ಮೈಸೂರಿನಲ್ಲಿ ಕಳೆಗಟ್ಟಿದ ರಂಜಾನ್ ಸಡಗರ: ಎಲ್ಲೆಲ್ಲೂ ಸಮೋಸದ ಘಮಲು
Recommended Video

ಮೈಸೂರು, ಜೂನ್ 14 : ರಂಜಾನ್ ಆಚರಣೆಯ ರಂಗು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿಯೂ ಕಳೆಗಟ್ಟಿದೆ. ಮಸೀದಿಗಳು ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ಮೀನಾ ಬಜಾರ್ ನಲ್ಲಂತೂ ಕಾಲಿಡಲು ಜಾಗವೇ ಇಲ್ಲ.
ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ತುಸು ಜೋರಾಗಿಯೇ ಇದೆ. ಸಂಜೆ ಪ್ರಾರ್ಥನೆ ನಂತರ ನೂರಾರು ಆಹಾರ ಮಳಿಗೆಗಳು ಪುಟ್ಟಪುಟ್ಟ ದೀಪ ಹಚ್ಚಿಕೊಂಡು ಝಗಮಗವೆಂದು ವ್ಯಾಪಾರಕ್ಕೆ ಸಿದ್ಧವಾಗುತ್ತವೆ. ಪ್ರತಿ ಅಂಗಡಿಯಲ್ಲೂ ಭರ್ಜರಿ ವ್ಯಾಪಾರ. ಬಡಾವಣೆಗಳಲ್ಲಂತೂ ಸಮೋಸದ ಘಮಲ ಹೇಳತೀರದು.
ಪ್ರತಿ ವರ್ಷದಂತೆ ಈ ವರ್ಷವೂ ರಂಜಾನ್ ಆಚರಣೆಗೆ ಮೈಸೂರಿನ ಮುಸ್ಲಿಂ ಸಮುದಾಯ ಸಿದ್ಧತೆ ನಡೆಸಿದ್ದು, ಆಚರಣೆಯ ಒಂದು ನೋಟ ಇಲ್ಲಿದೆ...

ತಲೆ ಎತ್ತಿ ನಿಂತಿವೆ ಮಳಿಗೆಗಳು
ಮಸೀದಿಗಳ ಬಳಿ ಹಣ್ಣಿನ ಅಂಗಡಿ, ಸಿಹಿ ಖಾದ್ಯ ಮತ್ತು ಮಾಂಸಾಹಾರದ ಮಳಿಗೆಗಳು ತಲೆಯೆತ್ತಿವೆ. ಹಲೀಮದಿಂದ ಹಿಡಿದು ಕಬಾಬ್, ತೀತರ್ ಘೋಷ್, ಫಿಶ್ ಫ್ರೈ, ಚಿಕನ್ ಫಾಲ್ ಗರಮಾ ಗರಂ ಮಾಂಸಾಹಾರ ಭಕ್ಷ್ಯಗಳ ಅಂಗಡಿಗಳು ಸಾಲುಸಾಲಾಗಿವೆ. ಸಿಹಿ ತಿನಿಸು ಮತ್ತು ಹರೀರಾಗಳು ರಂಜಾನ್ ಕಳೆ ಹೆಚ್ಚಿಸಿವೆ.
ದಿನವಿಡೀ ಉಪವಾಸ ವ್ರತನಿರತರು ಸಂಜೆ ಮಸೀದಿಯಲ್ಲಿ ಪ್ರಾರ್ಥನೆ ಬಳಿಕ ಸೇವಿಸುವ ಆಹಾರದಲ್ಲಿ ಸಮೋಸಕ್ಕೆ ಅಗ್ರಸ್ಥಾನ. ಪ್ರತಿ ಮಸೀದಿ ಬಳಿ ಹಣ್ಣು, ಸಮೋಸ, ಕಚೋರಿ, ಬಟಾಟೆ ವಡಾ, ಪಾವ್ ಬಾಜಿ, ಬೋಂಡ, ಮೆಣಸಿನಕಾಯಿ ಬಜ್ಜಿ ಸೇರಿದಂತೆ ಹಲವು ಖಾದ್ಯಗಳ ಖರೀದಿಗೆ ಅಂಗಡಿಗಳ ಮುಂದೆ ಜನ ಸಂತೆಯಂತೆ ಸೇರಿದ ಚಿತ್ರ ಸಾಮಾನ್ಯವಾಗಿದೆ

ಕಾಲಿಡಲು ಜಾಗವೇ ಇಲ್ಲ
ಹಬ್ಬದ ವಸ್ತುಗಳ ಖರೀದಿಗೆ ಪ್ರಶಸ್ತ ತಾಣ ಎನಿಸಿರುವ ಮೀನಾ ಬಜಾರ್ ಮತ್ತು ಸಾಡೆ ರಸ್ತೆಯಲ್ಲಿ ಕಳೆದ ಕೆಲದಿನಗಳಿಂದ ವ್ಯಾಪಾರದ ಭರಾಟೆ ಜೋರಾಗಿದೆ. ಹಬ್ಬದ ಮುನ್ನಾದಿನ ತಡರಾತ್ರಿಯವರೆಗೂ ಇಲ್ಲಿ ಭರ್ಜರಿ ವ್ಯಾಪಾರ ಮುಂದುವರೆಯಲಿದೆ.
ರಂಜಾನ್ ಗೆ ಇನ್ನೆರಡು ದಿನ ಇರುವಾಗಲೇ ಖರೀದಿಯ ಭರಾಟೆ ಜೋರಾಗಿದ್ದಿದ್ದು ಕಂಡುಬಂತು. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಉಡುಪು, ಪಾದರಕ್ಷೆ ದೊರೆಯುವ ಕಾರಣ ಬಡವರು ಮತ್ತು ಮಧ್ಯಮವರ್ಗದವರು ಹಬ್ಬದ ಖರೀದಿಗೆ ಇಲ್ಲಿಗೆ ದಾಂಗುಡಿ ಇಡುತ್ತಾರೆ.

ಎಲ್ಲಾ ಧರ್ಮದವರು ಬರುತ್ತಾರೆ
ಪುರುಷರಿಗೆ ಹತ್ತು ಹಲವು ಬಗೆಯ ಟೋಪಿ, ಸಲ್ವಾರ್ ಕಮೀಜ್, ಕುರ್ತಾ, ಪೈಜಾಮ ಇಲ್ಲಿ ಲಭ್ಯವಿದ್ದರೆ, ಮಹಿಳೆಯರು ಚೂಡಿದಾರ್ , ಡ್ರೆಸ್ ಮೆಟೀರಿಯಲ್, ಸಿದ್ಧ ಉಡುಪು, ವ್ಯಾನಿಟಿ ಬ್ಯಾಗ್, ಪಾದರಕ್ಷೆ, ಬುರ್ಖಾ, ಸೌಂದರ್ಯವರ್ಧಕ ಸಾಧನಗಳ ಖರೀದಿಗೆ ಇಲ್ಲಿಗೆ ಬರುವರು.
ಕೇವಲ ಮುಸ್ಲಿಮರು ಮಾತ್ರವಲ್ಲದೆ, ಇತರ ಧರ್ಮದವರೂ ಖರೀದಿಗೆ ಇಲ್ಲಿಗೆ ಬರುತ್ತಾರೆ. ಮಕ್ಕಳ ಪಾದರಕ್ಷೆಗಳ ಮಾರಾಟಕ್ಕೆ 20ಕ್ಕೂ ಅಧಿಕ ಅಂಗಡಿಗಳು ಇಲ್ಲಿವೆ.

ವ್ಯಾಪಾರಿಗಳು ಏನ್ ಹೇಳ್ತಾರೆ?
"ಬೆಂಗಳೂರು ಮತ್ತು ಮುಂಬೈನಿಂದ ಪಾದರಕ್ಷೆಗಳನ್ನು ತಂದು ಮಾರಾಟ ಮಾಡುತ್ತೇನೆ. ರಂಜಾನ್ ತಿಂಗಳ ಕೊನೆಯ ಹತ್ತು ದಿನ ವ್ಯಾಪಾರ ನಾಲ್ಕೈದು ಪಟ್ಟು ಹೆಚ್ಚಾಗುತ್ತದೆ" ಎಂದು ಪಾದರಕ್ಷೆ ವ್ಯಾಪಾರಿ ಅಲ್ತಾಫ್ ಹೇಳಿದರು.
"ಇನ್ನು ಮಹಿಳೆಯರು ಪ್ರತಿ ವರ್ಷ ಹೊಸ ಶೈಲಿಯ ಉಡುಪು ಮತ್ತು ಪಾದರಕ್ಷೆಗಳನ್ನು ಬಯಸುವರು. ಇದಕ್ಕಾಗಿ ನವೀನ ಮಾದರಿಯ, ಹೊಸ ಫ್ಯಾಷನ್ ಉಡುಪುಗಳನ್ನು ತಂದು ಮಾರಾಟ ಮಾಡುತ್ತೇವೆ" ಎಂದು ವ್ಯಾಪಾರಿ ಅನ್ವರ್ ಹೇಳಿದರು. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಇಲ್ಲಿ ಖರೀದಿಗೆ ಬರುತ್ತಾರೆ.

ಈದ್ಗಾ ಮೈದಾನಕ್ಕೆ ಬರುತ್ತದೊಂದು ಶವ !
ಕಳೆದ 43 ವರುಷಗಳಿಂದ ರಂಜಾನ್ ದಿನ ಈದ್ಗಾ ಮೈದಾನ ದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ವೇಳೆ ಒಂದು ಶವ ಬರುತ್ತದೆ. ಅದರ ಆತ್ಮ ಸದ್ಗತಿಯಾಗಲಿ ಎಂದು ಪ್ರಾರ್ಥಿಸಿಯೇ ಇಲ್ಲಿಯ ಮುಸಲ್ಮಾನ ಬಂಧುಗಳು ಹಬ್ಬ ಆಚರಿಸುತ್ತಾರೆ.
ಆಗಿನಿಂದ ನಡೆದು ಬಂದ ಸಂಪ್ರದಾಯ ಈಗಲೂ ಮುಂದುವರೆಯುತ್ತಿದೆ. ಪ್ರತಿ ರಂಜಾನ್ ಪ್ರಾರ್ಥನೆಯ ವೇಳೆ ಓರ್ವ ಮುಸ್ಲಿಂ ವ್ಯಕ್ತಿ ಸಾವಿಗೀಡಾಗುತ್ತಲೇ ಬಂದಿರುವುದು ಇಲ್ಲಿನವರಿಗೆ ಅಚ್ಚರಿ ಹಾಗೂ ಪವಾಡದ ವಿಷಯವೇ ಸರಿ.
ಈ ರೀತಿ ರಂಜಾನ್ ದಿನವೇ ವ್ಯಕ್ತಿಗಳು ಸ್ವಾಭಾವಿಕವಾಗಿ ನಗರದ ಎಲ್ಲಿಯಾದರೂ ಸತ್ತರೂ ಅವರನ್ನು ಈದ್ಗಾ ಮೈದಾನಕ್ಕೆ ತಂದು ಅವರಿಗೆ ವಿಶೇಷ ನಮಾಜ್ ಮಾಡುತ್ತಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications