ಮುಡಾ ಸೈಟ್ ಕೊಡಿಸುವ ಆಮಿಷ; 2 ಕೋಟಿ ರೂ. ವಂಚನೆ

ಮೈಸೂರು, ಡಿಸೆಂಬರ್ 31; ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಸೈಟ್ ಕೊಡಿಸುವುದಾಗಿ ವ್ಯಕ್ತಿಯೊಬ್ಬ ಜನರನ್ನು ವಂಚನೆ ಮಾಡಿದ್ದಾನೆ. ಪೊಲೀಸರು ವಂಚನೆ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಮುಡಾ ಹೆಸರಿನ ನಕಲಿ ಲೆಟರ್ ಹೆಡ್ ಬಳಸಿ ನಗರದ ಪ್ರತಿಷ್ಠಿತ ಬಡಾವಣೆಯ ರೆಸ್ಟೋರೆಂಟ್ ಮಾಲೀಕ ವಂಚಿಸಿದ್ದಾನೆ. ಬಹುತೇಕ ವಿದ್ಯಾವಂತರು ವ್ಯಕ್ತಿಯ ಮಾತು ನಂಬಿ ಹಣ ನೀಡಿದ್ದು, ಸುಮಾರು 2 ಕೋಟಿ ರೂ. ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.

ಮುಡಾ ಅಧ್ಯಕ್ಷ ಹೆಚ್. ವಿ. ರಾಜೀವ್ ಈ ವಂಚನೆ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ. ಆದರೆ, ವ್ಯಕ್ತಿಯ ಹೆಸರನ್ನು ಮಾತ್ರ ಅವರು ಬಹಿರಂಗಗೊಳಿಸಿಲ್ಲ. 15 ದಿನದ ಹಿಂದೆ ಈ ಪ್ರಕರಣ ಬೆಳಕಿಗೆ ಬಂದಿದೆ. ಬಹಳಷ್ಟು ಯುವಕರಿಂದ ವ್ಯಕ್ತಿ ಹಣ ವಸೂಲಿ ಮಾಡಿರುವುದು ತಿಳಿದುಬಂದಿದೆ.

 Man Cheated People In The Name Of MUDA

"ವಂಚನೆ ಬಗ್ಗೆ ತಿಳಿಯುತ್ತಿದ್ದಂತೆ ಹಣ ಕಳೆದುಕೊಂಡು ವ್ಯಕ್ತಿಗಳಿಂದ ಪ್ರಕರಣವನ್ನು ದಾಖಲು ಮಾಡಿಸಲಾಗಿದ್ದು, ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪೊಲೀಸರ ವಶದಲ್ಲಿಯೇ ಇದ್ದಾನೆ" ಎಂದು ಹೇಳಿದ್ದಾರೆ.

ಈ ವಂಚನೆ ಜಾಲದಲ್ಲಿ ಮತ್ತಷ್ಟು ಜನರು ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ. ಸದ್ಯ, ನಗರದ ಪ್ರತಿಷ್ಠಿತ ರೆಸ್ಟೋರೆಂಟ್ ಬಂದ್ ಆಗಿದೆ. ಈ ವಂಚನೆ ಪ್ರಕರಣದ ಬಗ್ಗೆ ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಜನರಿಂದ ಹಣ ಪಡೆದ ವ್ಯಕ್ತಿ ಶಿರಡಿಯಲ್ಲಿದ್ದ, ಪೊಲೀಸರು ಆತನನ್ನು ಹುಡುಕಿ ಬಂಧಿಸಿ ನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ಮುಡಾ ಸೈಟ್ ಕೊಡಿಸುತ್ತೇವೆಂದು ಹಣ ಪಡೆಯುವವರ ಬಗ್ಗೆ ಎಚ್ಚರ ವಹಿಸಿ ಎಂದು ಅಧ್ಯಕ್ಷರು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+