ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ ನ.28ರಂದು ಅತ್ಯಾಧುನಿಕ ಇಎಸ್ಐ ಆಸ್ಪತ್ರೆ ಲೋಕಾರ್ಪಣೆ

|
Google Oneindia Kannada News

ಮೈಸೂರು, ನವೆಂಬರ್.27: ಇಎಸ್ಐ 100 ಹಾಸಿಗೆಗಳ ಆಸ್ಪತ್ರೆಯನ್ನು ನ.28ರಂದು ಬೆಳಗ್ಗೆ 10.30ಕ್ಕೆ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವ ಸಂತೋಷ್ ಕುಮಾರ್ ಉದ್ಘಾಟಿಸಲಿದ್ದಾರೆ.

ಜಿಲ್ಲಾಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪ , ಸಂಸದ ಪ್ರತಾಪ್ ಸಿಂಹ ಮತ್ತು ಶಾಸಕ ನಾಗೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು ನಾಲ್ಕು ದಿನದಲ್ಲಿ 200 ಬಡ ರೋಗಿಗಳ ಜೀವ ಉಳಿಸಿದ ಜಯದೇವ ವೈದ್ಯರು

ಯುಪಿಎ ಸರ್ಕಾರದ ಅವಧಿಯಲ್ಲಿ ಕಾರ್ಮಿಕ ಮತ್ತುಉದ್ಯೋಗ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ಮೈಸೂರಿನ ಇಎಸ್ಐ ಆಸ್ಪತ್ರೆ ಅಭಿವೃದ್ಧಿಗೆ 24 ಕೋಟಿ ರೂ. ಗಳ ಅನುದಾನ ನೀಡಿದ್ದರೂ ತಾಂತ್ರಿಕ ಸಮಸ್ಯೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ವಿಳಂಬವಾಯಿತು.

Minister Santosh Kumar will inaugurate the ESI hospital

ಎನ್ ಡಿಎ ಸರಕಾರದ ಅವಧಿಯಲ್ಲೂ ಒಂಬತ್ತು ಕೋಟಿ ರೂ.ಗಳ ಅನುದಾನ ನೀಡಲಾಗಿದ್ದು, ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಅಣಿಯಾಗಿದೆ. ಮಂಡ್ಯ, ಕೊಡಗು, ಚಾಮರಾಜನಗರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿ ಒಟ್ಟು 1.27 ಲಕ್ಷಕಾರ್ಮಿಕರು ಇಎಸ್ಐ ಸೌಲಭ್ಯವನ್ನು ಪಡೆಯುತ್ತಿದ್ದಾರೆ.

ಈ ಸೇವೆಯನ್ನು ಪಡೆಯಲು ಮಾಸಿಕ ವೇತನವನ್ನು 15 ಸಾವಿರ ರೂ.ಗಳಿಂದ 21 ಸಾವಿರ ರೂ.ಗೆ ಏರಿಕೆ ಮಾಡಲಾಗಿದೆ.

ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ?ವರದಕ್ಷಿಣೆ ಕಿರುಕುಳಕ್ಕೆ ಬಿಬಿಎಂಪಿ ಆಸ್ಪತ್ರೆ ಡಾಕ್ಟರ್ ಅಶ್ವಿನಿ ಬಲಿ?

ಮೈಸೂರಿನ ನೂತನ ಇಎಸ್ಐ ಆಸ್ಪತ್ರೆಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ಬಳಿಕ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸುಮಾರು
33. 10 ಕೋಟಿ ವೆಚ್ಚದ ನೂರು ಹಾಸಿಗೆಯುಳ್ಳ ಆಸ್ಪತ್ರೆ ಇದಾಗಿದ್ದು, ಅತ್ಯಾಧುನಿಕ ಉಪಕರಣಗಳಿಗಾಗಿ 10 ಕೋಟಿ ವೆಚ್ಚದ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.

Minister Santosh Kumar will inaugurate the ESI hospital

ಆಸ್ಪತ್ರೆ ತುಂಬಾ ನಿಧಾನಗತಿಯಲ್ಲಿ ಉದ್ಘಾಟನೆಯಾಗುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಮಂತ್ರಿಯಾಗಿದ್ದ ವೇಳೆ ಕಟ್ಟಡ ಶಂಕುಸ್ಥಾಪನೆಯಾಗಿತ್ತು. ಆದ್ರೆ ಸಾಕಷ್ಟು ಸಮಸ್ಯೆಗಳ ನಡುವೆ ಈ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯ ಈಗ ಲಭಿಸಿದೆ ಎಂದು ತಿಳಿಸಿದರು.

40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ40 ವರ್ಷದ ಬಳಿಕ ಮಹಿಳೆಯರಿಗೆ ಮ್ಯಾಮೊಗ್ರಾಮ್ ಟೆಸ್ಟ್‌ ಕಡ್ಡಾಯ: ಸಲಹೆ

ಇನ್ನು ಕಟ್ಟಡಕ್ಕೆ ಹಲವು ಯಂತ್ರೋಪಕರಣಗಳು ಅಗತ್ಯ ಇವೆ. ನಾಳೆ ಕೇಂದ್ರ ಕಾರ್ಮಿಕ ಸಚಿವ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಜೊತೆ ಚರ್ಚೆ ಮಾಡುತ್ತೇನೆ. ಆಸ್ಪತ್ರೆಗೆ ಅತ್ಯಾಧುನಿಕ ಸೌಲಭ್ಯ, ಮೂಲಭೂತ ಸೌಕರ್ಯ, ಖಾಲಿ ಇರುವ ವೈದ್ಯರ ಹುದ್ದೆಗಳ ಬಗ್ಗೆ ಮನವರಿಕೆ ಮಾಡುತ್ತೇನೆ ಎಂದು ಹೇಳಿದರು.

English summary
Minister Santosh Kumar will inaugurate the renovated 100 beds ESI hospital in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X