ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ಭೈರಪ್ಪ ಬರಲಿ: ಪ್ರತಾಪ್ ಸಿಂಹ
ಜನಪ್ರಿಯ ಟಿವಿ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ಲೇಖಕರಾದ ಎಸ್ಎಲ್ ಭೈರಪ್ಪನವರನ್ನು ಕರೆಸಿ ಎಂದು ಒತ್ತಾಯಮಾಡೋಣವೇ? ಒಪ್ಪಿಸುವ ದುಸ್ಸಾಹಸಕ್ಕೆ ನಾನೇ ಕೈ ಹಾಕುತ್ತೇನೆ ಎಂದ ಸಂಸದ ಪ್ರತಾಪ್ ಸಿಂಹ.
ಮೈಸೂರು, ಮೇ 03: ಜನಪ್ರಿಯ ಟಿವಿ ಶೋ ವೀಕೆಂಡ್ ವಿಥ್ ರಮೇಶ್ ಕಾರ್ಯಕ್ರಮಕ್ಕೆ ನಮ್ಮ ಹೆಮ್ಮೆಯ ಲೇಖಕರಾದ ಎಸ್ಎಲ್ ಭೈರಪ್ಪನವರನ್ನು ಕರೆಸಿ ಎಂದು ಒತ್ತಾಯಮಾಡೋಣವೇ? ಒಪ್ಪಿಸುವ ದುಸ್ಸಾಹಸಕ್ಕೆ ನಾನೇ ಕೈ ಹಾಕುತ್ತೇನೆ ಎಂದು ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಪ್ರತಾಪ್ ಸಿಂಹ ಅವರು ಈ ಸಲಹೆಯನ್ನು ಬೆಳಗಾವಿಯ ವಿವೇಕ್ ಎಂಬುವರು ನೀಡಿದ್ದು, ನಾನು ಈ ಅಭಿಯಾನವನ್ನು ಆರಂಭಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಪ್ರತಾಪ್ ಅವರ ಪೋಸ್ಟ್ ಗೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿದ್ದು, ಬಹುತೇಕರು ಸರಸ್ವತಿ ಸಮ್ಮಾನ್ ಪುರಸ್ಕೃತ ಭೈರಪ್ಪ ಅವರ ಜೀವನಗಾಥೆಯನ್ನು ನಟ ರಮೇಶ್ ನಿರೂಪಣೆಯಲ್ಲಿ ಜೀ ಟಿವಿಯ 'ವೀಕೆಂಡ್ ವಿಥ್ ರಮೇಶ್' ಶೋ ನಲ್ಲಿ ನೋಡಲು ಬಯಸಿದ್ದಾರೆ. ಇದಕ್ಕೆ ಓದುಗರು ನೀಡಿರುವ ಪ್ರತಿಕ್ರಿಯೆಗಳು ಇಲ್ಲಿವೆ:
Sharanu Bandi : ಇಂತಹ ಮಹಾನ್ ವ್ಯಕ್ತಿಯನ್ನು ಅಲ್ಲಿಗೆ ಕರೆಸಿದರೆ ಅ program ನ ಸಾರ್ಥಕತೆ ಇನ್ನೂ ಜಾಸ್ತಿ ಆಗುತ್ತದೆ ಅವರ ಜೀವಾನದ ಬಗ್ಗೆ ತಿಳಿಯಲು ನಾವು ತುಂಬ ಉತ್ಸುಕರಾಗಿದ್ದೇವೆ.
Raveen Gulipura : Yes.. ದಯವಿಟ್ಟು ಒತ್ತಾಯ ಮಾಡಿ.. ನಾವು ಅವರ ಜೀವನದ ಬಗ್ಗೆ ಹಾಗೂ ಅವರ ವಿಚಾರಗಳನ್ನ ತಿಳಿದು ಕೊಳ್ಳಲು ತುಂಬಾ ಆಸಕ್ತರಾಗಿದ್ದೇವೆ..
Ganesh Prasad Preetham : ಸಾರ್ ದಯವಿಟ್ಟು ಆ ಕೆಲ್ಸ ಮಾಡಿ. ನಮ್ಮ ಭೈರಪ್ಪನವರು ಕೂತರೆ ಆ ಕುರ್ಚಿಗೂ ಒಂದು ತೂಕ ಬರತ್ತೆ..
Raki Raghu : Yes everything was right with weekend with ramesh when jayanth kaykini came ,but he also made comments bout people's anger against intellectuals,only in that part he sounded like pseudo ,writing poems ,stories n,novels is right but to tell that they are beyond criticism for their absurd views is wrong.
Kumar Gowda : ನಾನು ಗಮನಿಸಿದ ವಿಷಯ ಏನೆಂದರೆ ಭೈರಪ್ಪನವರನ್ನ ಕೆಲವರು "ಮಹಾನ್ ವೆಕ್ತಿ ಎಂದು ಹೇಳುತಿದ್ದಾರೆ ಆದರೆ ಒಂದಂತಗತು ನಿಜ ಭೈರಪ್ಪ ರವರು ಅವರನ್ನ ಅವರು ಎಂದಿಗೂ ಮಹಾನ್ ಎಂದೋ ಅಥವ ಮೇರು ವೆಕ್ತಿ ಎಂದೋ ಅಂದುಕೊಂಡಿಲ್ಲ ನಿಜಕ್ಕು ಅವರು ಸರಳ ಸಜ್ಜನಿಕೆಯ ವೆಕ್ತಿತ್ವ ಮತ್ತು ಅವರು ಬೇರವರಿಗಿಂತ ದೊಡ್ಡವನು ಎಂದು ಕೊಳದ ಹಾಲಿನಂತಹ ಮನಸ್ಸು
Lohith BN: ಎಸ್ ಎಲ್ ಬಿ ಅವರ ಅಭಿಪ್ರಾಯ ಎಷ್ಟೂ ಬಾರಿ ತಿಳಿಸಿದ್ದಾರೆ... ಎಲ್ಲರಿಗೂ ಗೊತ್ತಿರುವ ಸಂಗತಿಗಳು... ಬೇಡ ಅನ್ಸುತ್ತೆ...
Dharani Basavarajappa : ಯವಾಧೋ ಒಂಧು ಚಾನಲ್ ಮುಂದೇ ಬೈರಪ್ಪ ಅಂಥ ಸಾಹಿತಿ ಕೈ ಕಟ್ಟಿ ನಿಲ್ಬೇಕ ಸ್ವಾಮಿ ?, ಮರ್ಯಾಧೆ ತರೋ ಕೆಲ್ಸ ಅಲ್ಲ ಇದು
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications