ರಾಮದಾಸ್ ಪ್ರೇಮ ಪ್ರಕರಣದ ಪ್ರೇಮಕುಮಾರಿಗೆ ಬಿದ್ದ ಮತಗಳೆಷ್ಟು ಗೊತ್ತಾ?

ಮೈಸೂರು, ಸೆ 4: ಮೈಸೂರು ನಗರ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರಾಮದಾಸ್ ಜೊತೆಗಿನ ಪ್ರೇಮ ಪ್ರಕರಣದಿಂದ ಸುದ್ದಿಯಾಗಿದ್ದ ಪ್ರೇಮಕುಮಾರಿ, ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಕೃಷ್ಣರಾಜ ನಗರ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಾರ್ಡ್ ಸಂಖ್ಯೆ 57ರಿಂದ ( ಕುವೆಂಪುನಗರ - ಎಂ ಬ್ಲಾಕ್) ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರೇಮಕುಮಾರಿ, ಅತ್ಯಂತ ಹೀನಾಯವಾಗಿ ಮುಖಭಂಗ ಅನುಭವಿಸಿದ್ದಾರೆ.

ಈ ವಾರ್ಡಿನಿಂದ ಬಿಜೆಪಿಯ ಎಂ ಸಿ ರಮೇಶ್ ಜಯಗಳಿಸಿದ್ದಾರೆ. ಪ್ರೇಮಕುಮಾರಿಗೆ ಬಿದ್ದ ಮತ ಕೇವಲ ಹದಿನಾರು!! ತನ್ನ ವೋಟ್ ಅನ್ನು ಸೇರಿಸಿಕೊಂಡರೆ, ಇನ್ನು ಹದಿನೈದು ಮತದಾರ ಪ್ರೇಮಕುಮಾರಿ ಪರವಾಗಿ ಮತ ಚಲಾಯಿಸಿದ್ದಾನೆ.

Mysuru City Corporation election 2018: Independent candidate Prema Kumari got just 16 votes

ನನಗೆ ಅವರು ಬೇಕು, ನಾನು ಅವರ ಜೊತೆ ಬಾಳಬೇಕು, ನಾನೇನು ಕೀಳು ಜಾತಿಯವಳಲ್ಲ ಎಂದು ಬಿಜೆಪಿ ಶಾಸಕ ರಾಮದಾಸ್ ಕಚೇರಿಯ ಮುಂದೆ ಪ್ರತಿಭಟನೆ ಮಾಡಿದ್ದ ಪ್ರೇಮಕುಮಾರಿ, ಎರಡು ತಿಂಗಳ ಕೆಳಗೆ, ಶಾಸಕರ ಕಚೇರಿಯ ಮುಂದೆ ರಂಪ ರಾಮಾಯಣ ಮಾಡಿದ್ದರು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ರಾಮದಾಸ್ ವಿರುದ್ದ ಸ್ಪರ್ಧಿಸುವುದಾಗಿ ಹೇಳಿ, ಕೊನೆಗೆ ತಮ್ಮ ನಿರ್ಧಾರವನ್ನು ಪ್ರೇಮಕುಮಾರಿ ಬದಲಿಸಿದ್ದರು. ಕಳೆದ ಜುಲೈ ತಿಂಗಳಲ್ಲಿ ಪ್ರೇಮಕುಮಾರಿ ಮಾಡಿದ್ದ ರಂಪಾಟ ಅಂತಿಂದಲ್ಲ.

ನೆರೆದಿದ್ದ ಎಲ್ಲ ಜನರ ಮುಂದೆ ನೆಲದ ಮೇಲೆ ಬಿದ್ದು ಒದ್ದಾಡಿ, ಗೋಳಾಡಿ, ಹೆಗಲ ಮೇಲಿದ್ದ ವೇಲನ್ನು ಕುತ್ತಿಗೆ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇಮಕುಮಾರಿ ಮುಂದಾಗಿದ್ದರು. ನಾನು ಸಾಯಬೇಕು, ಬಿಡಿ ನನ್ನ ಎಂದು ಚೀರಾಡಿ ಅತ್ತುಕರೆದು ನೆರೆದವರಿಗೆಲ್ಲ ರಂಜನೆ ನೀಡಿದ್ದರು. ಇಲ್ಯಾಕೆ ಸಾಯ್ತಿಯಮ್ಮ, ಮನೆಗೆ ಹೋಗಿ ಸಾಯಿ ಎಂದು ಕೆಲವರು ಹೇಳಿದರೂ, ಇಲ್ಲ ಇಲ್ಲೇ ಸಾಯ್ತೀನಿ ಎಂದು ಪ್ರೇಮಕುಮಾರಿ ಹಠ ಹಿಡಿದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+