"ದೀಪ ಹಚ್ಚಿದರೆ ವೈರಸ್ ಗಳು ಶಾಖಕ್ಕೆ ಸಾಯುತ್ತವೆ": ಶಾಸಕ ರಾಮದಾಸ್
ಮೈಸೂರು, ಏಪ್ರಿಲ್ 04: "ದೀಪ ಹಚ್ಚುವುದರ ಹಿಂದೆ ಒಂದು ಕಾರಣವಿದೆ. ದೀಪ ಹಚ್ಚಿದರೆ ವೈರಸ್ಗಳು ಆ ದೀಪದ ಬಳಿ ಬಂದು, ಶಾಖ ತಡೆಯಲಾರದೆ ಸಾಯುತ್ತವೆ" ಎಂದು ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಹೇಳಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದ ಜನರೆಲ್ಲರೂ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಏ. 5ರಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೀಪ, ಮೋಂಬತ್ತಿ ಅಥವಾ ಮೊಬೈಲ್ ಟಾರ್ಚ್ ಬೆಳಗಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆನೀಡಿದ್ದರು.
ಹೀಗಾಗಿ ಶಾಸಕ ರಾಮದಾಸ್ ಮೈಸೂರಿನ ದಸರಾ ವಸ್ತು ಪ್ರದರ್ಶನದ ಮಾರುಕಟ್ಟೆಯಲ್ಲಿ ಮೋಂಬತ್ತಿ, ಮಾಸ್ಕ್ಗಳನ್ನು ವಿತರಿಸಿದರು. ಈ ವೇಳೆ ಮಾತನಾಡಿದ ಅವರು, "ಧಾನಿ ಮೋದಿ ದೀಪ ಹಚ್ಚಲು ಹೇಳಿರುವುದರ ಹಿಂದೆ ಕಾರಣವಿದೆ. ದೀಪ ಹಚ್ಚಿದರೆ ವೈರಸ್ಗಳು ದೀಪದ ಬಳಿ ಬರುತ್ತವೆ. ಆಗ ಅವು ದೀಪದ ಶಾಖಕ್ಕೆ ಸಾಯುತ್ತವೆ" ಎಂದು ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ.

"ನಮ್ಮ ಮನೆಯ ಒಳಗೆ ವೈರಸ್ ಇರಬಾರದು ಎಂದು ಮೋದಿ ಈ ಚಿಂತನೆ ಮಾಡಿದ್ದಾರೆ. ಹಾಗಾಗಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿ" ಎಂದು ಮೈಸೂರಿನಲ್ಲಿ ಶಾಸಕ ಎಸ್. ರಾಮದಾಸ್ ಮನವಿ ಮಾಡಿದ್ದಾರೆ.












Click it and Unblock the Notifications