ಪಾರ್ಕ್ ಮಾಡಿದ್ದ ಮಿನಿ ಬಸ್, ಟಾಟಾ ಸುಮೋಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಮೈಸೂರು, ಫೆಬ್ರವರಿ 19: ಪಾರ್ಕ್ ಮಾಡಿದ್ದ ಮಿನಿ ಬಸ್ ಮತ್ತು ಟಾಟಾ ಸುಮೋ ವಾಹನಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತಿ ಮೆರೆದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ನಾಚನಹಳ್ಳಿಯಲ್ಲಿ ನಡೆದಿದೆ.

ನಿನ್ನೆ ತಡರಾತ್ರಿ ದುಷ್ಕರ್ಮಿಗಳು ನಾಚನಹಳ್ಳಿ ಬಳಿ ಪಾರ್ಕ್ ಮಾಡಲಾಗಿದ್ದ, ಅನ್ವರ್ ಎಂಬುವರಿಗೆ ಸೇರಿದ ಮಿನಿ ಬಸ್ ಮತ್ತು ಟಾಟಾ ಸುಮೋಕ್ಕೆ ಬೆಂಕಿ ಹಚ್ಚಿದ್ದು, ಮಿನಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಟಾಟಾ ಸುಮೋ ಮುಂದಿನ ಭಾಗ ಹಾನಿಗೊಳಗಾಗಿದೆ. ಅಷ್ಟೇ ಅಲ್ಲದೇ ಇನ್ನೊಂದು ಮಿನಿ ಬಸ್ ಗೂ ಬೆಂಕಿ ತಗುಲಿದ್ದು ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಆದರೆ ಯಾರು ಏಕೆ ಬೆಂಕಿ ಹಚ್ಚಿದ್ದಾರೆ ಎಂಬುದು ತಿಳಿದುಬಂದಿಲ್ಲ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೆಂಕಿ ಹಚ್ಚಿರಬೇಕೆಂಬ ಶಂಕೆ ವ್ಯಕ್ತವಾಗಿದೆ.

Miscreants Put Fire To Mini Bus And Tata Sumo Vidyaranyapuram

ವಾಹನದ ಮಾಲೀಕ ಅನ್ವರ್ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+