ಕೃಷ್ಣ ಕೊಲೆ ಪ್ರಕರಣ : ಐವರು ಆರೋಪಿಗಳು ಪೊಲೀಸರಿಗೆ ಶರಣು

ಮೈಸೂರು, ಡಿಸೆಂಬರ್. 25 : ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳು ವಿವಿಪುರಂ ಪೊಲೀಸರಿಗೆ ಶನಿವಾರ ಶರಣಾಗಿದ್ದಾರೆ.

ಹೇಮಂತ್, ಸಂದೇಶ್, ಧರ್ಮ, ಮೂರ್ತಿ, ಸಂಜು ಎಂಬವರೇ ಈ ಕೊಲೆಗೈಯ್ದಿರುವುದಾಗಿ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ.

ವಿವಿಪುರಂನಲ್ಲಿ ಶುಕ್ರವಾರ ಹಾಡುಹಗಲೇ ಚಿಕನ್ ಸ್ಟಾಲ್ ಮಾಲೀಕ ಕೃಷ್ಣ ಅಲಿಯಾಸ್ ಬೆಣ್ಣೆ ಕೃಷ್ಣ ಎಂಬವನನ್ನು ಮುಸುಕುಧಾರಿಗಳ ತಂಡವೊಂದು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿತ್ತು.[ಮೈಸೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಬರ್ಬರ ಕೊಲೆ]

Loose Krishna murder case: Five accused surrender before police

ಕೊಲೆಗೆ ಸಂಬಂಧಿಸಿದಂತೆ ಇನ್ಸಪೆಕ್ಟರ್ ರವಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆದರೆ, ಶನಿವಾರ ಮಧ್ಯಾಹ್ನ ಆರೋಪಿಗಳು ತಾವೇ ವಕೀಲ ಬಸವರಾಜು ಎಂಬವರ ಜೊತೆ ಬಂದು ಶರಣಾಗಿದ್ದಾರೆ.

ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ವಿವಿಪುರಂ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+