ಕೋವಿಡ್ ನಿಂದ ಗುಣಮುಖರಾಗಿ ಕೆರೆ ಕಾಮೇಗೌಡರು ಡಿಸ್ಚಾರ್ಜ್
ಮಂಡ್ಯ, ಆಗಸ್ಟ್ 03: ಕೊರೊನಾ ಸೋಂಕಿನಿಂದಾಗಿ ಬಳಲುತ್ತಿದ್ದ ಕಲ್ಮನೆ ಕಾಮೇಗೌಡ ಅವರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆಯಾದರು. ಈ ವೇಳೆ ಮಂಡ್ಯ ಜಿಲ್ಲಾಡಳಿತ ಸಕಲ ಗೌರವಗಳೊಂದಿಗೆ ಕೆರೆ ಕಾಮೇಗೌಡರನ್ನು ಬೀಳ್ಕೊಟ್ಟಿತು.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ 85 ವರ್ಷ ವಯಸ್ಸಿನ ಕಾಮೇಗೌಡರು ಈಚೆಗೆ ಕೋವಿಡ್ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೋಂಕಿನಿಂದ ಗುಣಮುಖರಾಗಿ ಬಂದ ಅವರನ್ನು ಜಿಲ್ಲಾಧಿಕಾರಿ ಎಂ.ವಿ ವೆಂಕಟೇಶ್ ಅಭಿನಂದಿಸಿದರು.

ಇದೇ ವೇಳೆ ಬ್ಯಾಂಡ್ ಬಾರಿಸಿ, ಹೂಮಳೆಗೈದು ಗೌರವಿಸಲಾಯಿತು. ಈ ವೇಳೆ ಡಿಎಚ್ಒ ಮಾಂಚೇಗೌಡ, ಮಿಮ್ಸ್ ಅಧೀಕ್ಷಕ ಹರೀಶ್, ಶಿವಕುಮಾರ್ ಇತರರು ಇದ್ದರು. ಕಾಮೇಗೌಡರು ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರ "ಮನ್ ಕೀ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಮೋದಿಯವರಿಂದ ಪ್ರಶಂಸೆಗೆ ಒಳಪಟ್ಟಿದ್ದರು.












Click it and Unblock the Notifications