Get Updates
Get notified of breaking news, exclusive insights, and must-see stories!

ಮೈಸೂರು ಜಿಲ್ಲಾಡಳಿತ ಹೊರಡಿಸಿದ ವಿವಿಧ ಸೂಚನೆಗಳು

ಮೈಸೂರು, ಜ. 20: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಜ. 30ರಂದು ಬೆಳಗ್ಗೆ 11 ಗಂಟೆಗೆ ಕರೆಯಲಾಗಿದೆ. ತಾಲೂಕು ಪಂಚಾಯಿತಿ (ಮಿನಿ ವಿಧಾನ ಸೌಧ ಕೊಠಡಿ ಸಂ. 212) ಸಭಾಂಗಣದಲ್ಲಿ ಸಭೆ ನಡೆಯಲಿದೆ. ತಾಪಂ ಅಧ್ಯಕ್ಷ ಜಿ. ಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಡಾಟಾ ಎಂಟ್ರಿ ಆಪರೇಟರ್‌ಗೆ ಆಹ್ವಾನ

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಸಕರು ಹಾಗೂ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 'ಮೂರು ಡಾಟಾ ಎಂಟ್ರಿ ಆಪರೇಟರ್' ಸೇವೆ ಒದಗಿಸಲು ಮಾನವ ಸಂಪನ್ಮೂಲ ಗುತ್ತಿಗೆದಾರು ಟೆಂಡರ್ ಆಹ್ವಾನಿಸಿದ್ದಾರೆ.

ಅಭ್ಯರ್ಥಿಗಳು ಕನಿಷ್ಠ ಪಿಯುಸಿ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ನುಡಿ, ಯೂನಿಕೋಡ್, ಆಂಗ್ಲ ಭಾಷೆಯಲ್ಲಿ ಕಂಪ್ಯೂಟರ್‌ನಲ್ಲಿ ಡಾಟಾ ಎಂಟ್ರಿ ಪತ್ರ ವ್ಯವಹಾರ ಜ್ಞಾನ ಹೊಂದಿರಬೇಕು. ಎಂ.ಎಸ್. ಆಫೀಸ್ ಮತ್ತು ಸ್ಕ್ಯಾನಿಂಗ್ ಕುರಿತು ಅನುಭವ ಹೊಂದಿರಬೇಕು. ಇಂಟರ್ನೆಟ್ ಬಗ್ಗೆ ತಿಳಿದಿರಬೇಕು. [ಜ. 23ರಿಂದ ಮುಡುಕುತೊರೆ ಜಾತ್ರೆ]

ಆಸಕ್ತರು ಜ. 24 ರೊಳಗೆ ಮೊಹರು ಮಾಡಿದ ಲಕೋಟೆಯಲ್ಲಿ ದರಪಟ್ಟಿಯನ್ನು ಜಿಲ್ಲಾಧಿಕಾರಿ ಕಚೇರಿ ಮೈಸೂರು ಇಲ್ಲಿಗೆ ಟೆಂಡರ್ ಮೂಲಕ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಇದೇ ಕಚೇರಿಯನ್ನು ಸಂಪರ್ಕಿಸಬಹುದು.

mysore

ಸ್ನಾತಕೋತ್ತರ ಪದವೀಧರರಿಂದ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ ವತಿಯಿಂದ ರಾಜ್ಯದಲ್ಲಿ ವಾಸಿಸುತ್ತಿರುವ ಕೋಳಿಡೋರ್, ಟೋಕ್ರೆ ಕೋಳಿ, ಹರಿಣ ಶಿಕಾರಿ, ಗೌಡ್ಲು, ಮೇದ, ಚಂಚು, ಯರವ, ಕಾಡುಕುರುಬ, ಕಥೋಡಿ ಕತ್ಕಾರಿ, ಕೊಂಡ ಕಾಪೂಸ್, ಮಲೇರು ಮತ್ತು ಕಮ್ಮಾರ ಬುಡಕಟ್ಟು ಜನಾಂಗಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಅಧ್ಯಯನ ನಡೆಸಲು ಯೋಜನೆ ಹಮ್ಮಿಕೊಳ್ಳಲಾಗಿದೆ.

ಯೋಜನಾ ಅವಧಿಯಲ್ಲಿ ರಾಜ್ಯಾದ್ಯಂತ ಮಾಹಿತಿ ಸಂಗ್ರಹಕಾರರಾಗಿ ಕ್ಷೇತ್ರಕಾರ್ಯ ನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಂಶೋಧನಾ ಅಧ್ಯಯನ, ಸರ್ಕಾರದ ಕಾರ್ಯಕ್ರಮಗಳ ಅನುಷ್ಠಾನ ಮೌಲ್ಯಮಾಪನ ಹಾಗೂ ಭಾಷಾಧ್ಯಯನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು. [ಅರಮನೆ ಅಲಂಕಾರಕ್ಕೆ ಎಲ್ಇಡಿ ಬಲ್ಬ್ ಇಲ್ಲ]

ಆಸಕ್ತರು ಫೆಬ್ರವರಿ 3 ರೊಳಗೆ ಅರ್ಜಿಯನ್ನು ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ, #1540, ಅನಿಕೇತನ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿಗೆ ಸಲ್ಲಿಸಬೇಕು. ಫೆಬ್ರವರಿ 10ರಂದು ಬೆಳಗ್ಗೆ 11 ಗಂಟೆಗೆ ಸಂಬಂಧಪಟ್ಟ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಕರ್ನಾಟಕ ರಾಜ್ಯ ಗಿರಿಜನ ಸಂಶೋಧನಾ ಸಂಸ್ಥೆ, #1540, ಅನಿಕೇತನ ರಸ್ತೆ, ಕುವೆಂಪುನಗರ, ಮೈಸೂರು ಇಲ್ಲಿಗೆ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ದೂ. ೦821-2560274 / 2560275 ಸಂಪರ್ಕಿಸಬಹುದು.

ಪಡಿತರ ಚೀಟಿದಾರರಿಗೆ 1 ಲೀ. ಹೆಚ್ಚು ಸೀಮೆಎಣ್ಣೆ

ಜಿಲ್ಲೆಯ ನಗರ ಮತ್ತು ಗ್ರಾಮಾಂತರ ಪ್ರದೇಶದ ಮೂರು ಹಾಗೂ ಅದಕ್ಕಿಂತ ಹೆಚ್ಚು ಸದಸ್ಯರು ಇರುವ ಅಡುಗೆ ಅನಿಲ ಹೊಂದಿಲ್ಲದ ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರಸಕ್ತ ವರ್ಷದ ಜನವರಿ ತಿಂಗಳಿಗೆ ಒಂದು ಲೀ. ಹೆಚ್ಚು ಸೀಮೆ ಎಣ್ಣೆ ನೀಡಲಾಗುವುದು. ಈಗಾಗಲೇ ನಾಲ್ಕು ಲೀ. ವಿತರಿಸಲಾಗಿದ್ದು, ಇನ್ನೂ ಒಂದು ಲೀ. ಪಡೆಯುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಿರಿಯ ಉಪ ನಿರ್ದೇಶಕ ಕೆ. ರಾಮೇಶ್ವರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. [ಮೈಸೂರು ಕೆ.ಆರ್. ಆಸ್ಪತ್ರೆ ಬಳಿ ಪ್ರಿ ಪೇಯ್ಡ್ ಆಟೋ]

ಫೆ. 7ರಂದು ನವೋದಯ ಶಾಲೆಗೆ ಪ್ರವೇಶ ಪರೀಕ್ಷೆ

ಮೈಸೂರು ತಾಲೂಕಿನ ಡಿಎಂಜಿ ಹಳ್ಳಿಯಲ್ಲಿರುವ ಜವಾಹರ ನವೋದಯ ವಿದ್ಯಾಲಯದಲ್ಲಿ 6ನೇ ತರಗತಿಗೆ ಪ್ರವೇಶ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಫೆಬ್ರವರಿ 7ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1.30 ರವರೆಗೆ ಪ್ರವೇಶ ಪರೀಕ್ಷೆ ನಡೆಸಲಾಗುವುದು.

ಪರೀಕ್ಷೆಯ ಪ್ರವೇಶ ಪತ್ರವನ್ನು ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮೂಲಕ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರಿಗೆ ಕಳುಹಿಸಲಾಗಿದೆ ಎಂದು ಜವಾಹರ ನವೋದಯ ವಿದ್ಯಾಲಯ ಪ್ರಾಂಶುಪಾಲರು ತಿಳಿಸಿದ್ದಾರೆ. ಫೆ. 4 ರೊಳಗೆ ಪರೀಕ್ಷಾ ಪ್ರವೇಶ ಪತ್ರ ದೊರೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಥವಾ ನವೋದಯ ಶಾಲೆ ದೂ. 1821 - 2905068 ಸಂಪರ್ಕಿಸಬಹುದು.

ಸ್ವಚ್ಫತಾ ಅಭಿಯಾನ ನಡೆಸಲು ಸೂಚನೆ

ಸ್ವಚ್ಫ ಭಾರತ್ ಅಭಿಯಾನ ಕಾರ್ಯಕ್ರಮವನ್ನು ದೇಶದಾದ್ಯಂತ ಕೇಂದ್ರ / ರಾಜ್ಯ ಸರ್ಕಾರ ಸಂಘ ಸಂಸ್ಥೆಗಳು ಸ್ವಯಂ ಸ್ಫೂರ್ತಿಯಿಂದ ಸ್ವಚ್ಫತಾ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ಜಿಲ್ಲೆಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಫತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ. ಶಿಖಾ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತಿಳಿಸಿದ್ದಾರೆ. [ಮೈಸೂರು ಪಂಚೆಯಲ್ಲಿ ಒಬಾಮ ಮಿಂಚಿಂಗ್]

ಪ್ಲಾಸ್ಟಿಕ್, ಕಾಗದದ ಧ್ವಜ ಬಳಸದಂತೆ ಸೂಚನೆ

ಮೈಸೂರು ನಗರ ಹಾಗೂ ಜಿಲ್ಲೆಯಾದ್ಯಂತ ಜನವರಿ 26ರ ಗಣರಾಜ್ಯೋತ್ಸವದಂದು ಪ್ಲಾಸ್ಟಿಕ್ ಮತ್ತು ಕಾಗದದ ರಾಷ್ಟ್ರಧ್ವಜ ಬಳಸಬಾರದೆಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ. ಎಲ್ಲರೂ ಬಟ್ಟೆಯ ಧ್ವಜವನ್ನು ಮಾತ್ರ ಬಳಸಬೇಕು. ವ್ಯಾಪಾರಸ್ಥರೂ ಬಟ್ಟೆಯ ರಾಷ್ಟ್ರಧ್ವಜ ಮಾತ್ರ ಮಾರಬೇಕೆಂದು ತಿಳಿಸಿದ್ದಾರೆ.

ವೈಜ್ಞಾನಿಕ ಕೋಳಿ ಸಾಕಾಣಿಕೆ ತರಬೇತಿ

ಮೈಸೂರಿನ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿ., ಪ್ರಾದೇಶಿಕ ಕೇಂದ್ರದ ವತಿಯಿಂದ ಮೈಸೂರು, ಮಂಡ್ಯ, ಚಾಮರಾಜನಗರ, ದಕ್ಷಿಣ ಕನ್ನಡ, ಹಾಸನ, ಉಡುಪಿ ಮತ್ತು ಶಿವಮೊಗ್ಗ ಜಿಲ್ಲೆಯ ಒಟ್ಟು 250 ಫಲಾನುಭವಿಗಳಿಗೆ ವೈಜ್ಞಾನಿಕ ಕೋಳಿ ಸಾಕಾಣಿಕೆ ತರಬೇತಿ ನೀಡಲಾಗುವುದು. ಫೆಬ್ರವರಿ 9 ರಿಂದ 13 ರವರೆಗೆ ಹಾಗೂ ಮಾರ್ಚ್ 9 ರಿಂದ 13 ರವರೆಗೆ ತರಬೇತಿ ನಡೆಯಲಿದೆ. ತರಬೇತಿಯ ಒಟ್ಟು 5 ದಿನಗಳಿಗೆ 750 ರು. ಸಂಭಾವನೆ ನೀಡಲಾಗುವುದು. ಕೋಳಿ ಕ್ಷೇತ್ರ ಪ್ರಾರಂಭಿಸಲು ಆಸಕ್ತಿ ಹೊಂದಿರುವ ಫಲಾನುಭವಿಗಳಿಗೆ ಯೋಜನಾ ವರದಿಯನ್ನು ತಯಾರಿಸಿ ಕೊಡಲಾಗುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+