ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಡೆದರೆ ಹುಲಿಯನ್ನೇ ಹೊಡಿಬೇಕು, ಕತ್ತೆಯನ್ನಲ್ಲ : ಪ್ರತಾಪ್ ಸಿಂಹ

|
Google Oneindia Kannada News

ಮೈಸೂರು, ಸೆಪ್ಟೆಂಬರ್. 21 : "ಹೊಡೆದರೆ ಹುಲಿಯನ್ನೇ ಹೊಡೆದೊಡಿಸಬೇಕೇ ವಿನಃ ಕತ್ತೆಯನ್ನಲ್ಲ"....ಇದು ಸಂಸದ ಪ್ರತಾಪ್ ಸಿಂಹ ಸಚಿವ ಜಿಟಿ.ದೇವೇಗೌಡರ ಗೆಲುವಿನ ಬಗ್ಗೆ ಆಡಿದ ಮಾತುಗಳು.

ವಿಡಿಯೋ: ನಡುರಸ್ತೆಯಲ್ಲಿ ಪ್ರತಾಪ್ ಸಿಂಹಗೆ ಸ್ವಪಕ್ಷದವರಿಂದಲೇ ಮಂಗಳಾರತಿವಿಡಿಯೋ: ನಡುರಸ್ತೆಯಲ್ಲಿ ಪ್ರತಾಪ್ ಸಿಂಹಗೆ ಸ್ವಪಕ್ಷದವರಿಂದಲೇ ಮಂಗಳಾರತಿ

ಮೈಸೂರಿನ ನಾಗನಹಳ್ಳಿ ರೈಲ್ವೆ ನಿಲ್ದಾಣ ಸ್ಥಳ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು ಜಿಟಿಡಿಯವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಶಕ್ತಿ ಏನು ಎಂಬುದನ್ನು ತೋರಿಸಿದ್ದಾರೆ.

 ಬಂದ್ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್-ಜೆಡಿಎಸ್ ಜಾಲಾಡಿದ ಪ್ರತಾಪ್ ಸಿಂಹ ಬಂದ್ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್-ಜೆಡಿಎಸ್ ಜಾಲಾಡಿದ ಪ್ರತಾಪ್ ಸಿಂಹ

ನಮ್ಮ ಉತ್ತರ ಕರ್ನಾಟಕ ಮಾತಿನ ಶೈಲಿಯಲ್ಲಿ ಹೇಳಬೇಕಾದರೆ 'ಹೊಡೆದರೆ ಹುಲಿಯನ್ನೇ ಹೊಡಿಬೇಕು, ಕತ್ತೆಯನ್ನಲ್ಲ' ಎನ್ನುವ ಮಾತಿಗೆ ತಕ್ಕ ಹಾಗೆ ಮುಖ್ಯಮಂತ್ರಿ ಸ್ಥಾನದಲ್ಲಿದ್ದ ಸಿದ್ದರಾಮಯ್ಯನವರನ್ನೇ ಸೋಲಿಸಿದ್ದಾರೆ ಎಂದು ಜಿಟಿಡಿ ಗೆಲುವಿನ ಪರಿಯನ್ನು ಹೊಗಳಿದರು.

ಪ್ರತಾಪ್ ಸಿಂಹ ಅವರ ಈ ಹೇಳಿಕೆ ಇದೀಗ ಸಾಕಷ್ಟು ಕುತೂಹಲ ಮೂಡಿಸಿದೆ.

MP Pratap Simha praised Minister GT Deve Gowda today

ದಂಗೆ ಹೇಳಿಕೆ ಸಮರ್ಥಿಸಿಕೊಂಡ ಜಿಟಿಡಿ
ವಿರೋಧ ಪಕ್ಷದ ವಿರುದ್ಧ ರಾಜ್ಯದಲ್ಲಿ ಜನ ದಂಗೆ ಏಳಬೇಕೆನ್ನುವ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಜಿ.ಟಿ. ದೇವೇಗೌಡ, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಮಾಡಲು ಬಿಡುತ್ತಿಲ್ಲ. ಒಂದು ಕಡೆ ಭೀಕರ ಬರಗಾಲ, ಮತ್ತೊಂದು ಕಡೆ ನೆರೆ ಇದೆ.

 ಮೈಸೂರು ಮಹಾನಗರ ಪಾಲಿಕೆ ಚುನಾವಣೆ : ಪ್ರತಾಪ್ ಸಿಂಹ ಹೇಳಿದ್ದೇನು ? ಮೈಸೂರು ಮಹಾನಗರ ಪಾಲಿಕೆ ಚುನಾವಣೆ : ಪ್ರತಾಪ್ ಸಿಂಹ ಹೇಳಿದ್ದೇನು ?

MP Pratap Simha praised Minister GT Deve Gowda today

ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದವರು ರಾಜ್ಯದ ಅಭಿವೃದ್ಧಿಗೆ ತೊಂದರೆ ಮಾಡುತ್ತಿದ್ದಾರೆ. ಆಡಳಿತ ಪಕ್ಷಕ್ಕೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಡಬೇಕು ಎನ್ನುವ ಅರ್ಥದಲ್ಲಿ ಸಿಎಂ ಹಾಗೇ ಮಾತನಾಡಿದ್ದಾರೆ. ಬೇರೆ ಯಾವುದೇ ದುರುದ್ದೇಶದಿಂದ ಈ ಹೇಳಿಕೆಯನ್ನು ನೀಡಿಲ್ಲ ಎಂದು ಸ್ಪಷ್ಟನೆ ನೀಡಿದರು.

English summary
MP Pratap Simha praised Minister GT Deve Gowda today. He spoke at Naganahalli railway station location inspection meeting in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X