ಚಂದ್ರ ಗ್ರಹಣಕ್ಕೆ ಆಷಾಢ ಶುಕ್ರವಾರ ಚಾಮುಂಡಿ ದೇವಿ ದರ್ಶನ ಸಮಯ ಬದಲು
Recommended Video

ಮೈಸೂರು, ಜುಲೈ 26 : ಖಗ್ರಾಸ ಚಂದ್ರಗ್ರಹಣವು ಶುಕ್ರವಾರ ಇದ್ದು, ಚಾಮುಂಡಿ ಬೆಟ್ಟದಲ್ಲಿ ಎರಡನೇ ಆಷಾಢ ಶುಕ್ರವಾರದ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.
ಶುಕ್ರವಾರ ರಾತ್ರಿ 9 ಗಂಟೆಗೆ ಚಾಮುಂಡೇಶ್ವರಿ ದೇವಾಲಯ ಬಂದ್ ಮಾಡಲಾಗುತ್ತದೆ. ಗ್ರಹಣದ ನಿಮಿತ್ತ ದೇವಾಲಯ 2 ಗಂಟೆ ಮುಂಚಿತವಾಗಿ ದರ್ಶನ ಸ್ಥಗಿತ ಮಾಡಲಾಗುತ್ತಿದೆ. ಆಷಾಢ ಶುಕ್ರವಾರದಲ್ಲಿ ಲಕ್ಷಾಂತರ ಭಕ್ತರು ಬರುವ ಕಾರಣಕ್ಕೆ ಭಕ್ತರ ಸುಗಮ ಸಂಚಾರಕ್ಕೆ ಅನುಕೂಲವಾಗಲು ಖಾಸಗಿ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಭಕ್ತರು ಬೆಟ್ಟಕ್ಕೆ ತೆರಳಲು ಲಲಿತ ಮಹಲ್ ಹೆಲಿಪ್ಯಾಡ್ ನಿಂದ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದ್ದು, ರಾತ್ರಿ 9 ಗಂಟೆಯೊಳಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶವಿದೆ. ಆಷಾಢ ಮಾಸದ ಶುಕ್ರವಾರಗಳಂದು ಬೆಟ್ಟಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಆದರೆ ಚಂದ್ರ ಗ್ರಹಣದ ಕಾರಣಕ್ಕೆ ಇಪ್ಪತ್ತೇಳನೇ ತಾರೀಕು ರಾತ್ರಿ 9 ಗಂಟೆಗೆ ದೇವಾಲಯದ ಬಾಗಿಲು ಹಾಕಿ, ಮಧ್ಯ ರಾತ್ರಿ ದೇವಿಗೆ ವಿಶೇಷ ಪೂಜೆ ನಡೆಸಲಾಗುವುದು ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.

ಲಕ್ಷ - ಲಕ್ಷ ಆದಾಯ
ಚಾಮುಂಡಿ ಬೆಟ್ಟದಲ್ಲಿ ಭಕ್ತರು ಚಾಮುಂಡಿ ದೇವಿಗೆ ಹರಕೆ ರೂಪದಲ್ಲಿ ನೀಡುವ ಸೀರೆಗಳ ಹರಾಜಿನಿಂದ ದೇವಸ್ಥಾನಕ್ಕೆ ಭಾರೀ ಆದಾಯ ಬಂದಿದೆ. ದೇವಿಗೆ ಉಡಿಸುವ ಸೀರೆಗಳ ಹರಾಜಿನಿಂದ ಈ ವರ್ಷ ಒಂದು ಕೋಟಿ 73 ಲಕ್ಷ ರುಪಾಯಿ ಆದಾಯ ಬಂದಿದೆ.
ಈ ಮೊದಲು ಬಹಿರಂಗವಾಗಿ ಸೀರೆ ಹರಾಜು ಮಾಡಲಾಗುತ್ತಿತ್ತು. ಆಗ ಭಾರೀ ಬೆಲೆಯ ಸೀರೆಗಳು ಕಡಿಮೆ ಬೆಲೆಗೆ ಹರಾಜು ಆಗುತಿತ್ತು. ಹೀಗಾಗಿ ಸೀರೆಗಳ ಬಹಿರಂಗ ಹರಾಜಿನಿಂದ ಕಡಿಮೆ ಆದಾಯ ಬರುತ್ತಿತ್ತು.
ಈಗ ಈ ಪದ್ಧತಿ ಬದಲಾಯಿಸಿ ಸೀರೆಯ ಮುಖಬೆಲೆಯ ಮೇಲೆ ಶೇಕಡಾ 25ರಷ್ಟು ರಿಯಾಯಿತಿ ನೀಡಿ, ಹರಾಜು ಹಾಕಲಾಗುತ್ತಿದೆ. ಅದರ ಪರಿಣಾಮವಾಗಿ ಸೀರೆ ಹರಾಜಿನಿಂದ ಬರುವ ಆದಾಯ ದುಪ್ಪಟ್ಟಾಗಿದೆ. ಆದ್ದರಿಂದ ಈ ಬಾರಿ ಸೀರೆಗಳು ಹರಾಜಿನಿಂದ ಆದಾಯ ಹೆಚ್ಚಳವಾಗಿದೆ.












Click it and Unblock the Notifications