ದಡದಹಳ್ಳಿಯಲ್ಲಿ ಏಕಾಏಕಿ 80ಕ್ಕೂ ಹೆಚ್ಚು ಕುರಿಗಳ ದಾರುಣ ಸಾವು

ಮೈಸೂರು, ಅಕ್ಟೋಬರ್. 05: ಏಕ ಕಾಲದಲ್ಲಿ 80ಕ್ಕೂ ಹೆಚ್ಚು ಕುರಿಗಳು ಒಂದೊಂದಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ದಡದಳ್ಳಿಯಲ್ಲಿ ಗುರುವಾರ ನಡೆದಿದೆ.

ಈ ಕುರಿಗಳು ತುಮಕೂರು ಶಿರಾ ಮೂಲದ ಮಾಲೀಕರಿಗೆ ಸೇರಿವೆ. ಮಾಲೀಕರು ಕುರಿ ಮೇಯಿಸುವುದಕ್ಕಾಗಿ ತುಮಕೂರಿನಿಂದ ಮೈಸೂರಿಗೆ ಬಂದಿದ್ದಾರೆ. ಎಂದಿನಂತೆ ಕುರಿಗಳು ಊರು ಊರಿನ ಮೇಲೆ ಮೇಯುತ್ತಾ ಸಾಗಿವೆ. ಅಂತೆಯೇ ಗುರುವಾರ ದಡದಳ್ಳಿಯಲ್ಲಿ ಮೇಯಲು ಬಿಟ್ಟಿದ್ದಾಗ ಈ ಘಟನೆ ನಡೆದಿದೆ.

ಕುರಿ ಮೇವಿನಲ್ಲಿ ವಿಷ ಸೇವನೆ ಶಂಕೆ ವ್ಯಕ್ತವಾಗಿದೆ. ಇದ್ದಕ್ಕಿದ್ದಂತೆ ಬೆಳಗ್ಗೆಯಿಂದಲೇ ಕುರಿಗಳೆಲ್ಲಾ ಒಂದೊಂದಾಗಿ ಸತ್ತಿವೆ. ಇದನ್ನು ಗಮನಿಸಿದ ಮಾಲೀಕರು ದಿಗ್ಭ್ರಾಂತರಾಗಿದ್ದಾರೆ. ದಿಕ್ಕೇ ತೋಚದಂತಾದ ಅವರು, ಗ್ರಾಮಸ್ಥರ ಸಹಾಯದಿಂದ ಕೂಡಲೇ ವೈದ್ಯರನ್ನು ಸಂಪರ್ಕಿಸಿದ್ದಾರೆ.

More than 80 sheep were died on Thursday in Dadadahalli

ಈ ವೇಳೆ ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸಿದರು. ಆದರೆ, ಕುರಿಗಳ ಸಾವಿಗೆ ನಿಖರ ಕಾರಣ ಏನೂ ಎಂಬುದು ತಿಳಿದು ಬಂದಿಲ್ಲ.

ಮಟನ್ ಸ್ಟಾಲ್ ಸೇರಿದ ಕುರಿಗಳು
ಈ ನಡುವೆ ಬೆಳಗ್ಗೆಯಿಂದಲೇ ಒಂದಾದ ಮೇಲೊಂದರಂತೆ ಕುರಿಗಳು ಸಾವನ್ನಪ್ಪುತ್ತಿದ್ದಂತೆಯೇ ಮಟನ್ ಸ್ಟಾಲ್ ಮಾಲೀಕರು ಸತ್ತ ಕುರಿಗಳನ್ನು ಅಂಗಡಿಗೆ ಹೊತ್ತೊಯ್ದರು. ಕುರಿ ಮಾಂಸ ಖರೀದಿಸುವವರು ಕೊಳ್ಳುವ ಮುಂಚೆ ಎಚ್ಚರವಹಿಸಬೇಕು ಎಂದು ಕುರಿಗಾಹಿಗಳು ಮನವಿ ಮಾಡಿದರು. ಈ ಸಂಬಂಧ ವಿದ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+