Lok Sabha Election 2024: ಮೈಸೂರಿನಲ್ಲಿ ಯಾರು ಗೆಲ್ಲುತ್ತಾರೆಂದು ಭವಿಷ್ಯ ನುಡಿದ ಶ್ವಾನ!
ಮೈಸೂರು ಜೂನ್ 2: ಕಳೆದ ದಿನವಷ್ಟೇ ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಮತದಾನ ಪೂರ್ಣಗೊಂಡಿದ್ದು ಇನ್ನೇನು ಎರಡೇ ದಿನಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇದಕ್ಕಾಗಿ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿದೆ.
ಏಳನೇ ಹಂತದ ಮತದಾನ ಪೂರ್ಣಗೊಳ್ಳುತ್ತಿದ್ದಂತೆ ಹೊರಬಿದ್ದ ಸಮೀಕ್ಷೆಗಳ ಪ್ರಕಾರ ಈ ಬಾರಿ ಬಿಜೆಪಿ ದೇಶದಲ್ಲಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಕರ್ನಾಟಕದಲ್ಲೂ ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಗೆಲುವು ಎಂದಿವೆ. ಈ ನಡುವೆ ಶ್ವಾನವೊಂದು ಮೈಸೂರಿನಲ್ಲಿ ಗೆಲುವು ಯಾರಿಗೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದೆ.

ಹೌದು.. ಮೈಸೂರಿನ ಕೆ.ಟಿ.ಸ್ಟ್ರೀಟ್‌ನ ಕಾಲಭೈರವೇಶ್ವರ ದೇಗುಲದಲ್ಲಿ ಭೈರವ ಎಂಬ ಎರಡು ವರ್ಷದ ಶ್ವಾನ ಮೈಸೂರಿನಲ್ಲಿ ಯಾರು ಗೆಲ್ಲುತ್ತಾರೆಂದು ತಿಳಿಸಿದೆ. ಗೋಪಿನಾಥ್ ಎಂಬುವವರು ಸಾಕಿರುವ ಈ ಶ್ವಾನ ಈ ಬಾರಿ ನರೇಂದ್ರ ಮೋದಿಯವರು ಗೆಲ್ಲುತ್ತಾರೆಂದು ಭವಿಷ್ಯ ನುಡಿದಿದೆ.
ಶ್ವಾನದ ಮುಂದೆ ಪ್ರಧಾನಿ ನರೇಂದ್ರ ಮೊದಿ ಹಾಗೂ ರಾಹುಲ್ ಗಾಂಧಿ ಅವರ ಫೋಟೋ ಇಟ್ಟಾಗ ಶ್ವಾನ ಮೋದಿ ಅವರ ಚಿತ್ರವನ್ನು ಆಯ್ಕೆ ಮಾಡಿ ಫಲಿತಾಂಶವನ್ನು ಹೇಳಿದೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಅಲ್ಲದೆ ಶ್ವಾನದ ಮುಂದೆ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಎಂ ಲಕ್ಷ್ಮಣ್ ಹಾಗೂ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಭಾವಚಿತ್ರ ಇಟ್ಟಾಗ ಶ್ವಾನ ಯದುವೀರ್ ಅವರ ಚಿತ್ರವನ್ನು ತೋರಿಸಿದೆ.
2024ರ ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್ ಪಕ್ಷದೊಂದಿಗೆ ಎಲ್ಲಾ ಪಕ್ಷಗಳು ಒಟ್ಟಾಗಿ ಸೇರಿ ಭಾರತ ಮೈತ್ರಿಕೂಟ ಸ್ಥಾಪಿಸಿವೆ. ಈ ಮೂಲಕ ಬಿಜೆಪಿಯನ್ನು ಸೋಲಿಸಲು ರಣತಂತ್ರ ಹೆದಿವೆ. ಬಿಜೆಪಿ ಒಡೆದು ಆಳುವ ನೀತಿಯನ್ನು ಹತ್ತಿಕ್ಕಿ ದೇಶದಲ್ಲಿ ಒಗ್ಗಟ್ಟು ಸಾಮರಸ್ಯ ಕಾಪಾಡಲು ತಮ್ಮ ಭಾರತ ಮೈತ್ರಿಕೂಟ ಶ್ರಮಿಸಲಿದೆ ಎಂದು ಜನ ಸಾಮಾನ್ಯರಲ್ಲಿ ಮತಯಾಚನೆ ಮಾಡಿದೆ.
ಇತ್ತ ನರೇಂದ್ರ ಮೋದಿ ಅವರು ದೇಶ ವಿದೇಶದಲ್ಲಿ ಭಾರತದ ಹೆಸರು ಅಚ್ಚಳಿಯದಂತೆ ಉಳಿಸಿದ್ದಾರೆ. ಅಲ್ಲದೆ ರಾಮಮಂದಿರ ನಿರ್ಮಾಣ ಮಾಡಿದ್ದಾರೆ. ಎಲ್ಲರೊಂದಿಗೆ ಎಲ್ಲರ ವಿಕಾಸ ಧೇಯದೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿಗಳು ಮತಯಾಚನೆ ಮಾಡಿದ್ದಾರೆ.
ಇನ್ನೂ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಂಗ್ರೆಸ್ ತಾನು ಕೊಟ್ಟ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಮನೆಮಾತಾಗಿದೆ. ಬಿಜೆಪಿ ಪಕ್ಷದ ಅಭ್ಯರ್ಥಿಗಳು ಬಹುತೇಕ ಮೋದಿ ಗೆಲುವಿಗೆ ಹಾಗೂ ರಾಮ ಮಂದಿರ ನಿರ್ಮಾಣದ ಸಂತೋಷದಲ್ಲಿ ಮತಯಾಚನೆ ಮಾಡಿರುವುದೇ ಹೆಚ್ಚು ಎನ್ನಲಾಗುತ್ತಿದೆ.
ಹೀಗಾಗಿ ಈ ಬಾರಿ ದೇಶದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಹೇಳಲಾಗುತ್ತಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು ಖಚಿತ ಎನ್ನುವ ಮಾತಿದೆ. ಆದರೆ ಸಮೀಕ್ಷೆಗಳು ಡಬಲ್ ಇಂಜಿನ್ ಸರ್ಕಾರ ರಚನೆಯ ಬಗ್ಗೆ ಒತ್ತಿ ಹೇಳಿವೆ. ಹೀಗಾಗಿ ಈ ಬಗ್ಗೆ ಸಾಕಷ್ಟು ಚರ್ಚೆ ಅಲ್ಲದೆ ಕುತೂಹಲ ಕೂಡ ಮೂಡಿದೆ. ಹೀಗಾಗಿ ಫಲಿತಾಂಶ ಏನಿರಲಿದೆ ಎನ್ನುವುದನ್ನು ನಾವು ಕಾದು ನೋಡಲೇಬೇಕು.












Click it and Unblock the Notifications