ಹರಕೆ ತೀರಿಸಲು ಶಬರಿಮಲೆಗೆ ಹೊರಟ ಸಚಿವ ಡಿ.ಕೆ.ಶಿವಕುಮಾರ್
Recommended Video

ಶಬರಿಮಲೈ ದೇವಸ್ಥಾನಕ್ಕೆ ಹೊರಟ ಡಿ ಕೆ ಶಿವಕುಮಾರ್ | Oneindia Kannada
ಮೈಸೂರು, ಜುಲೈ : ಕೆಲವು ತಿಂಗಳುಗಳಿಂದ ಸತತ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ಇದೀಗ ಮಾಲೆಧಾರಿಗಳಾಗಿ ಶಬರಿಮಲೆಗೆ ಹೊರಟಿದ್ದಾರೆ.
ನಿನ್ನೆಯಷ್ಟೆ ಕೆ.ಆರ್.ಎಸ್.ಗೆ ಬಾಗಿನ ಅರ್ಪಿಸಿ ಮಂಡ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರು ಸಂಜೆ ವೇಳೆಗೆ ಮೈಸೂರಿನಲ್ಲಿ ಮಾಲೆಧರಿಸಿ, ಇಡುಮುಡಿ ಹೊತ್ತು ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದಾರೆ. ಸಚಿವರಿಗೆ ಕೆಲವು ಆಪ್ತರು ಜೊತೆಯಾಗಿದ್ದಾರೆ.

ಇಡುಮುಡಿ ಹೊತ್ತು ಕಾಲ್ಮನಿಡೆಗೆಯಲ್ಲಿ ಮಲೆ ಏರಿರುವ ಸಚಿವರು, ತಮ್ಮ ಈ ಧಾರ್ಮಿಕ ಯಾತ್ರೆಯ ಹಲವು ಚಿತ್ರಗಳನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇತ್ತೀಗೆಷ್ಟೆ ತಮ್ಮ ಆರಾಧ್ಯ ಧೈವ ಕಾಡಸಿದ್ದೇಶ್ವರ ಮಠದಲ್ಲಿ ಹೋಮ ಮಾಡಿಸಿದ್ದ ಅವರು, ಹಲವು ದೇವಸ್ಥಾನಗಳ ಭೇಟಿಯನ್ನೂ ಮಾಡಿದ್ದರು. ಐಟಿ ಭಾದೆಯಿಂದ ಪಾರಾಗಲೆಂದು ಹಲವು ಹರಕೆಗಳನ್ನು ಸಚಿವರು ಹೊತ್ತಿದ್ದರೆಂದು ಅದರ ಪೂರೈಸುವಲ್ಲಿ ನಿರತಾರಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications