ಮೈಸೂರಿನಲ್ಲಿ ಪೊಲೀಸರ ಆಕರ್ಷಕ ಪರೇಡ್

ಮೈಸೂರು, ಮಾ. 29 : ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರು ಸೂಕ್ಷ್ಮ ಪ್ರದೇಶದಲ್ಲಿ ಪಥಸಂಚಲನ ನಡೆಸಿದರು. ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಜನರಿಗೆ ಕರೆ ನೀಡಿದರು.

ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಸ್.ಎಸ್. ಮಹದೇವಯ್ಯ ನೇತೃತ್ವದಲ್ಲಿ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಮೈಸೂರು ನಗರದ ಪೊಲೀಸ್ ಸಿಬ್ಬಂದಿ, ಕೇರಳ ಪೊಲೀಸ್, ಸಿ.ಐ.ಎಸ್.ಎಫ್ ಆರೆಸೇನಾ ಪಡೆಯಿಂದ ಪಥಸಂಚಲನ ನಡೆಯಿತು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿ]

ನಗರದ ಸೂಕ್ಷ್ಮ ಪ್ರದೇಶಗಳಾದ ಕೆ.ಎನ್. ಪುರ, ಕ್ಯಾತಮಾರನಹಳ್ಳಿ, ಉದಯಗಿರಿ, ಶಾಂತಿನಗರ ಹಾಗೂ ಇತರೆಡೆ ಪಥ ಸಂಚಲನ ನಡೆಸಿದ ಪೊಲೀಸರು, ಶಾಂತಿ ಕದಡುವಂತಹ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಟ್ಟೆಚ್ಚರ ನೀಡಿದರು. ಚಿತ್ರಗಳಲ್ಲಿ ನೋಡಿ ಪೊಲೀಸ್ ಪರೇಡ್

ಮೈಸೂರು ಪೊಲೀಸರ ಪರೇಡ್

ಮೈಸೂರು ಪೊಲೀಸರ ಪರೇಡ್

ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮೈಸೂರು ಪೊಲೀಸರು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿ ಎಸ್.ಎಸ್. ಮಹದೇವಯ್ಯ ನೇತೃತ್ವದಲ್ಲಿ ಪರೇಡ್ ನಡೆಸಿದರು.

ನಗರ ಪೊಲೀಸರು, ಅಶ್ವದಳ ಭಾಗಿ

ನಗರ ಪೊಲೀಸರು, ಅಶ್ವದಳ ಭಾಗಿ

ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಪರೇಡ್ ನಲ್ಲಿ ಮೈಸೂರು ನಗರದ ಪೊಲೀಸ್ ಸಿಬ್ಬಂದಿ, ಅಶ್ವದಳ, ಚುಣಾವಣೆ ಭದ್ರತೆಗಾಗಿ ನಗರಕ್ಕೆ ಆಗಮಿಸಿರುವ ಕೇರಳ ಪೊಲೀಸ್, ಸಿ.ಐ.ಎಸ್.ಎಫ್ ಆರೆಸೇನಾ ಪಡೆಯ ಯೋಧರು ಪಾಲ್ಗೊಂಡಿದ್ದರು.

ಸೂಕ್ಷ್ಮ ಪ್ರದೇಶದಲ್ಲಿ ಪರೇಡ್

ಸೂಕ್ಷ್ಮ ಪ್ರದೇಶದಲ್ಲಿ ಪರೇಡ್

ಮೈಸೂರು ನಗರದ ಸೂಕ್ಷ್ಮ ಪ್ರದೇಶಗಳಾದ ಕೆ.ಎನ್. ಪುರ, ಕ್ಯಾತಮಾರನಹಳ್ಳಿ, ಉದಯಗಿರಿ, ಶಾಂತಿನಗರ ಹಾಗೂ ಇತರೆಡೆ ಪಥ ಸಂಚಲನ ನಡೆಯಿತು.

ಶಾಂತಿ ಕಾಪಾಡುವಂತೆ ಕರೆ

ಶಾಂತಿ ಕಾಪಾಡುವಂತೆ ಕರೆ

ಚುನಾವಣೆ ವೇಳೆ ಕೋಮು ಸೌಹಾರ್ದತೆ ಕಾಪಾಡುವುದು, ಗಲಭೆಗ ಅವಕಾಶ ನೀಡದಿರುವುದು, ಪ್ರತಿಯೊಬ್ಬರು ಕಡ್ಡಾಯ ಮತದಾನದಲ್ಲಿ ಭಾಗವಹಿಸುವಂತೆ ಪೊಲೀಸರು ಸಂದೇಶ ರವಾನಿಸಿದರು. ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕಟ್ಟೆಚ್ಚರ ನೀಡಿದರು.

ಚುನಾವಣೆಗೆ ಸಿದ್ಧತೆ

ಚುನಾವಣೆಗೆ ಸಿದ್ಧತೆ

ಮೈಸೂರು ನಗರದಲ್ಲಿ ಶಾಂತಿಯುತ ಮತದಾನ ನಡೆಸಲು ಪೊಲೀಸರು ಸಜ್ಜಾಗಿದ್ದಾರೆ. ಏ.17ರಂದು ನಗರದಲ್ಲಿ ಮತದಾನ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+