• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಎಎಪಿ ಅಧ್ಯಕ್ಷೆಯಾದ ಇನ್ಫಿ ಮಾಜಿ ಟೆಕ್ಕಿ

|
Google Oneindia Kannada News

ಮೈಸೂರು, ಜೂನ್ 8: ಆಮ್ ಆದ್ಮಿ ಪಕ್ಷದ ಮೈಸೂರು ಘಟಕದ ಅಧ್ಯಕ್ಷರಾಗಿ ಮಾಲವಿಕ ಗುಬ್ಬಿವಾಣಿ ಅವರನ್ನು ನೇಮಿಸಲಾಗಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಪ್ರಕಟಿಸಿದ್ದಾರೆ.

   ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ | Oneindia Kannada

   ಮಾಲವಿಕ ಅವರು ಹುಟ್ಟಿ ಬೆಳೆದಿದ್ದು ಶಿವಮೊಗ್ಗದಲ್ಲಿ, ಆದ್ಮಿ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮಾಲವಿಕ ಗುಬ್ಬಿವಾಣಿ ಅವರು ಇನ್ಫೋಸಿಸ್ ಸಂಸ್ಥೆಯಲ್ಲಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಇವರು ಪರ್ಯಾಯ ರಾಜಕಾರಣದ ಭಾಗವಾಗುವ ಸಲುವಾಗಿ ತಮ್ಮ ಸುತ್ತಲಿನ ಜನ ಸಾಮಾನ್ಯರ ಸಮಸ್ಯೆಗಳ ನಿವಾರಣೆಯ ಗುರಿ ಇಟ್ಟುಕೊಂಡು ತಮ್ಮದೇ ಆದ ಸಂಸ್ಥೆಯನ್ನು ಸ್ಥಾಪಿಸಿ ಅನೇಕ ಜನಪರ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕ ಬದುಕಿಗೆ ಕಾಲಿರಿಸಿದರು.

   2014 ರಲ್ಲಿ ಅಧಿಕೃತವಾಗಿ ಪಕ್ಷ ಸೇರಿದ ನಂತರ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು "ಭ್ರಷ್ಟಾಚಾರ ತೊಲಗಿಸಿ" ಹೋರಾಟ, ಕನ್ನಡ ಪರ ಚಳವಳಿ, ಪರಿಸರ ಉಳಿಸಿ ಅಭಿಯಾನದ ಮೂಲಕ ಮುಂಚೂಣಿಗೆ ಬಂದರು.

   ಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ನಿರ್ಧಾರಮುಂದಿನ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಎಎಪಿ ನಿರ್ಧಾರ

   ಮೈಸೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಗಿರುವ ಶ್ರೀ ಜಯಚಾಮರಾಜೇಂದ್ರ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ಆದ ಮಾಲವಿಕಾ ಅವರು ಕಂಪ್ಯೂಟರ್‌ ಸೈನ್ಸ್ ಪದವೀಧರೆ. ಬಹುಮುಖಿ ಪ್ರತಿಭೆಯಾದ ಇವರು ರಾಜ್ಯ ಮಟ್ಟದ ಬಾಸ್ಕೆಟ್‌ಬಾಲ್ ಆಟಗಾರ್ತಿ ಹಾಗೂ ರಾಷ್ಟ್ರ ಮಟ್ಟದ ಟೇಕ್ವಾಂಡೋ ಸಮರ ಕಲೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

   ಆಮ್ ಆದ್ಮಿ ಪಾರ್ಟಿ ಬೆಂಗಳೂರು ತಂಡದ ಸಂವಹನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಮೈಸೂರಿನ ಚಾಮರಾಜ ಕ್ಷೇತ್ರದಿಂದ ಆಮ್ ಆದ್ಮಿ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಮೈಸೂರಿನ ಕಾರ್ಯದರ್ಶಿಯಾಗಿ ಮತ್ತು ಚಾಮರಾಜ ಕ್ಷೇತ್ರದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ.

   English summary
   Malavika gubbivani, Head of Communications in BBMP campaign team of AAP Bengaluru, has been appointed as the president of the Mysore district unit said Darshan Jain, joint Secretary.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X