ಎಚ್ ಡಿ ಕೋಟೆಯಲ್ಲಿ ಚಿರತೆ ದಾಳಿ; ಕಾರ್ಮಿಕನಿಗೆ ಗಾಯ
ಮೈಸೂರು, ಜುಲೈ 5: ಕಾರ್ಮಿಕರೊಬ್ಬರು ಕೆಲಸಕ್ಕೆ ತೆರಳುತ್ತಿದ್ದ ವೇಳೆ ಚಿರತೆ ಹಠಾತ್ ದಾಳಿ ನಡೆಸಿದ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.
ಮೈಸೂರಿನ ಎಚ್.ಡಿ.ಕೋಟೆ ತಾಲ್ಲೂಕಿನ ಉದ್ಬೂರು ಕೆರೆ ಹಾಡಿಯಲ್ಲಿ ಜುಲೈ 4 ಬುಧವಾರ ಈ ಘಟನೆ ನಡೆದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಹೊಂದಿಕೊಂಡಿರುವ ಕೆರೆ ಹಾಡಿಯಲ್ಲಿ ರವಿ ಎಂಬಾತನ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದೆ. ರವಿ ಅವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ರವಿ ಒಬ್ಬರೇ ಕೂಲಿ ಕೆಲಸಕ್ಕೆ ತೆರಳುವ ಸಂದರ್ಭ, ಪೊದೆಯಿಂದ ಹೊರಬಂದ ಚಿರತೆ ಹಠಾತ್ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ರವಿ ಬಲ ಕೈ ಮತ್ತು ಎಡಗಾಲಿಗೆ ಗಾಯವಾಗಿದೆ. ಚಿರತೆ ದಾಳಿ ಮಾಡುತ್ತಿದ್ದಂತೆ ರವಿ ಚೀರಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ, ಗಾಯಾಳುವನ್ನು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿದ್ದಾರೆ.












Click it and Unblock the Notifications