'ಕುಕ್ಕರಹಳ್ಳಿ ಕೆರೆಯಲ್ಲಿ ಬದುಕು' ಛಾಯಾ ಚಿತ್ರಕ್ಕೆ ಆಹ್ವಾನ, ಮೇ 5 ಕೊನೇ ದಿನ
ಮೈಸೂರು, ಮೇ 2: ಮೈಸೂರಿನವರಿಗೆ ಕುಕ್ಕರಹಳ್ಳಿ ಕೆರೆಯ ಬಗ್ಗೆ ಹೇಳಬೇಕಿಲ್ಲ. ಅದು ನಿರಂತರವಾಗಿ ಜನರನ್ನು ತನ್ನತ್ತ ಸೆಳೆಯುತ್ತನೇ ಇರುವ ಸುಂದರ ತಾಣ. ನಿತ್ಯ ನೂರಾರು ನಾಗರಿಕರು ಮೈಸೂರಿನ ಎಲ್ಲಾ ಮೂಲೆಗಳಿಂದ ವಾಯುವಿಹಾರಕ್ಕೆಂದು ಇಲ್ಲಿಗೆ ಬರುತ್ತಾರೆ. ಅಲ್ಲಿನ ನಿಸರ್ಗ ಸೌಂದರ್ಯ ಅಷ್ಟು ಅದ್ಭುತ. ವಿವಿಧ ಜಾತಿಯ ಪಕ್ಷಿ, ಪ್ರಾಣಿ, ಚಿಟ್ಟೆ, ಕೀಟ, ಮೀನು ,ಮೊಸಳೆ, ನರಿ, ನವಿಲುಗಳಿಗೆ ನೆಲೆ ನೀಡಿದ ಕುಕ್ಕರಹಳ್ಳಿ ಕೆರೆಯ ಸೌಂದರ್ಯ ವರ್ಣನಾತೀತ.
ಈ ಪ್ರಶಾಂತ ವಾತಾವರಣದಲ್ಲಿ ಬಂದು ಅದೆಷ್ಟು ಛಾಯಾಗ್ರಾಹಕರು ತಮ್ಮ ಪ್ರತಿಭೆಗೆ ಸಾಣೆ ಹಿಡಿದಿದ್ದಾರೋ ಲೆಕ್ಕವಿಲ್ಲ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ನೀವು ತೆಗೆದೆ ಹೈ ರೆಸೊಲ್ಯುಶನ್ ಚಿತ್ರವನ್ನು ಮೇ 5 ರ ಒಳಗಾಗಿ ಈ ಕೆಳಕಂಡ ಇ ಮೇಲ್ ಗೆ ಕಳಿಸಿಕೊಡಿ. ನಿಸರ್ಗದ ಬಗ್ಗೆ ಅರಿವು, ಕಾಳಜಿ, ಪ್ರೀತಿ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಛಾಯಾ ಚಿತ್ರ ಪ್ರದರ್ಶನ ಮೇ 12 ರಂದು ಭಾನುವಾರ ಕುಕ್ಕರಹಳ್ಳಿ ಕೆರೆಯ ಮುಖ್ಯ ಪ್ರವೇಶ ದ್ವಾರದ ಬಳಿ ನಡೆಯಲಿದೆ.

* ಒಬ್ಬ ಛಾಯಾಗ್ರಾಹಕ 3 ಚಿತ್ರಗಳನ್ನು ಕಳಿಸಲು ಅವಕಾಶವಿದೆ.
* ಛಾಯಾ ಚಿತ್ರಗಳು ಹೈ ರೆಸುಲ್ಯೂಶನ್ ಹೊಂದಿದ್ದು,ಪ್ರಿಂಟ್ ಔಟ್ ತೆಗೆದರೂ ಉತ್ತಮವಾಗಿ ಬರುವಂತಿರಬೇಕು
* ಛಾಯಾಚಿತ್ರ ತಲುಪಿದ ನಂತರ ಛಾಯಾಚಿತ್ರಕಾರರಿಗೆ ಚಿತ್ರ ತಲುಪಿದ ಕುರಿತು ಖಚಿತ ಪಡಿಸಿದ ಇ ಮೇಲ್ ಕಳಿಸಲಾಗುತ್ತದೆ.
* ಆಯ್ಕೆಯಾದ ಚಿತ್ರಗಳ ಮುದ್ರಣದ ರೂ.20 ನ್ನು ಛಾಯಾಚಿತ್ರಕಾರರೇ ಭರಿಸಬೇಕು.
* ಚಿತ್ರವನ್ನು [email protected] ಗೆ ಕಳುಹಿಸಲು ಕೋರಲಾಗಿದೆ.
* ಛಾಯಾ ಚಿತ್ರಗಳನ್ನು ಕಳಿಸಲು ಕೊನೆಯ ದಿನಾಂಕ ಮೇ 05
* ಛಾಯಾಚಿತ್ರಕಾರರ ಪೂರ್ಣ ಹೆಸರು ಮತ್ತು ಫೋನ್ ನಂಬರ್ ಅನ್ನು ಮೇಲ್ ನೊಂದಿಗೆ ಕಳುಹಿಸಲೇಬೇಕು.
* ಪ್ರದರ್ಶನಕ್ಕಿಟ್ಟ ಚಿತ್ರಗಳನ್ನು, ಪ್ರದರ್ಶನದ ನಂತರ ಛಾಯಾಚಿತ್ರಕಾರರೇ ತೆಗೆದುಕೊಳ್ಳಬಹುದು.












Click it and Unblock the Notifications