ಕೆ.ಆರ್.ನಗರ: ಜನರ ಮೇಲೆ ದಾಳಿ ನಡೆಸುತ್ತಿದ್ದ ಚಿರತೆ ಕೊನೆಗೂ ಸೆರೆ
ಮೈಸೂರು, ನವೆಂಬರ್ 4: ಜಿಲ್ಲೆಯ ಕೆಆರ್ ನಗರದಲ್ಲಿ ಜನರ ಮೇಲೆ ದಾಳಿ ನಡೆಸುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿದ್ದು, ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ಕೆಆರ್ ನಗರದಿಂದ ಮುಳ್ಳೂರಿಗೆ ಹೋಗುವ ರಸ್ತೆಯಲ್ಲಿ ಕಂಡ ಕಂಡವರ ಮೇಲೆ ಚಿರತೆ ದಾಳಿ ನಡೆಸಿ ಆತಂಕ ಮೂಡಿಸಿತ್ತು. ಚಿರತೆಯ ಪ್ರತ್ಯಕ್ಷದಿಂದ ಪಟ್ಟಣದ ಜನತೆ ಭಯ ಭೀತರಾಗಿ ಮನೆ ಸೇರಿಕೊಂಡಿದ್ದರು. ಆದರೈ ಜನನಿಬಿಡ ಪ್ರದೇಶ ಪ್ರವೇಶಿಸಿದ್ದ ಚಿರತೆರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಸವಾರ ಮೇಲೆ ದಾಳಿಗೆ ಯತ್ನಿಸಿತು. ಚಿರತೆ ದಾಳಿಯಿಂದ ಬೈಕ್ ಕೆಳಗೆ ಬಿದ್ದು, ಸವಾರ ಗಾಯಗೊಂಡರೆ, ಇದರ ಬೆನ್ನಲ್ಲೆ ಬೈಕ್ ಸವಾರನ ರಕ್ಷಣೆಗೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಮೇಲೆ ದಾಳಿ ಮಾಡಿತು.
ಗುರುವಾರ ರಾತ್ರಿಯೇ ಕೆಆರ್ ನಗರಕ್ಕೆ ಚಿರತೆ ಬಂದಿದ್ದು, ರಸ್ತೆ ನಡುವೆ ಕುಳಿತಿರುವ ಚಿರತೆ ಕಂಡು ಜನ ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದು, ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಿದ್ದರು. ಜನರನ್ನು ಚಿರತೆ ಸೆರೆಹಿಡಿಯುವವರೆಗೆ ಯಾರು ಹೊರ ಬರದಂತೆ ಮುನ್ಸೂಚನೆ ನೀಡಲಾಗಿತ್ತು.

ಎರಡು ಗಂಟೆ ಕಾರ್ಯಾಚರಣೆ ನಂತರ ಸೆರೆ
ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿ ಆತಂಕ ಮೂಡಿಸಿದ ಚಿರತೆಯನ್ನು ಎರಡು ಗಂಟೆ ಕಾರ್ಯಾಚರಣೆ ಮಾಡಿ ಅರವಳಿಕೆ ಚುಚ್ಚು ಮದ್ದು ನೀಡುವ ಮೂಲಕ ಅರಣ್ಯ ಇಲಾಖೆ ಸೆರೆ ಹಿಡಿದಿದ್ದಾರೆ. ಅರವಳಿಕೆ ನೀಡಿದ ನಂತರ ಚಿರತೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಸ್ಥಳದಲ್ಲೇ ಅರಣ್ಯಾಧಿಕಾರಿಗಳ ಹಾರೈಕೆ ಮಾಡಿ ಅದನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲು ಕೊಂಡೊಯ್ದರು. ಚಿರತೆ ಸಿಕ್ಕ ಸುದ್ದಿ ಕೆಆರ್ ನಗರ ಜನತೆ ನೆಮ್ಮದಿಯನ್ನುಂಟು ಮಾಡಿದ್ದು, ಅರಣ್ಯ ಇಲಾಖೆಗೆ ಧನ್ಯವಾದ ತಿಳಿಸಿದ್ದಾರೆ.
ಟಿ ನರಸೀಪುರದಲ್ಲಿ ಚಿರತೆ ದಾಳಿಗೆ ಯುವಕ ಬಲಿ
ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಟಿ.ನರಸೀಪುರ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಯುವಕ ಮಂಜುನಾಥ್ (18) ಚಿರತೆ ದಾಳಿಗೆ ಯುವಕ ಬಲಿಯಾಗಿದ್ದಾನೆ.
ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಪೊದೆಯಿಂದ ಜಿಗಿದು ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿತು. ಸ್ನೇಹಿತರು ಚಿರತೆಗೆ ಕಲ್ಲು ಹೊಡೆದು ರಕ್ಷಿಸಲು ಮುಂದಾದರಾದರೂ ಮಂಜುನಾಥನನ್ನು ಚಿರತೆ ಬಿಡಲಿಲ್ಲ, ಗ್ರಾಮಸ್ಥರು ಬರುವ ವೇಳೆಗೆ ಚಿರತೆ ಯುವಕನ್ನು ಕೊಂದು ಪರಾರಿಯಾಗಿತ್ತು. ಈ ಘಟನೆ ಬೆನ್ನಲ್ಲೆ ಮಲ್ಲಪ್ಪನ ಬೆಟ್ಟದ ಸುತ್ತಮುತ್ತಲಿನ ಗ್ರಾಮದ ಮನೆಯಿಂದ ಹೊರಬರಲು ಆತಂಕ ಪಡುವಂತಾಗಿದೆ.












Click it and Unblock the Notifications