ಚಹಾ ವಿತರಿಸಿ ಸಂಭ್ರಮಿಸಿದ ಮೋದಿ ಅಭಿಮಾನಿಗಳು
ಮೈಸೂರು, ಮೇ 30: ದೇಶದ ಪ್ರಧಾನಿಯಾಗಿ ಎರಡನೇ ಬಾರಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ, ಮೋದಿ ಅಭಿಮಾನಿ ಬಳಗದ ವತಿಯಿಂದ ಮೈಸೂರಿನ ಚಾಮುಂಡಿಪುರಂನ ಅಪೂರ್ವ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಚಹಾ ವಿತರಣೆ ಮಾಡಿ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭ ಮೋದಿ ಅಭಿಮಾನಿ ಬಳಗದ ಅಧ್ಯಕ್ಷ ಜಯಸಿಂಹ ಶ್ರೀಧರ್ ಮಾತನಾಡಿ, ನರೇಂದ್ರ ಮೋದಿ ಅವರು ಎರಡನೇ ಬಾರಿ ನಮ್ಮ ದೇಶದ ಪ್ರಧಾನಿಯಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಚಾರ. ದೇಶವನ್ನು ಮುನ್ನಡೆಸಿ, ನಮ್ಮ ದೇಶವನ್ನು ವಿಶ್ವದಾದ್ಯಂತ ಪರಿಚಯಿಸಿ ಅಲ್ಲಿಂದ ಬಂಡವಾಳವನ್ನು ತಂದು ಮೇಕ್ ಇನ್ ಇಂಡಿಯಾದಂತಹ ಯೋಜನೆಯನ್ನು ಮಾಡಿರುವುದು ವಿಶ್ವಾಸಾರ್ಹ ಎಂದರು.

ಇಂದು ಇಡೀ ಭಾರತದಾದ್ಯಂತ ಮೋದಿಯವರು ಬಹುಮತ ಪಡೆದು ಜಯಭೇರಿ ಬಾರಿಸಿ ಪ್ರಜಾಪ್ರಭುತ್ವದಲ್ಲಿ ಇತಿಹಾಸವನ್ನು ಬರೆದಿದ್ದಾರೆ. ಬಡವರ ಪರ ಕಾಳಜಿ ಇರುವ ವ್ಯಕ್ತಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿದ್ದು ಸಂತಸದ ವಿಚಾರ ಎಂದರು.












Click it and Unblock the Notifications