೆನೆಟ್ ಭವನದಲ್ಲಿ ಯೋಗ ದಸರಾ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿ, ಸಯ್ಯಾಜಿರಾವ್ ರಸ್ತೆ ಬಳಿ ವಿದ್ಯುತ್ ದೀಪಾಲಂಕಾರ, ವಸ್ತು ಪ್ರದರ್ಶನ, ಅಖಿಲ ಭಾರತ ಹಾಗೂ ರಾಜ್ಯಮಟ್ಟದ ಚಿತ್ರ ಶಿಲ್ಪ ಕಲಾ ದರ್ಶನಕ್ಕೆ ಚಾಲನೆ ಸಿಗಲಿದೆ. ಅರಮನೆ ಆವರಣದಲ್ಲಿ ಸಂಜೆ 7 ಗಂಟೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಜನಮನ್ನಣೆಗಳಿಸಿರುವ ಡಾ.ಪದ್ಮಮೂರ್ತಿ ಅವರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+