ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆಗೆ ಮೈಸೂರು ಸಿದ್ಧ

ಮೈಸೂರು, ಸೆ.18 : ವಿಶ್ವವಿಖ್ಯಾತ ಮೈಸೂರು ದಸರಾ ಆರಂಭವಾಗಲು ಕೆಲವು ದಿನಗಳು ಬಾಕಿ ಉಳಿದಿರುವಂತೆಯೇ ಮೈಸೂರು ನಗರದ ಸ್ವಚ್ಛತೆ ಕಾಪಾಡಲು ದಸರಾ ಉಸ್ತುವಾರಿ ಸಮಿತಿ ಮತ್ತು ಮಹಾನಗರ ಪಾಲಿಕೆ ಸಜ್ಜಾಗಿದೆ. ಈ ಬಾರಿಯ ದಸರಾವನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಚಿಂತಿಸಲಾಗಿದೆ.

ನಗರದ ಸ್ವಚ್ಛತೆಗಾಗಿಯೇ ಮೈಸೂರು ಮಹಾನಗರ ಪಾಲಿಕೆ ಹೆಚ್ಚುವರಿಯಾಗಿ 280 ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಮೂರು ಪಾಳಿಗಳಲ್ಲಿ ಕೆಲಸ ಮಾಡಿ, ನಗರದ ಸೌಂದರ್ಯ ಕಾಪಾಡಲು ಕಾರ್ಮಿಕರು ಕೆಲಸ ನಿರ್ವಹಿಸಲಿದ್ದಾರೆ. ಪ್ರವಾಸಿಗರು ಅವರಿಗೆ ಸಹಾಯ ಮಾಡುವಂತೆ ಪಾಲಿಕೆ ಮನವಿ ಮಾಡಲಾಗಿದೆ.

mysore

ಈ ಕುರಿತು ಮಾಹಿತಿ ನೀಡಿರುವ ಮೈಸೂರು ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಲೋಕನಾಥ್, 280 ಪೌರ ಕಾರ್ಮಿಕರ ನೇಮಕಾರಿಗಾಗಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ನೇಮಕಾತಿ ಆದ ನಂತರ ಅವರ ಕೆಲಸಗಳ ಬಗ್ಗೆ ಕಾರ್ಯ ಯೋಜನೆ ತಯಾರಿಸಲಾಗುವುದು ಎಂದು ಹೇಳಿದ್ದಾರೆ.

ನಗರದ ಜನದಟ್ಟಣೆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಲು ಮೂರು ಪಾಳಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡಲಿದ್ದಾರೆ. ಅ.4ರಿಂದ 14ರ ವೆರೆಗೆ ರಾತ್ರಿ 12ರಿಂದ ಬೆಳಗ್ಗೆ 6 ಗಂಟೆಯ ತನಕ ಒಂದು ಪಾಳಿಯಲ್ಲಿ ಪೌರ ಕಾರ್ಮಿಕರು ಕೆಲಸ ನಿರ್ವಹಿಸಲಿದ್ದಾರೆ ಎಂದರು.

ಪ್ಲಾಸ್ಟಿಕ್ ಫ್ರೀ ಝೋನ್ : ದಸರಾ ಉತ್ಸವದ ಪ್ರಮುಖ ಕಾರ್ಯಕ್ರಮಗಳು ನಡೆಯುವ ಸ್ಥಳಗಳನ್ನು ಪ್ಲಾಸ್ಟಿಕ್ ಫ್ರೀ ಝೋನ್ ಎಂದು ಪಾಲಿಕೆ ಘೋಷಣೆ ಮಾಡಲಿದೆ. ಈ ಝೋನ್ ಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲು ಚಿಂತನೆ ನಡೆಸಲಾಗಿದೆ.

ನಗರದ ಸ್ವಚ್ಛತೆ ಕಾಪಾಡಲು ಸಹಕರಿಸುವ ಸ್ವಯಂ ಸೇವಾ ಸಂಸ್ಥೆಗಳು ಮಹಾನಗರ ಪಾಳಿಕೆಯೊಂದಿಗೆ ಸಹಕರಿಸಬೇಕು ಎಂದು ಪಾಲಿಕೆ ಮನವಿ ಮಾಡಿದೆ. ನಗರವನ್ನು ಕಸಮುಕ್ತಗೊಳಿಸಲು ಜನರಿಗೆ ತಿಳುವಳಿಕೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಾಲಿಕೆ ಮುಂದಾಗಿದೆ.

ಆಹಾರ ಮೇಳ, ಹೋಟೆಲ್, ಸ್ಟಾಲ್ ಗಳಿಗೆ ಕಸಗಳನ್ನು ಹಾಕಲು ಪಾಲಿಕೆ ವತಿಯಿಂದ ಕಂಟೈನರ್ ಗಳನ್ನು ನೀಡಿ, ಅದರಲ್ಲಿ ಮಾತ್ರ ಕಸ ಹಾಕಬೇಕೆಂಬ ನಿಯಮ ರೂಪಿಸಲು ಚಿಂತನೆ ನಡೆಸಲಾಗಿದೆ. ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸುವ ಜೊತೆಗೆ ನಗರದ ಸ್ವಚ್ಛತೆಗೂ ಪಾಲಿಕೆ ಅಗತ್ಯ ಗಮನ ಹರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+