ಮೈಸೂರು ದಸರಾ ಉದ್ಘಾಟನೆ ಬಳಿಕ ಕನ್ನಡಿಗರ ಶ್ರೀಮಂತ ಭಾಷೆಯ ಮಹತ್ವ ಸಾರಿದ ನಾದಬ್ರಹ್ಮ ಹಂಸಲೇಖ
ಮೈಸೂರು, ಅಕ್ಟೋಬರ್, 15: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದ ಸನ್ನಿಧಿಯಲ್ಲಿ ಸಂಗೀತ ನಿರ್ದೇಶಕ, ನಾದಬ್ರಹ್ಮ ಹಂಸಲೇಖ ಭಾನುವಾರ (ಅಕ್ಟೋಬರ್) ವಿಧ್ಯುಕ್ತ ಚಾಲನೆ ನೀಡಿದ್ದು, ಈ ವೇಳೆ ಅವರು ನಾಡಿದ ಭಾಷೆ, ಸಂಸ್ಕೃತಿ ಬಗ್ಗೆ ಸವಿವರವಾಗಿ ವಿವರಿಸಿದ್ದಾರೆ.
ನಂತರ ನಾದಬ್ರಹ್ಮ ಹಂಸಲೇಖ ಅವರು ಪೂಜ್ಯ ಕನ್ನಡಿಗರಿಗೆ ಎನ್ನುತ್ತಲೇ ಮಾತು ಶುರು ಮಾಡಿದರು. ಕರ್ನಾಟಕದ ಏಕೀಕರಣಕ್ಕೆ ಇದೀಗ 50 ವರ್ಷ ತುಂಬಿದೆ. ನನ್ನ ಕಲಾ ಕಾಯಕಕ್ಕೂ 50 ವರ್ಷ ತುಂಬಿದೆ. ಇಂದು ನನಗೆ ಸಿಕ್ಕಿರುವ ಈ ಅವಕಾಶ ಬಹಳ ಬೆಲೆ ಬಾಳುವಂತದ್ದು. ಸಾವಿರ ಮೆಟ್ಟಿಲು ಹತ್ತಿ ಇಲ್ಲಿಯವರೆಗೆ ಬಂದಿದ್ದೇನೆ. ಈ ಬೆಟ್ಟ, ಈ ಹಬ್ಬ, ಈ ದೀಪ ಹಚ್ಚೋದು ಪುಣ್ಯದ ಕೆಲಸ. ಈ ಸಂಭ್ರಮಕ್ಕೆ ನಾನು ಯಾರನ್ನು ನೆನೆಯಲಿ ಎಂದು ತಿಳಿಸಿದರು.

ನಾನು ಹಚ್ಚಿದ್ದು ಕನ್ನಡದ ದೀಪ. ಈ ದೀಪ ಹಚ್ಚಲು ನನಗೆ ಇಡೀ ನಾಡಿನ ಆಶಯ ಇದೆ. ದಸರಾ ಒಂದು ಜೀವಂತ ಮಹಾಕಾವ್ಯ. ವೀರತೆಂಕಣದ ಮಹಾಕಾವ್ಯ ಇದು. ಕನ್ಮಡ ನಮ್ಮ ಶೃತಿ ಆಗಬೇಕು. ಆಳಿದರೆ ಕೃತಿಯಂತಿರಬೇಕು. ಕನ್ನಡದ ಭಾಷೆಗೆ ಮಿತಿ ಇದೆ. ಆದರೆ ಅದರ ಭಾವಕ್ಕೆ ಎಲ್ಲಿ ಮಿತಿ ಇದೆ. ದೆಹಲಿ ನಮಗೆ ಬೇಕು. ದೆಹಲಿಗೂ ಕನ್ನಡ ಬೇಕು ಎಂದರು.
ಆದರೆ, ದೆಹಲಿಗೆ ಯಾಕೋ ಕನ್ನಡ ಬೇಡವಾಗಿದೆ. ಕನ್ನಡ ವಿಶ್ವಭಾಷೆ ಆಗಬೇಕು. ಅಭಿವೃದ್ಧಿ ಶಾಂತಿಮಂತ್ರ ಒಂದಂಶದ ಕಾರ್ಯಕ್ರಮ ಆಗಬೇಕು. ಹೊರ ರಾಜ್ಯದ ಕಾರ್ಪೋರೇಟ್ ಕಂಪನಿಯ ನೌಕರರಿಗೆ ಕನ್ನಡ ಕಲಿಸಬೇಕು. ಕನ್ನಡ ಕಲಿಸುವ ಪುಸ್ತಕ ಹೊರಬರಬೇಕೆಂದು ತಿಳಿಸಿದರು.
ಮಂಗಳೂರು ಮೈಸೂರು ಜೋಡಿ ಜಿಲ್ಲೆ ಆಗಬೇಕು. ಈ ಎರಡು ಜಿಲ್ಲೆಯಲ್ಲಿ ಅಪಾರ ಸಾಂಸ್ಕೃತಿಕ ಕಣಜವಿದೆ. ವ್ಯಾಪಾರ-ವಿನಿಮಯ ಆಗಬೇಕು. ಎಲ್ಲಾ ಜಿಲ್ಲೆಗಳನ್ನು ಎರಡು ಜಿಲ್ಲೆಯಾಗಿ ಜೋಡಿಸಬೇಕಿದೆ. ಕೃಷಿಕರು-ಕಾರ್ಪೋರೇಟರ್ ಒಂದಾಗಿ ಸಾಗಬೇಕು. ಕನ್ನಡದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಬದ್ಧರಾಗೋಣ. ಮಗುವಿಗೆ ಕನ್ನಡವನ್ನು ತಾಯಿ ಕಲಿಸಬೇಕು. ಮನುಜ ಮತ ವಿಶ್ವ ಪಥ ಎಲ್ಲೆಡೆ ಪರಿಸಬೇಕು. ಶಾಂತಿಮಂತ್ರವನ್ನು ನಾವೆಲ್ಲರೂ ಮಾಡೋಣ ಎಂದರು.
-
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
"5 ತಿಂಗಳಾದ್ರೂ ಸಿಗದ ದಸರಾ ಲೆಕ್ಕ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ'' -
Train Delay: ರೈಲು ಪ್ರಯಾಣಿಕರೇ ಎಚ್ಚರ! ನಾಳೆ ಬೆಂಗಳೂರು-ಚೆನ್ನೈ ನಡುವಿನ ಸಂಚಾರದಲ್ಲಿ ಭಾರಿ ವ್ಯತ್ಯಯ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications