ಮೈಸೂರು ಸಹಾಯಕ ಡಿಡಿಪಿಐ ಸಿದ್ದಲಿಂಗಪ್ಪ ಎಸಿಬಿ ಬಲೆಗೆ
ಮೈಸೂರು, ಫೆಬ್ರವರಿ. 28 : ಚೇತನ್ ಎಂಬುವರಿಂದ 2 ಸಾವಿರ ರು. ಲಂಚ ಸ್ವೀಕರಿಸುವ ವೇಳೆ ಮೈಸೂರು ಸಹಾಯಕ ಡಿಡಿಪಿಐ ಸಿದ್ದಲಿಂಗಪ್ಪ ಅವರು ಮಂಗಳವಾರ ಎಸಿಬಿ ಬಲೆಗೆ ಬಿದಿದ್ದಾರೆ.
ಡಿಡಿಪಿಐ ಕಚೇರಿಯಿಂದ ಜೆಡಿಪಿಐ ಕಚೇರಿಗೆ ಕಡತವನ್ನು ಕಳುಹಿಸಲು ಅರ್ಜಿದಾರರಿಂದ 2 ಸಾವಿರ ರು ಲಂಚ ನೀಡುವಂತೆ ಒತ್ತಾಯಿಸಿದ್ದಾರೆ. ಮಂಗಳವಾರ ಸಿದ್ದಲಿಂಗಪ್ಪ ಅವರು ಚೇತನ್ ಎನ್ನುವರಿಂದ ಲಂಚ ಸ್ವೀಕರಿಸುವ ವೇಳೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.

ಹುಣಸೂರು ತಾಲ್ಲೂಕಿನ ಮಂಚಬಾಯ್ಯನಹಳ್ಳಿಯ ನಿವಾಸಿ ಪದವೀದರರೊಬ್ಬರು ತಮ್ಮ ತಂದೆಯು ರೈಲ್ವೆ ಅಪಘಾತದಲ್ಲಿ ನಿಧನ ಹೊಂದಿದ್ದ ಪ್ರಯುಕ್ತ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆಗಾಗಿ ಕೆ.ಆರ್ ನಗರದಲ್ಲಿ ಬಿ.ಇ.ಓ ಕಚೇರಿ ಅರ್ಜಿ ಸಲ್ಲಿಸಿದ್ದಾರೆ.
ಕಡತವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ಡಿಡಿಪಿಐ ಕಚೇರಿ ಮೈಸೂರಿಗೆ ರವಾನಿಸಲಾಗಿದೆ. ಬಳಿಕ ಕಡತವನ್ನು ಜೆಡಿಪಿಐ ಕಚೇರಿಗೆ ತಲುಪಿಸಲು ಡಿಡಿಪಿಐ ಸಿದ್ದಲಿಂಗಪ್ಪ ಅರ್ಜಿದಾರರಿಗೆ 2 ಸಾವಿರ ರು ನೀಡುವಂತೆ ಒತ್ತಾಯಿಸಿದ್ದರು.
ಇದರಿಂದ ಅರ್ಜಿದಾರ ಚೇತನ್ ಎಂಬುವರು ಎಸಿಬಿ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದರು. ಇದರ ಮೇರೆಗೆ ಎಸಿಬಿ ಅಧಿಕಾರಿಗಳು ಸಿದ್ದಲಿಂಗಪ್ಪ ಪಡೆಯುವ ವೇಳೆ ದಾಳಿ ಮಾಡಿ ವಶಕ್ಕೆ ಪಡೆದು ಭ್ರಷ್ಟಾಚಾರ ತಡೆ ಕಾಯ್ದೆ-1988 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
ಎಸಿಬಿ ಮೈಸೂರು ಜಿಲ್ಲಾ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆದಿದೆ.












Click it and Unblock the Notifications