ನಂಜನಗೂಡಿನಲ್ಲಿ ಡಿವೈಡರ್‌ಗೆ ಗುದ್ದಿದ ಮಿನಿ ಬಸ್‌: ಅಯ್ಯಪ್ಪ ಸ್ವಾಮಿ ಭಕ್ತರು ಶಾಕ್

ಮೈಸೂರು, ಸೆಪ್ಟೆಂಬರ್‌ 20: ಹೊರ ರಾಜ್ಯ ಕೇರಳದಿಂದ ಅಯ್ಯಪ್ಪ ಸ್ವಾಮಿ ದರ್ಶನವನ್ನು ಪಡೆದುಕೊಂಡು ಊಟಿ ರಸ್ತೆಯ ಮಾರ್ಗವಾಗಿ ಚಲಿಸುತ್ತಿದ್ದ ಮಿನಿ ಬಸ್ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ಗೆ ಡಿಕ್ಕಿ ಹೊಡೆದ ಘಟನೆ ನಂಜನಗೂಡಿನ ಹೊಸಹಳ್ಳಿ ಗೇಟ್ ಬಳಿ ನಡೆದಿದೆ. ಅಯ್ಯಪ್ಪ ಸ್ವಾಮಿ ಭಕ್ತರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಬೆಂಗಳೂರು ಮೂಲದ ಕಾಮಾಕ್ಷಿಪಾಳ್ಯ ಬೊಮ್ಮ ಸಮುದ್ರ ಮೂಲದ 20 ಜನ ಅಯ್ಯಪ್ಪ ಸ್ವಾಮಿ ಭಕ್ತರು ದರ್ಶನ ಮಾಡುವ ಸಲುವಾಗಿ ಕೆ ಎ 51 ಬಿ 5616 ನಂಬರಿನ ಖಾಸಗಿ ಮಿನಿ ಬಸ್‌ನಲ್ಲಿ ಕೇರಳಕ್ಕೆ ತೆರಳಿದ್ದರು. ಯಾವುದೇ ಅಡೆತಡೆ ಇಲ್ಲದೇ ದೇವರ ದರ್ಶನ ಪಡೆದುಕೊಂಡು ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.

Mini Bus Accident At Nanjangud 20 Devotees Just Miss

ಊಟಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನಂಜನಗೂಡಿನ ಹೊಸಹಳ್ಳಿ ಗೇಟ್ ಬಳಿ ಅಯ್ಯಪ್ಪ ಸ್ವಾಮಿ ಭಕ್ತರು ತೆರಳುತ್ತಿದ ಮಿನಿ ಬಸ್ ಚಾಲಕನ ಅತಿ ವೇಗ ಮತ್ತು ನಿದ್ರೆಗೆ ಜಾರಿದ ಪರಿಣಾಮ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಿನಿ ಬಸ್‌ ಪಲ್ಟಿಯಾಗಿದೆ. ಅದೃಷ್ಟವಶಾತ್‌

ಬಸ್ಸಿನಲ್ಲಿದ್ದ 20 ಭಕ್ತರು ಕೂದಲೆಳೆಯ ಅಂತರದಲ್ಲಿ ಜೀವ ಬದುಕಿಸಿಕೊಂಡಿದ್ದಾರೆ. ಅಪಘಾತದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ನಂಜನಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಪಘಾತದ ವಿಚಾರ ತಿಳಿಯುತ್ತಿದ್ದಂತೆ ಕೂಡಲೇ ಘಟನೆ ಸ್ಥಳಕ್ಕೆ ಧಾವಿಸಿದ ನಂಜನಗೂಡು ಸಂಚಾರಿ ಪೊಲೀಸರು ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಖಾಸಗಿ ಮಿನಿ ಬಸ್ ಅಪಘಾತದಿಂದ ಬಿಡಿ ಭಾಗಗಳು ಛಿದ್ರವಾಗಿರುವ ದೃಶ್ಯ ನೋಡಿದ ಸಾರ್ವಜನಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಪುನರ್ಜನ್ಮ ಎನ್ನುತ್ತಿದ್ದಾರೆ. ಘಟನೆ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದ ಬೈಕ್‌: ಯುವಕ ದಾರುಣ ಸಾವು

ಬೈಕ್ ನಿಯಂತ್ರಣ ತಪ್ಪಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ವೆಳ್ಳರಿಕುಂಡು ಕಾರ್ಯೋಡ್ ಚಾಲಿ ಎಂಬಲ್ಲಿ ನಿನ್ನೆ (ಸೆಪ್ಟೆಂಬರ್‌ 20) ಗುರುವಾರ ತಡ ರಾತ್ರಿ ನಡೆದಿದೆ. ಚುಲ್ಲಿ ಚರ್ಚ್ ಸಮೀಪದ ಜಸ್ಟಿನ್ (26) ಮೃತ ಯುವಕ ಎಂದು ಗುರುತಿಸಲಾಗಿದೆ.

ಜಸ್ಟಿನ್ ವೆಳ್ಳರಿಕುಂಡು ಕಾರ್ಯೋಡ್ ಚಾಲಿ ಮಾರ್ಗವಾಗಿ ಬರುವಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹೊಂಡಕ್ಕೆ ಬಿದ್ದಿದೆ. ಕೂಡಲೇ ಸ್ಥಳೀಯರು ಗಂಭೀರ ಗಾಯಗೊಂಡ ಜಸ್ಟಿನ್‌ನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಜಸ್ಟಿನ್ ಮಾರ್ಗಮಧ್ಯಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ವೆಳ್ಳರಿಕುಂಡು ಠಾಣಾ ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡಿದ್ದು, ಮೃತ ಜಸ್ಟಿನ್ ಕುಟುಂಬಕ್ಕೆ ವಿಚಾರ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+