ಮೈಸೂರಿನಲ್ಲಿ ಗೃಹಿಣಿ ಆತ್ಮಹತ್ಯೆ, ಪತಿಯಿಂದ ಕೊಲೆ ಶಂಕೆ
ಮೈಸೂರು, ಜುಲೈ 22 : ಪತಿ ನೀಡುತ್ತಿದ್ದ ವರದಕ್ಷಿಣಿ ಕಿರುಕುಳವನ್ನು ತಾಳಲಾರದೇ ಗೃಹಿಣಿಯೋರ್ವಳು ನೇಣಿಗೆ ಶರಣಾದ ಘಟನೆ ಮೈಸೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಮೃತರನ್ನು ಸುಜಿತಾ (32) ಎಂದು ಗುರುತಿಸಲಾಗಿದೆ.
ಮೂಲತ: ಮಡಿಕೇರಿಯವರಾದ ಇವರು ಹೆಬ್ಬಾಳು 2ನೇ ಹಂತದಲ್ಲಿ ವಾಸಿಸುತ್ತಿದ್ದರು. ಖಾಸಗಿ ಶಾಲೆಯೊಂದರರಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರವೀಣ್ ಎಂಬಾತನೊಂದಿಗೆ ಪ್ರೇಮ ವಿವಾಹವಾಗಿ ಮೈಸೂರಿನಲ್ಲಿ ನೆಲೆಸಿದ್ದರು.

ಆದರೆ ಪತಿ ಪ್ರವೀಣ್ ಕುಡಿತ ಹಾಗೂ ಗಾಂಜಾದ ದಾಸನಾಗಿದ್ದ. ಈತ ಪ್ರತಿನಿತ್ಯ ಸುಜಿತಾಗೆ ಹೆಚ್ಚಿನ ವರದಕ್ಷಿಣೆ ತರುವಂತೆ ಹಾಗೂ ಮದುವೆಯಾಗಿ ಮೂರು ವರ್ಷ ಕಳೆದರೂ ಮಕ್ಕಳಾಗಿಲ್ಲವೆಂದು ಹಿಂಸೆ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಶುಕ್ರವಾರ ಪ್ರವೀಣ್ ತನ್ನ ಪತ್ನಿಯ ಪೋಷಕರಿಗೆ ಆಕೆ ಸತ್ತಿರುವ ವಿಷಯವನ್ನು ದೂರವಾಣಿ ಮೂಲಕ ವಿಷಯ ತಿಳಿಸಿದ್ದಾನೆ. ಶುಕ್ರವಾರ ರಾತ್ರಿ ಮನೆಯಲ್ಲಿ ತನ್ನ ಸ್ನೇಹಿತನೊಂದಿಗೆ ಕುಡಿಯುತ್ತ ಕುಳಿತಿದ್ದು, ಈತನೇ ತಮ್ಮ ಮಗಳನ್ನು ಕೊಲೆಗೈದು ನೇಣು ಹಾಕಿರಬೇಕೆಂದು ಸುಜಿತಾ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications