ಪತಿಯ ಕಾಟ ತಾಳಲಾರದೆ ತಾನೇ ಹೆತ್ತ ಮಗುವನ್ನು ಕೊಂದ ತಾಯಿ

Recommended Video

      ಟಿ ನರಸೀಪುರದಲ್ಲಿ ತಾಯಿ ಮಗುವಿನ ಜೀವದ ಹೃದಯ ವಿದ್ರಾವಕ ಘಟನೆ ನಡೆದಿದೆ | Oneindia Kannada

      ಮೈಸೂರು, ಜುಲೈ.08: ತಾಯಿಯೇ ತನ್ನ ಮಗುವನ್ನು ಕೊಂದ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ತಿ. ನರಸೀಪುರ ತಾಲೂಕಿನ ಮಾರನಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.

      ಹೆಣ್ಣು ಹೆತ್ತಳೆಂದು ಪತಿರಾಯ ಪತ್ನಿಗೆ ಯಾವಾಗಲೂ ಚಿತ್ರಹಿಂಸೆ ನೀಡುತ್ತಿದ್ದ. ಇದರಿಂದ ನೊಂದ ಆಕೆ ತಾನು ಹೆತ್ತ ಮಗುವನ್ನು ಕೊಂದು ನದಿಗೆ ಎಸೆದಿದ್ದಾಳೆ. ಮಗು ಹದಿನೈದು ದಿನಗಳ ಹಿಂದಷ್ಟೇ ಜನಿಸಿತ್ತು.

      ಮಾರನಪುರ ಅಂಗನವಾಡಿ ಕೇಂದ್ರದ ಸಹಾಯಕಿ ಪ್ರಭಾವತಿಯೇ ಹೆಣ್ಣು ಮಗುವನ್ನು ಹತ್ಯೆಗೈದ ತಾಯಿ.

      Mother has killed her baby in Maranapura village

      ಹೆತ್ತ ಮಗುವನ್ನೇ ಅಪಹರಿಸಿ ಹತ್ಯೆ

      ಇನ್ನೊಂದು ಪ್ರಕರಣದಲ್ಲಿ ಇತ್ತೀಚೆಗೆ ತಂದೆಯ ಜತೆಗಿದ್ದ 14 ತಿಂಗಳ ಮಗುವನ್ನು ಅಪಹರಿಸಿ, ಕೊಂದು, ಹೂತುಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಹೆತ್ತ ಮಹಿಳೆ ಸೇರಿದಂತೆ ಆಕೆಯ ಪ್ರಿಯಕರ ಮತ್ತು ಸ್ನೇಹಿತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು.

      ಪ್ರಕರಣವು ಮಗು ಕಾಣೆಯಾಗಿದ್ದರ ಬಗ್ಗೆ ತಂದೆ ಪೊಲೀಸರಿಗೆ ದೂರು ನೀಡಿದಾಗ ಬೆಳಕಿಗೆ ಬಂದಿತ್ತು. ಆರೋಪಿ ಮಹಿಳೆಗೆ 6 ತಿಂಗಳ ಹಿಂದೆ ಯುವಕನೊಬ್ಬನ ಜತೆ ಪ್ರೇಮಾಂಕುರಗೊಂಡಿತು. ನವೆಂಬರ್‌ 2017ರಲ್ಲಿ ಗಂಡ ಮತ್ತು ಮಗುವನ್ನು ತೊರೆದು ಪ್ರಿಯಕರನ ಜತೆ ಓಡಿ ಹೋಗಿದ್ದಳು.

      ನಂತರ ಪ್ರಿಯಕರ ಜತೆ ಭಿವಂಡಿಗೆ ಮರಳಿದ ಜೋಡಿ, ಅದೇ ಪ್ರದೇಶದಲ್ಲಿ ಜೀವಿಸತೊಡಗಿದರು. ಮಗುವಿನಿಂದ ಮುಂದೆ ಸಮಸ್ಯೆ ಎದುರಾಗಬಹುದು ಎಂದು ಯೋಚಿಸಿದ ಜೋಡಿ ಮಗುವನ್ನು ಕೊಂದು ಹಾಕಲು ನಿರ್ಧರಿಸಿತು.

      ತನಿಖೆ ವೇಳೆ ಮೂವರು ರೋಪಿಗಳು ಮಗುವನ್ನು ಅಪಹರಿಸಿ ಹತ್ಯೆ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದರು. ಆರೋಪಿಗಳು ತೋರಿಸಿದ ಜಾಗದಲ್ಲಿ ಅಗೆದು ನೋಡಿದಾಗ ಮಗುವಿನ ಶವ ಕಂಡುಬಂದಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+