ಮೈಸೂರಲ್ಲಿ ನಾಗರಿಕರ ರೈಫಲ್ ಸಂಘ ಮತ್ತೆ ಆರಂಭ
ಮೈಸೂರು, ಫೆ. 10: ಮೈಸೂರಿನಲ್ಲಿರುವ ಹಲವು ಉದ್ಯಮಿಗಳು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರೂ ಬಳಸುವ ವಿಧಾನ ತಿಳಿದಿಲ್ಲ. ಆದ್ದರಿಂದ ಅವರಿಗಾಗಿ ಈ ತರಬೇತಿ ಶಿಬಿರ ಆಯೋಜಿಸಲಾಗಿದೆ. ನಾಗರಿಕರ ರೈಫಲ್ ಸಂಘ ಮೊದಲು ಕಾರ್ಯನಿರ್ವಹಿಸುತ್ತಿತ್ತು. ಆದರೆ, ನಂತರ ಕಾರ್ಯಚಟುವಟಿಕೆ ಸ್ಥಗಿತಗೊಂಡಿತ್ತು. ಜನರ ಒತ್ತಾಯದ ಮೇರೆಗೆ ಮತ್ತೆ ಸಂಘದ ಚಟುವಟಿಕೆ ಆರಂಭಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಕೋರಿದರು.
ಶಸ್ತ್ರಾಸ್ತ್ರಗಳ ಬಳಕೆ ಕುರಿತು ಪೊಲೀಸರು ತರಬೇತಿ ನೀಡುವರು. ಮುಂದಿನ ದಿನಗಳಲ್ಲಿ ಬಂದೂಕು ಪರವಾನಗಿ ನೀಡಲು ಸಂಘ ನೀಡುವ ತರಬೇತಿಯನ್ನೇ ಮಾನದಂಡ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. [ಜನನ, ಮರಣ ನೋಂದಣಿ ಆನ್ ಲೈನ್]

ಮೈಸೂರು ನಗರದಲ್ಲಿರುವ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಮೈಸೂರು ನಾಗರಿಕರ ರೈಫಲ್ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು. [ದಿ ಅದರ್ ಎಂಡ್ ಆಫ್ ದಿ ಕಾರಿಡಾರ್]
ಲ್ಲೆಯಲ್ಲಿ 8ರಿಂದ 10 ಸಾವಿರ ಜನರು ಅಪರಾಧ ಕೃತ್ಯದಲ್ಲಿ ತೊಡಗಿದ್ದಾರೆ. ಇಂತವರಿಂದ ಸಮಾಜವನ್ನು ರಕ್ಷಿಸಲು ಪೊಲೀಸರಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಪೊಲೀಸರು ಅವಿರತ ಶ್ರಮಿಸುತ್ತಾರೆ. ಜನರ ಸಹಕಾರದಿಂದ ಮಾತ್ರ ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ.ಬಿ. ಗಣಪತಿ, ಶಸ್ತ್ರಾಸ್ತ್ರ ಬಳಸುವ ರೀತಿ ಅರಿಯುವುದು ಹಾಗೂ ಹೊಂದುವುದು ಅಷ್ಟೇ ಮುಖ್ಯ ವಿಷಯವಾಗಿದೆ. ಇಲ್ಲದಿದ್ದಲ್ಲಿ ಅನಾಹುತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಿದರು. [ಮೈಸೂರಿಗರೇ ವಾಹನದ ಟಿಂಟೆಡ್ ಗ್ಲಾಸ್ ತೆಗೆಯಿರಿ]
ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಸಿಎಆರ್ ಡಿಸಿಪಿ ಹಾಗೂ ಸಂಘದ ಕಾರ್ಯದರ್ಶಿ ಬಿ. ಶಿವಣ್ಣ, ಕಾರ್ಯಕಾರಿ ಸಮಿತಿ ಸದಸ್ಯ ಪ್ರೊ. ಶಿವರಾಮ ಮಳವಳ್ಳಿ ಹಾಜರಿದ್ದರು.












Click it and Unblock the Notifications