ಅಂಗೈನಲ್ಲಿ ನಾಡಹಬ್ಬ ದಸರಾದ ಸಕಲ ಮಾಹಿತಿ
ಮೈಸೂರು. ಆ. 25 : ನಾಡಹಬ್ಬ ದಸರಾ ಕುರಿತ ನೂತನ ವೆಬ್ ಸೈಟ್ ಅನಾವರಣವಾಗಿದೆ. ಪ್ರವಾಸಿಗರಿಗೆ ಅನಕೂಲವಾಗುವ ಎಲ್ಲ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗಿದೆ.
ಕರ್ನಾಟಕ ಸರ್ಕಾರ 2014ರ ದಸರಾಕ್ಕೆ ಸಂಬಂಧಿಸಿ ಅಧಿಕೃತ ವೆಬ್ ಸೈಟ್ ಅನಾವರಣ ಮಾಡಿದೆ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಮಾಹಿತಿ ಲಭ್ಯವಿದೆ. ಅಲ್ಲದೇ ಫೇಸ್ ಬುಕ್, ಟ್ವಿಟ್ಟರ್ ಮೂಲಕವು ಫಾಲೋ ಮಾಡಬಹುದು.

ನಾಡಹಬ್ಬದ ಎಲ್ಲ ಮಾಹಿತಿ ನೀಡುವ 'ದಸರಾ ವೆಬ್ ಸೈಟ್'ಗೆ ಮೈಸೂರು ಉಸ್ತುವಾರಿ ಸಚಿವ ಶ್ರೀನಿವಾಸ್ ಪ್ರಸಾದ್ ಇತ್ತೀಚೆಗೆ ಚಾಲನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸ್ ಪ್ರಸಾದ್, ದಸರಾಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಈ ವೆಬ್‌ಸೈಟ್‌ನಲ್ಲಿ ಲಭ್ಯ. ಸಾರ್ವಜನಿಕರು, ಪ್ರವಾಸಿಗರು ಅಂತರ್ಜಾಲ ತಾಣ ಪ್ರವೇಶಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ದಸರಾ ಕಾರ್ಯಕ್ರಮಗಳು, ಪ್ರವಾಸಿ ತಾಣಗಳ ಮಾಹಿತಿ, ಜಿಲ್ಲೆಯ ನಕಾಶೆ, ಹೋಟೆಲ್‌ಗಳು ಮತ್ತು ಇಲ್ಲಿಯವರೆಗೆ ನಡೆದ ದಸರಾ ಮಹೋತ್ಸವದ ಚಿತ್ರಗಳನ್ನು ನೋಡಬಹುದಾಗಿದೆ ಎಂದು ತಿಳಿಸಿದರು.
ಅಧಿಕೃತ ಜಾಲತಾಣವಾಗಿದ್ದು ಈ ಬಾರಿ ಐಪ್ಯಾಡ್, ಲ್ಯಾಪ್ ಟಾಪ್, ಮತ್ತು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. 9980612014 ಸಂಖ್ಯೆಯನ್ನು ನಿಮ್ಮ ಮೊಬೈಲ್‌ನಲ್ಲಿ ಸೇವ್ ಮಾಡಿಕೊಂಡರೆ ವಾಟ್ಸಾಫ್ ಮುಖಾಂತರ ದಸರಾದ ಅಪ್‌ಡೇಟ್ಸ್ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗೆ ದಸರಾ ಸಹಾಯವಾಣಿ 1077ಕ್ಕೆ ಕರೆ ಮಾಡಬಹುದು.












Click it and Unblock the Notifications