ತಿರುಗಿ ಬಿದ್ದ ವಿಪ್ರ ಮುಖಂಡರು: ಶಾಸಕ ಸ್ಥಾನ ಶಾಶ್ವತ ಎನ್ನುವ ಭ್ರಮೆ ಇಲ್ಲ ಎಂದು ರಾಮದಾಸ್ ಭಾವುಕ
ನಿಮ್ಮ ಮನೆ ದೇವರ ಮುಂದಿಟ್ಟ 10 ರೂಪಾಯಿಯನ್ನು ನನಗಾಗಿ ನೀಡಿ. ನಿಮಗೆ ಮಾತು ನೀಡುತ್ತೇನೆ, ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಮತದಾರರಲ್ಲಿ ಮನವಿ ಮಾಡಿದ್ದಾರೆ.
ಮೈಸೂರು, ಮಾರ್ಚ್ 6: ನನಗೆ ಶಾಸಕ ಸ್ಥಾನ ಶಾಶ್ವತ ಎಂಬ ಭ್ರಮೆ ಇಲ್ಲ. ಒಂದಲ್ಲ ಒಂದು ದಿನ ಈ ಸ್ಥಾನವನ್ನು ನಾನಾಗಿಯೇ ಬಿಡುತ್ತೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಭಾವುಕರಾದರು.
ಮೈಸೂರಿನ ನವಿಲು ರಸ್ತೆಯಲ್ಲಿರುವ ರಾಘವೇಂದ್ರ ಮಠದಲ್ಲಿ ನಡೆದ ಯೋಗಕ್ಷೇಮ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾನು ಏಪ್ರಿಲ್ ಮೊದಲ ವಾರದಿಂದ ಮನೆಮನೆ ಯಾತ್ರೆ ಮಾಡಬೇಕೆಂಬ ಸಂಕಲ್ಪ ಮಾಡಿದ್ದೇನೆ. ನೀವು ಸಹಕರಿಸಬೇಕು. ನಿಮ್ಮ ಮನೆ ದೇವರ ಮುಂದಿಟ್ಟ 10 ರೂಪಾಯಿಯನ್ನು ನನಗಾಗಿ ನೀಡಿ. ನಿಮಗೆ ಮಾತು ನೀಡುತ್ತೇನೆ, ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ತಿಳಿಸಿದರು.

ಇತ್ತೀಚಿಗೆ ಕ್ಷೇತ್ರದಲ್ಲಿ ಜಾತಿ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ನಾನು ಜಾತಿ ನೋಡಿ ಅಧಿಕಾರಕ್ಕೆ ಬಂದವನಲ್ಲಘಿ. ಇಷ್ಟು ವರ್ಷದ ಆಡಳಿತದಲ್ಲಿ ಎಂದಿಗೂ ಜಾತಿ ರಾಜಕಾರಣ ಮಾಡಿಲ್ಲ. ಆದರೆ, ಇದೀಗ ಜಾತಿಯನ್ನೇ ಅಸವನ್ನಾಗಿಟ್ಟುಕೊಂಡು ಕೆಲವರು ನಿಮ್ಮ ಬಳಿ ಬರುತ್ತಿದ್ದಾರೆ. ಜಾತಿ ಹೆಸರು ಹೇಳಿಕೊಂಡು ಯಾರಾದರೂ ನಿಮ್ಮ ಮುಂದೆ ಬಂದರೆ ನಂಬಬೇಕು. ಅವರಿಗೆ ಮನ್ನಣೆ ನೀಡಬೇಡಿ ಎಂದು ಮನವಿ ಮಾಡಿದರು. ಇದೇ ವೇಳೆ ಮೇಯರ್ ಶಿವಕುಮಾರ್ ಇದ್ದರು.
ಇತ್ತೀಚಿಗೆ ಬ್ರಾಹ್ಮಣ ಸಮುದಾಯ ಮುಖಂಡರು ಶಾಸಕ ಎಸ್.ಎ.ರಾಮದಾಸ್ ವಿರುದ್ಧ ತಿರುಗಿಬಿದ್ದಿದ್ದರು. ಶಾಸಕ ರಾಮದಾಸ್ ಅವರು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗಗಳನ್ನು ಮಾಡಿಲ್ಲ. ಸೌಲಭ್ಯ ತಂದಿಲ್ಲ ಎಂಬ ಅಸಮಾಧಾನವನ್ನು ಹೊರ ಹಾಕಿದ್ದ ವಿಪ್ರ ಮುಖಂಡರು ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ ಸಮುದಾಯದ ಮತ್ತೊಬ್ಬ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸುವ ಮೂಲಕ ಎಚ್.ವಿ.ರಾಜೀವ್ ಪರ ಪರೋಕ್ಷವಾಗಿ ಬ್ಯಾಟಿಂಗ್ ಮಾಡಿದ್ದರು.
ಇದೀಗ ಶಾಸಕ ರಾಮದಾಸ್ ಅವರ ವಿರುದ್ಧವೇ ಕ್ಷೇತ್ರದ ಕೆಲವು ಬ್ರಾಹ್ಮಣ ಮುಖಂಡರು ತಿರುಗಿ ಬಿದ್ದಿರುವುದನ್ನು ಗಮನಿಸಿದರೆ ಈ ಬೆಳವಣಿಗೆಯನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಒಂದು ವೇಳೆ ರಾಮದಾಸ್ ಅವರಿಗೆ ಟಿಕೆಟ್ ನೀಡದಂತೆ ತಪ್ಪಿಸುವ ಕೆಲಸ ಪಕ್ಷದೊಳಗೆ ನಡೆಯುತ್ತಿದೆಯಾ ಎಂಬ ಪ್ರಶ್ನೆ ಉದ್ಭವಿಸಿದೆ.

ಶಾಸಕ ರಾಮದಾಸ್ ಅವರು ಬ್ರಾಹ್ಮಣ ಸಮುದಾಯಕ್ಕೆ ಯಾವುದೇ ರೀತಿಯ ಉಪಯೋಗಗಳನ್ನು ಮಾಡಿಲ್ಲ. ಸೌಲಭ್ಯ ತಂದಿಲ್ಲ ಎಂಬ ಅಸಮಾಧಾನವನ್ನು ಹೊರ ಹಾಕಿರುವ ವಿಪ್ರ ಮುಖಂಡರು ಮುಂದಿನ ಚುನಾವಣೆಗೆ ಅವರಿಗೆ ಟಿಕೆಟ್ ನೀಡದೆ ಸಮುದಾಯದ ಮತ್ತೊಬ್ಬ ನಾಯಕನಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಕಳೆದ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಚುನಾವಣೆ ನಡೆದಾಗಲೆಲ್ಲ ರಾಮದಾಸ್ ಅವರೇ ಅಭ್ಯರ್ಥಿ ಆಗಿ ಮುಂದುವರೆಯುತ್ತಿದ್ದಾರೆ. ಇದು ಮುಂದುವರೆದರೆ ಇತರೆ ನಾಯಕರು ಮುನ್ನಲೆಗೆ ಬರುವುದು ಹೇಗೆ ಎಂಬ ಅಸಮಾಧಾನವೂ ಸಮುದಾಯದಲ್ಲಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.












Click it and Unblock the Notifications