ಮೈಸೂರು: ಮಳೆಹಾನಿ ತಡೆಗೆ ಟಾಸ್ಕ್‌ಪೋರ್ಸ್ ರಚನೆಗೆ ಸಚಿವ ಬೈರತಿ ಬಸವರಾಜು ಸೂಚನೆ
ಮೈಸೂರು, ಜುಲೈ 9 : ಮಳೆಗಾಲದಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ಟಾಸ್ಕ್‌ಪೋರ್ಸ್ ರಚಿಸುವಂತೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಮೈಸೂರು ಮಹಾನಗರ ಪಾಲಿಕೆಗೆ ಸೂಚನೆ ನೀಡಿದ್ದಾರೆ.
ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಪಾಲಿಕೆ ಹಾಗೂ ಮುಡಾ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದು ಮಳೆಯ ಅವಾಂತರ ಸೃಷ್ಠಿಯಾದಾಗ ಜನರ ನೆರವಿಗೆ ಶೀಘ್ರ ಧಾವಿಸಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲು ಪಾಲಿಕೆ ಆಯುಕ್ತರುಗಳಿಗೆ ಸೂಚನೆ ನೀಡಿದರು. ರಾತ್ರಿಯ ವೇಳೆಯೂ ಟಾಸ್ಕ್ ಪೋರ್ಸ್ ಗಳು ಕೆಲಸ ಮಾಡಬೇಕು. ಜನರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಪಂದಿಸಲು ಸಿದ್ಧರಿರಬೇಕು ಎಂದು ತಿಳಿಸಿದರು.
"ಮಳೆಗಾಲದಲ್ಲಿ ಗಿಡ ನೆಟ್ಟು ಹಸಿರೀಕರಣ ಮಾಡಬೇಕು. ಇನ್ನೂ ಒಂದು ಹೆಚ್ಚೆ ಮುಂದೆ ಹೋಗಿ ಉದ್ಯಾನ ನಗರಿಯಾಗಿಸಲು ಕ್ರಮ ಕೈಗೊಳ್ಳಿ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಹೆಚ್ಚಲಿದೆ. ಕಚೇರಿಗಳಲ್ಲಿ ಕೂರದೇ ಸಾರ್ವಜನಿಕರಿಂದ ಕರೆ ಬಂದ ಕೂಡಲೇ ಸಮಸ್ಯೆ ಇರುವಲ್ಲಿಗೆ ತೆರಳಿ ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಇದಕ್ಕಾಗಿ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ಟಾಸ್ಕ್ ಫೋರ್ಸ್ ನೇಮಕ ಮಾಡಿಕೊಂಡು ದಸರಾ ವೇಳೆಗೆ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು".

"ಕಟ್ಟಡ ಕಾಮಗಾರಿಯನ್ನು ಡಿಸೆಂಬರ್ ನಂತರ ಮಾಡಿ, ಈಗ ಮಳೆ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನಷ್ಟೇ ಕೈಗೊಳ್ಳಿರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದ್ದು ಮಳೆಯ ಅವಾಂತರ ಸೃಷ್ಠಿಯಾದಾಗ ಜನರ ನೆರವಿಗೆ ಶೀಘ್ರ ಧಾವಿಸಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲು ಪಾಲಿಕೆ ಆಯುಕ್ತರುಗಳಿಗೆ ಸೂಚನೆ ಕೊಟ್ಟಿದ್ದಾರೆ. ರಾತ್ರಿಯ ವೇಳೆಯೂ ಟಾಸ್ಕ್ ಪೋರ್ಸ್ ಗಳು ಕೆಲಸ ಮಾಡಬೇಕು.ಜನರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಸ್ಪಂದಿಸಲು ಅವರು ಹೇಳಿದರು." ಎಂದು ಸಲಹೆ ನೀಡಿದರು.
3 ತಿಂಗಳಲ್ಲಿ 104 ಕೋಟಿ ತೆರಿಗೆ
ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, "ಆಸ್ತಿ ತೆರಿಗೆ ಕಳೆದ ಬಾರಿ 162 ಕೋಟಿ ರೂ. ಸಂಗ್ರಹವಾಗಿತ್ತು. ಈ ಬಾರಿ ಶೇ.35ರಷ್ಟು ಹೆಚ್ಚಳ ಕಂಡಿದ್ದು, ಕಳೆದ ಮೂರು ತಿಂಗಳಲ್ಲಿಯೇ 104 ಕೋಟಿ ರೂ. ಸಂಗ್ರಹವಾಗಿದೆ. ಉದ್ದಿಮೆ ಪರವಾನಗಿ, ನವೀಕರಣದಿಂದ ಈ ಬಾರಿ 8 ಕೋಟಿ ರೂ. ಸಂಗ್ರಹವಾಗಿದೆ. ಈ ಸಾಲಿನಲ್ಲಿ 12 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ. ಇದೇ ರೀತಿ ನೀರಿನ ಕರದಿಂದ ಕಳೆದ ವರ್ಷ 66 ಕೋಟಿ ರೂ. ಸಂಗ್ರಹವಾಗಿದೆ. ಈ ಸಾಲಿನಲ್ಲಿ ಈಗಾಗಲೇ 17 ಕೋಟಿ ರೂ. ಸಂಗ್ರಹವಾಗಿದ್ದು ಒಟ್ಟಾರೆಗೆ 70 ಕೋಟಿ ರೂ. ಸಂಗ್ರಹ ಗುರಿ ಹೊಂದಲಾಗಿದೆ," ಎಂದು ಮಾಹಿತಿ ನೀಡಿದರು.

ಮುಡಾದಿಂದ 102 ಕಾಮಗಾರಿ
ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಮಾತನಾಡಿ, "ಮುಡಾ ವ್ಯಾಪ್ತಿಯಲ್ಲಿ 102 ವಿವಿಧ ಕಾಮಗಾರಿಗಳು ನಡೆಯುತ್ತಿವೆ. ಗುಂಪು ವಸತಿ ಯೋಜನೆಯಡಿ ವಿಜಯನಗರ ನಾಲ್ಕನೇ ಹಂತ, ದಟ್ಟಗಳ್ಳಿಯಲ್ಲಿ 341 ಕೋಟಿ ರೂ. ವೆಚ್ಚದಲ್ಲಿ 952 ಮನೆ ನಿರ್ಮಾಣಕ್ಕೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದಲ್ಲದೇ ಕೆಲವು ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ," ಎಂದು ಮಾಹಿತಿ ನೀಡಿದರು.
ಪೌರಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ
ಪೌರಕಾರ್ಮಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಎಂದು ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 22.54 ಕೋಟಿ ರೂ. ವೆಚ್ಚದಲ್ಲಿ 158 ಮನೆಗಳನ್ನು ನೀಡಲು ಯೋಜನೆ ರೂಪಿಸಿ ಆರ್ಥಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಕಸ ಸಂಗ್ರಹ ಸ್ಥಳಗಳನ್ನು ಸುಂದರಗೊಳಿಸಲು 30 ಲಕ್ಷ ನೀಡಲಾಗಿದೆ. 22 ವಾರ್ಡ್‌ಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಅನುದಾನ ದೊರೆತಿದೆ. ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು. ಪೌರಕಾರ್ಮಿಕರು ಆಯ್ಕೆ ಮಾಡಿದ ಸುರಕ್ಷತಾ ಪರಿಕರಗಳನ್ನು ಪಾಲಿಕೆ ಒದಗಿಸಲಿದೆ ಎಂದು ತಿಳಿಸಿದರು.












Click it and Unblock the Notifications