"ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ಬಜೆಟ್ ನಲ್ಲಿ ಹಣ ಮೀಸಲಿಡಿ'

ಮೈಸೂರು, ಮಾರ್ಚ್ 02: ಮೈಸೂರು ವಿಮಾನ ನಿಲ್ದಾಣದ ರನ್ ವೇಯನ್ನು 2.8 ಕಿ.ಮೀ ಗೆ ವಿಸ್ತರಿಸುವ ಯೋಜನೆಯನ್ನು ಈ 2020-21 ರ ಕರ್ನಾಟಕ ಬಜೆಟ್ ನಲ್ಲಿ ಸೇರಿಸಬೇಕೆಂದು ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಮೈಸೂರು ವಿಮಾನ ನಿಲ್ದಾಣ ಹಾಗೂ ವಿಸ್ತರಣೆಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಈ ಸಾಲಿನ ಬಜೆಟ್ ನಲ್ಲಿ 200 ಕೋಟಿ ರುಪಾಯಿ ಮೀಸಲಿಡಬೇಕು. ವಿಮಾನ ನಿಲ್ದಾಣ ವಿಸ್ತರಣೆಗೆ ಒಟ್ಟು 240 ಎಕರೆ ಜಾಗ ಅವಶ್ಯಕತೆಯಿದೆ. ಕೆಐಎಡಿಬಿ ವತಿಯಿಂದ ತಕ್ಷಣಕ್ಕೆ ಅಗತ್ಯವಿರುವ 115 ಎಕರೆ ಜಾಗವನ್ನು ಗುರುತಿಸಲಾಗಿದೆ. ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲು ಬಜೆಟ್ ನಲ್ಲಿ ಹಣ ಮೀಸಲಿಡುವಂತೆ ಕೋರಿದರು.

ಅಷ್ಟೇ ಅಲ್ಲದೇ ಮೈಸೂರು(ಬೆಳಗೊಳ)-ಕುಶಾಲನಗರ ರೈಲ್ವೆ ಮಾರ್ಗಕ್ಕೆ ಪ್ರಾರಂಭಿಕವಾಗಿ ಅನುದಾನವನ್ನು ಈ ಸಾಲಿನ ಬಜೆಟ್ ನಲ್ಲಿ ಬಿಡುಗಡೆ ಮಾಡುವಂತೆ ಕೋರಿದರು. ರಾಜ್ಯದಲ್ಲಿ ಅತಿ ಚಿಕ್ಕದಾದ ಜಿಲ್ಲೆ ಹಾಗೂ ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ಏಕೈಕ ಜಿಲ್ಲೆಯಾಗಿದೆ.

MP Prathap Simha Requested To Reserve Money For Mysuru Airport Expansion In Budget

ಕೊಡಗು ಜಿಲ್ಲೆಗೆ ರೈಲ್ವೆ ಸಂಪರ್ಕ ಕಲ್ಪಿಸಬೇಕೆಂದು ಬ್ರಿಟಿಷರ ಕಾಲದಿಂದ ಬೇಡಿಕೆಯಿದ್ದು, ಯಾವ ಸರ್ಕಾರ ಬಂದರೂ ಯೋಜನೆಗೆ ಅನುಮೋದನೆ ದೊರಕಿಲ್ಲ. ಈ ಯೋಜನೆಗೆ ಮೋದೀಜಿ ನೇತೃತ್ವದ ಕೇಂದ್ರ ಸರ್ಕಾರದ 2018-19 ರ ಸಾಲಿನ ಬಜೆಟ್ ನಲ್ಲಿ 1855 ಕೋಟಿ ರೂ. ಅನುದಾನ ಅನುಮೋದನೆಗೊಂಡಿದೆ ಎಂದು ಪ್ರತಾಪ ಸಿಂಹ ಮನವರಿಕೆ ಮಾಡಿದರು.

""ರೈಲ್ವೆ ಖಾತೆ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು ಮೈಸೂರು-ಕುಶಾಲನಗರ ರೈಲ್ವೆ ಯೋಜನೆಗೆ ಅನುದಾನ ಕೋರಿ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಅದರಂತೆ ತಾವು ಸ್ಪಂದಿಸಿದ್ದು ಮೈಸೂರು-ಕುಶಾಲನಗರ ಸಂಪರ್ಕಿಸುವ ಸುಮಾರು 87 ಕಿ.ಮೀ ಉದ್ದದ ಹೊಸ ರೈಲು ಮಾರ್ಗಕ್ಕೆ ರಾಜ್ಯ ಸರ್ಕಾರದಿಂದ ಉಚಿತವಾಗಿ ಭೂಮಿಯನ್ನು ನೀಡುವಂತೆ, ಕಾಮಗಾರಿಗೆ ಪ್ರಾರಂಭಿಕವಾಗಿ ಈ ಸಾಲಿನ ಬಜೆಟ್ ನಲ್ಲಿ ಸ್ವಲ್ಪ ಮಟ್ಟಿನ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ಕಾಮಗಾರಿಯನ್ನು ಆರಂಭಿಸಬೇಕೆಂದು'' ಮನವಿ ಮಾಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+