ಗ್ರಾಮೀಣ ದಸರಾಗೆ ಅದ್ದೂರಿ ಚಾಲನೆ, ಗಮನ ಸೆಳೆದ ಮಾಹಿತಿ ರಥ

ಮೈಸೂರು, ಸೆಪ್ಟೆಂಬರ್ 29: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮೈಸೂರು ತಾಲ್ಲೂಕಿನ ಜಯಪುರ ಗ್ರಾಮದಲ್ಲಿ ಗುರುವಾರ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವು ಸಂಭ್ರಮ, ಸಡಗರದಿಂದ ನೆರವೇರಿತು. ಗ್ರಾಮೀಣ ದಸರಾಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ದಾರಿಪುರ ಗ್ರಾಮದ ಕರೂರು ಬಸವೇಶ್ವರ ದೇವಸ್ಥಾನದ ಬಳಿ ದೇವರ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು‌.

ಬಳಿಕ ಮಾತನಾಡಿದ ಅವರು, "ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲೂ ಗ್ರಾಮೀಣ ದಸರಾ ಅಚರಣೆ ಮಾಡಲಾಗುತ್ತಿದೆ‌. ಕೋವಿಡ್ ಕಾರಣದಿಂದಾಗಿ ಕಳೆದ‌ ಎರಡು ವರ್ಷದಿಂದ ದಸರಾ ಆಚರಣೆಗೆ‌ ತೊಡಕಾಗಿದ್ದು, ಈ ಬಾರಿ ಅದ್ಧೂರಿ‌ ದಸರಾ‌ ಮಾಡಲಾಗುತ್ತಿರುವುದು ಬಹಳ ಸಂತಸವಾಗಿದೆ . ಮೈಸೂರು ತಾಲ್ಲೂಕಿನಲ್ಲಿ ಬಹಳ ಅದ್ಧೂರಿಯಿಂದ ಸಂಪ್ರದಾಯಕವಾಗಿ ಗ್ರಾಮೀಣ ದಸರಾ ಆಚರಿಸಲಾಗುತ್ತಿದ್ದು, ಸಾಂಸ್ಕೃತಿಕ ಕಲಾತಂಡಗಳಿಂದ ಮತ್ತಷ್ಟು ಮೆರಗು ದೊರಕಿದೆ. ಜಿಲ್ಲೆಯ ಎಲ್ಲಾ ಅಧಿಕಾರಿ ದಸರಾ ಕಾರ್ಯಕ್ರಮವನ್ನು ಉತ್ತಮವಾಗಿ ಆಯೋಜಿಸುತ್ತಿದ್ದಾರೆ ಎಂದು ಹೇಳಿದರು.

ಬಳಿಕ ಶಾಸಕರಾದ ಜಿ.ಟಿ.ದೇವೇಗೌಡ ಅವರು ಮಾತನಾಡಿ, " ಗ್ರಾಮೀಣ ಭಾಗದಲ್ಲಿ ಗ್ರಾಮೀಣ ದಸರಾ ಆಚರಣೆ ಮಾಡುತ್ತಿರುವುದು ಬಹಳ ಸಂತೋಷದಾಯಕವಾಗಿದೆ. ದಸರೆಯನ್ನು ಗ್ರಾಮೀಣ ಭಾಗದಲ್ಲಿ ಆಚರಿಸುವ ಮೂಲಕ ದಸರಾ ಸಂಭ್ರಮವು ಎಲ್ಲರ ಮನೆ ತಲುಪಿತಂದಾಗಿದೆ. ತಾಲ್ಲೂಕಿನಲ್ಲಿ ಗ್ರಾಮೀಣ ದಸರಾವನ್ನು ಬಹಳ ಅಚ್ಚುಕಟ್ಟಾಗಿ ಆಚರಣೆ ಮಾಡಲಾಗುತ್ತಿದ್ದು, ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಸರಕಾರದ ಮಾಹಿತಿಯು ಸಾರ್ವಜನಿಕರಿಗೆ ತಿಳಿಸುವಂಥ ಮಾಹಿತಿ ರಥಗಳನ್ನು ಬಹಳ ವ್ಯವಸ್ಥಿತವಾಗಿ ಆಯೋಜಿಸಿದ್ದಾರೆ," ಎಂದು ಹೇಳಿದರು.

Minister ST Somashekar, MLA GT Devegowda Inaugurate Grameena Dasara

ವಿವಿಧ ಯೋಜನೆಗಳ 25 ಮಾಹಿತಿ ರಥಗಳು
ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳು, ಡೋಲು, ವಾದ್ಯಗಳ ನಿನಾದ, ಟಾಂಗಾ ಸರೋಟು ನಡಿಗೆ, ಸಾಂಸ್ಕೃತಿಕ ಕಲಾ ತಂಡಗಳ ಅದ್ಭುತ ನೃತ್ಯ ಪ್ರದರ್ಶನ, ಸರಕಾರದ ವಿವಿಧ ಯೋಜನೆಗಳ 25 ಮಾಹಿತಿ ರಥಗಳು, 101 ಪೂರ್ಣಕುಂಭ ಸ್ವಾಗತದ ಜೊತೆಗೆ ಜಯಪುರ ಗ್ರಾಮದ ಗುಜ್ಜಮ್ಮ ದೇವಸ್ಥಾನದ ಬಳಿಯ ವೇದಿಕೆ ಕಾರ್ಯಕ್ರಮಕ್ಕೆ ಮೆರವಣಿಗೆಯು ಸಾಗಿತು.

Minister ST Somashekar, MLA GT Devegowda Inaugurate Grameena Dasara

ದಸರಾ ಸಂಭ್ರಮವನ್ನು ಮನೆಮನೆಗೆ ತಲುಪಿಸುವ ಉದ್ದೇಶ
ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ದಸರಾ ಸಂಭ್ರಮವು ಎಲ್ಲರ ಮನೆಮನೆಗೆ ತಲುಪಿಸುವ ಉದ್ದೇಶದಿಂದ ಸರಕಾರವು ಗ್ರಾಮೀಣ ದಸರಾ ಆಚರಿಸಲಾಗುತ್ತದೆ. ಜಯಪುರದಲ್ಲಿ ನಡೆದ ಗ್ರಾಮೀಣ ದಸರಾ ಆಚರಣೆಯೂ ಜಂಬೂ ಸವಾರಿ ಮೆರವಣಿಗೆಯಷ್ಟೇ ಸಂಭ್ರಮದಿಂದ ಕೂಡಿದೆ ಎಂದು ತಿಳಿಸಿದರು.

Minister ST Somashekar, MLA GT Devegowda Inaugurate Grameena Dasara

ಗ್ರಾಮೀಣ ದಸರಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಆರೋಗ್ಯ ತಪಾಸಣಾ ಶಿಬಿರ ಹಾಗೂ ವಿವಿಧ ಇಲಾಖೆಯ ಮಳಿಗೆಗಳನ್ನು ಶಾಸಕರಾದ ಜಿ.ಟಿ.ದೇವೇಗೌಡ ಉದ್ಘಾಟಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+