Muda Scam: ಬಿಜೆಪಿ, ಜೆಡಿಎಸ್ ಪಾದಯಾತ್ರೆ ವೇಳೆ ಮಾತು ಬಾರದ ಯುವಕ ಕಾಣೆ!

ರಾಮನಗರ ಆಗಸ್ಟ್ 6: ಮೂರನೇ ದಿನದ ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ವೇಳೆ ಚನ್ನಪಟ್ಟಣದ ಬಳಿ ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಯುವಕ ಕಾಣೆಯಾಗಿದ್ದಾನೆ.

ಕಾಣೆಯಾದ ಯುವಕ ಮಹೇಶ್ ಕರಿಬಸಪ್ಪ (18). ಈತನಿಗೆ ಮಾತು ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಪಾದಯಾತ್ರೆ ವೇಳೆ ಈತ ನಾಪತ್ತೆಯಾಗಿದ್ದು ಸಂಬಂಧಿಕರು ಹಾಗೂ ಕುಟುಂಬಸ್ಥರು ಈತನ ಹುಡುಕಾಟದಲ್ಲಿದ್ದಾರೆ. ಆದರೆ ಈತ ಎಲ್ಲೂ ಕೂಡ ಪತ್ತೆಯಾಗದ ಕಾರಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Muda Scam A youth went missing during the third day of BJP and JDS padayatre

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಹೆಸರು ಕೇಳಿಬಂದಿದ್ದು ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸಿವೆ. ಭ್ರಷ್ಟಾಚಾರದ ವಿರುದ್ಧ ಪಾದಯಾತ್ರೆಯನ್ನು ಆರಂಭವಿಸಿರುವ ಮೈತ್ರಿ ಪಕ್ಷಗಳು ಪಾದಯಾತ್ರೆ ಶುರು ಮಾಡಿ ಇಂದಿಗೆ ನಾಲ್ಕನೇ ದಿನ. ಕಳೆದ ದಿನ ಪಾದಯಾತ್ರೆ ವೇಳೆ ಮಹಿಳೆಯೊಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದರು.

ಹೌದು... ಮುಡಾ ಹಗರಣ ವಿರೋಧಿಸಿ ಜೆಡಿಎಸ್- ಬಿಜೆಪಿ ನಡೆಸುತ್ತಿರುವ ಜಂಟಿ ಪಾದಯಾತ್ರೆಯಲ್ಲಿ ಕಳೆದ ದಿನ ಜೆಡಿಎಸ್ ಕಾರ್ಯಕರ್ತೆ ಬೆಂಗಳೂರು ಮೂಲದ ಗೌರಮ್ಮ ಎಂಬಾಕೆ ಹೃದಾಯಘಾತದಿಂದ ಸಾವನ್ನಪ್ಪಿದ್ದರು. ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಮೃತರ ಅಂತಿಮ‌ ದರ್ಶನವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಪಡೆದುಕೊಂಡರು.

Muda Scam A youth went missing during the third day of BJP and JDS padayatre

ಇದೇ ವೇಳೆ ಮತ್ತೊಬ್ಬ ಪಾದಯಾತ್ರಿ ಸಹ ವಾಂತಿ ಮಾಡಿಕೊಂಡು ಆಸ್ವಸ್ಥರಾಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚನ್ನಪಟ್ಟ್ಣದಲ್ಲಿ ಪಾದಯಾತ್ರೆ ವೇಳೆ ಬಿಜೆಪಿ ಮುಖಂಡರೊಬ್ಬರು ಅಸ್ವಸ್ಥಗೊಂಡಿದ್ದರು. ಬೆಂಗಳೂರಿನ ಜಯನಗರದ ಮಂಡಳ ಉಪಾಧ್ಯಕ್ಷ ಶಂಕರ್ ಅವರು ಪಾದಯಾತ್ರೆ ಮಾಡುವ ಸಂದರ್ಭದಲ್ಲಿ ಅಸ್ವಸ್ಥಗೊಂಡಿದ್ದರು.

ಕೂಡಲೇ ಅವರನ್ನು ಆಂಬುಲೆನ್ಸ್ ಮೂಲಕ ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಬಿ.ವೈ.ವಿಜಯೇಂದ್ರ ಮತ್ತು ಬಿಜೆಪಿ ಶಾಸಕರಾದ ಸಿಕೆ ರಾಮಮೂರ್ತಿ ಹಾಗೂ ರವಿಸುಬ್ರಹ್ಮಣ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಶಂಕರ್ ಅವರ ಆರೋಗ್ಯ ವಿಚಾರಿಸಿದರು.

ಅಲ್ಲದೇ ಇದೇ ದಿನ ಮಾತ ಬಾರದ ಯುವಕನೋರ್ವ ಕಾಣೆಯಾಗಿದ್ದಾನೆ ಎನ್ನಲಾಗುತ್ತಿದೆ. ಸದ್ಯ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು ಯುವಕ ಹುಡುಕಾಟ ಚುರುಕುಕೊಂಡಿದೆ.

ಮೈಸೂರು ಚಲೋ ಪಾದಯಾತ್ರೆಗೆ ಇಂದು ನಾಲ್ಕನೇ ದಿನ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿಡಘಟ್ಟದಿಂದ ಇಂದಿನ ಬಿಜೆಪಿ ಜೆಡಿಎಸ್ ಪಾದಯಾತ್ರೆ ಆರಂಭವಾಗಲಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ಒಗ್ಗೂಡಿ ನಡೆಸುತ್ತಿರುವ ಚಳುವಳಿ ಇದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+