ವಿಡಿಯೋ:ಬಸವ ಜಯಂತಿ ಕಾರ್ಯಕ್ರಮದ ವೇಳೆ ಸಖತ್ ಸ್ಟೆಪ್ಸ್ ಹಾಕಿದ ಜಿಟಿ ದೇವೇಗೌಡ

ಮೈಸೂರು, ಮೇ 7: ರಾಜ್ಯಾದ್ಯಂತ ಸಮಾನತೆಯ ಹರಿಕಾರ ಬಸವ ಜಯಂತಿ ಕಾರ್ಯಕ್ರಮವು ಸರ್ಕಾರದ ವತಿಯಿಂದ ಅದ್ಧೂರಿಯಾಗಿ ಜರುಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಸವ ಜಯಂತಿ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ನಗರದ ವಿವಿಧ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಮೈಸೂರಿನ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣ ಪುತ್ಥಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಮಾಲಾರ್ಪಣೆ ಮಾಡಿದರು. ಸಚಿವ ಜಿಟಿಡಿಗೆ ಸುತ್ತೂರು ಶ್ರೀಗಳು ಸಾಥ್ ನೀಡಿದರು. ಬಳಿಕ ನಗರದ ವಿವಿಧೆಡೆ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ನಗರದ ಗನ್ ಹೌಸ್ ಬಳಿ ಮೆರವಣಿಗೆಗೆ ಸುತ್ತೂರು ಶ್ರೀಗಳು ಚಾಲನೆ ನೀಡಿದರು.

Minister GT Devegowda danced in Basava Jayanthi road show

ಸುತ್ತೂರು ಶ್ರೀಗಳಿಗೆ ಜಿ.ಟಿ ದೇವೇಗೌಡ ಮತ್ತು ಶಾಸಕ ನಾಗೇಂದ್ರ ಸಾಥ್ ನೀಡಿದರು.

ಮೆರವಣಿಗೆ ವೇಳೆ ಜಿಟಿ ದೇವೇಗೌಡರು ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ್ದು ವಿಶೇಷವಾಗಿತ್ತು. ತಮಟೆ ತಾಳಕ್ಕೆ ತಕ್ಕಂತೆ ದೇವೇಗೌಡರು ಕುಣಿದರು. ಇನ್ನು ಸಚಿವರ ಸ್ಟೆಪ್ಸ್ ಗೆ ನೋಡುಗರು ಫಿದಾ ಆಗಿ, ಶಿಳ್ಳೆ ಚಪ್ಪಾಳೆ ಸಹ ಹೊಡೆದರು. ಇನ್ನು ಜಿಟಿ ದೇವೇಗೌಡರ ಜೊತೆ ಪಾಲಿಕೆ ಸದಸ್ಯ ಬಿವಿ ಮಂಜುನಾಥ ಸಹ ನೃತ್ಯಕ್ಕೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+