ಗೋ ಮಾಂಸ ಭಕ್ಷಿಸಿದ ಪ್ರೊ. ಭಗವಾನ್ ವಿರುದ್ಧ ಪ್ರತಾಪ್ ಸಿಂಹ ಕಿಡಿ
ಮೈಸೂರು ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಗೋ ಮಾಂಸ ತಿಂದ ಪ್ರೊ. ಭಗವಾನ್ ವಿರುದ್ಧ ಮೈಸೂರು ಸಂಸದ ಪ್ರತಾಪ್ ಸಿಂಹ ಕಿಡಿ. ಭಗವಾನ್ ಅವರಿಗೆ ಜತೆಯಾಗಿದ್ದ ಮೈಸೂರು ವಿವಿಯ ಪ್ರೊ. ಮಹೇಶ್ ಚಂದ್ರ ಗುರು ವಿರುದ್ಧ ವಾಗ್ದಾಳಿ.
ಮೈಸೂರು, ಜೂನ್ 26: ಸರ್ಕಾರಿ ಸಭಾಂಗಣವೊಂದರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಗೋ ಮಾಂಸ ತಿನ್ನುವ ಮೂಲಕ ಚಾಲನೆ ನೀಡಿದ ಪ್ರೊ. ಭಗವಾನ್ ಹಾಗೂ ಪ್ರೊ. ಮಹೇಶ್ ಚಂದ್ರ ಗುರು ಅವರು ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ಮೈಸೂರಿನ ಕಲಾ ಮಂದಿರದಲ್ಲಿ ನಡೆಯುತ್ತಿದ್ದ ಆಹಾರ ಹಕ್ಕು-ವ್ಯಕ್ತಿ ಸ್ವಾತಂತ್ರ್ಯ ಕುರಿತ ಸಂವಾದ ಕಾರ್ಯಕ್ರಮದ ಅಂಗವಾಗಿ ಭಾನುವಾರ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಸಾಹಿತಿಗಳು ಗೋಮಾಂಸ ಸೇವಿಸಿದ್ದಾರೆ. ಈ ಮೂಲಕ ಸಮಾಜಕ್ಕೆ ಕಳಂಕ ತರುತ್ತಿದ್ದಾರೆಂದು ಅವರು ಆರೋಪಿಸಿದರು.

ಸರ್ಕಾರದ ಆವರಣಗಳಲ್ಲಿ ಗೋ ಮಾಂಸ ಸೇವಿಸಕೂಡದು ಎಂಬ ಕಾನೂನು ಇದ್ದರೂ ವಿದ್ಯಾವಂತರಾದ ಇವರು ಅದನ್ನು ಉಲ್ಲಂಘಿಸಿರುವುದು ಆಕ್ಷೇಪಾರ್ಹ. ಅದರಲ್ಲೂ ಸರ್ಕಾರಿ ಸೇವೆಯಲ್ಲಿರುವ ಪ್ರೊ. ಮಹೇಶ್ ಚಂದ್ರ ಗುರು ಅವರು ಇಂಥದ್ದೊಂದು ಕೆಲಸ ಮಾಡಿರುವುದು ಬೇಸರದ ಸಂಗತಿ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ರಾಜ್ಯಪಾಲರನ್ನು ಭೇಟಿಯಾಗಿ ಪ್ರೊ. ಮಹೇಶ್ ಚಂದ್ರ ಗುರು ಅವರನ್ನು ಕೆಲಸದಿಂದ ವಜಾಗೊಳಿಸಲು ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.












Click it and Unblock the Notifications