ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ: ಹೊರ ವರ್ತುಲ ರಸ್ತೆಯ ಪ್ರದೇಶಗಳಿಗೂ ಬಸ್ ಸೇವೆ
ಮೈಸೂರು, ಆಗಸ್ಟ್ 05: ಅರಮನೆ ನಗರಿ ಮೈಸೂರಿನಲ್ಲಿ ನಗರ ವ್ಯಾಪ್ತಿಯಲ್ಲಿ ಓಡಾಡಲು ಪ್ರಯಾಣಿಕರಿಗೆ ಸಿಟಿ ಬಸ್‌ಗಳ ವ್ಯವಸ್ಥೆ ಇದೆ. ಇದರೊಂದಿಗೆ ಹೊರ ವರ್ತುಲ ರಸ್ತೆ (ORR) ವ್ಯಾಪ್ತಿಯಲ್ಲಿ ಸಾರಿಗೆ ಸೇವೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಹೊಸದೊಂದು ಪ್ಲಾನ್ ಮಾಡಿಕೊಂಡಿದೆ.
ಪ್ರಯಾಣಿಕರು ನಗರದ ಹೊರ ವರ್ತುಲ ರಸ್ತೆ ಭಾಗದ ಸ್ಥಳಗಳಿಗೆ ತೆರಳಲು ಸಾರಿಗೆ ಹೆಚ್ಚು ಬೇಡಿಕೆ ಇದೆ. ಈ ಬೇಡಿಕೆಯನ್ನೇ ಖಾಸಗಿ ಸಾರಿಗೆಗಳಾದ ಟ್ಯಾಕ್ಸಿ ಇನ್ನಿತರ ವಾಹನಗಳು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಅರಿತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಸುಮಾರು 15ಕ್ಕೂ ಹೆಚ್ಚು ಬಸ್‌ಗಳನ್ನು ಹೊರ ವರ್ತುಲ ವರೆಗೆ ವಿಸ್ತರಣೆ ಮಾಡಲು ನಿರ್ಧರಿಸಿದೆ. ಇದು ಸಾಧ್ಯವಾದರೆ ಜನರಿಗೆ ಖಾಸಗಿ ವಾಹನಗಳಿಂಗಿಂತಲೂ ಕಡಿಮೆ ಬೆಲೆಗೆ ಸಂಚಾರ ಸೇವೆ ಲಭ್ಯವಾಗಲಿದೆ.

ಬಸ್ ಸೇವೆ ವಿಸ್ತರಣೆ ಯಾವಾಗ?
ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ/ನಗರಗಳನ್ನು, ಗ್ರಾಮೀಣ ಪ್ರದೇಶಗಳನ್ನು KSRTC ಬಸ್‌ಗಳು ಸಂಪರ್ಕಿಸುತ್ತವೆ. ಈ ಸೇವೆಯನ್ನು ಮುಂದಿನ ದಿನಗಳಲ್ಲಿ ಮೈಸೂರು ನಗರದ ಹೊರ ವರ್ತುಲ ರಸ್ತೆಯವರೆಗೆ (ORR) ವಿಸ್ತರಣೆ ಮಾಡಲು ಮೈಸೂರು ಕೆಎಸ್‌ಆರ್‌ಟಿಸಿ ಘಟಕ ಉದ್ದೇಶಿಸಿದೆ. ಇನ್ನೇನು ಕಾರ್ಯರೂಪಕ್ಕೆ ಬರಲಿದೆ.
ಇದಕ್ಕೆ ಪೂರಕವಾಗಿ ಪ್ರಯಾಣಿಕರ ಸಹ ರಿಂಗ್ ರಸ್ತೆಗೆ ಬಸ್ ಸಂಚಾರ ಸೇವೆಯ ಲಭ್ಯತೆಯ ಅಗತ್ಯತೆ ಎಷ್ಟಿದೆ ಎಂದು ಒತ್ತಿ ಹೇಳಿದ್ದಾರೆ. ಇಲ್ಲಿನ ಹೆಬ್ಬಾಳದಂತಹ ಪ್ರದೇಶಗಳ ನಿವಾಸಿಗಳು ಬೋಗಾದಿ ಇಲ್ಲವೇ ಹುಣಸೂರು ರಸ್ತೆಯಂತಹ ಸ್ಥಳಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಪರದಾಡುವಂತಹ ಸ್ಥಿತಿ ಇದೆ.
ಅಗತ್ಯಕ್ಕಿಂತ ಸಮಯ, ದುಡ್ಡು ಪೋಲು
ಹೊಸ ವಲಯದಿಂದ ನಗರದೊಳಗೆ ವಿವಿಧ ಕಾರ್ಯ ನಿಮಿತ್ತ ಬರುವವರಿಗೆ ನೇರ ಸಾರಿಗೆ ವ್ಯವಸ್ಥೆ ಸಿಗಬೇಕಿದೆ. ಹೊಸ ವರ್ತುಲದಿಂದ ಸಿಟಿ ಅಂಚಿನ ವರೆಗೆ ಬಂದು, ಅಲ್ಲಿಂದ ಸಿಟಿ ಬಸ್ ಹಿಡಿದು ಬರಬೇಕು. ಕೆಲವೊಮ್ಮೆ ಮೂರು ಕಡೆ ಬಸ್, ಇಲ್ಲವೇ ಖಾಸಗಿ ವಾಹನ ಬದಲಿಸಬೇಕಾಗುತ್ತದೆ. ಇದರಿಂದ ಹಣ ಮತ್ತು ಸಮಯ ವ್ಯರ್ಥವಾಗುತ್ತಿದೆ ಎಂದು ಕೆಲವು ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ.
ಈ ಪ್ರದೇಶಗಳಲ್ಲಿ ಸಾರಿಗೆಗೆ ಬೇಡಿಕೆ
ಸಾಮಾನ್ಯವಾಗಿ ನಂಜನಗೂಡು ರಸ್ತೆಯ ಬಂಡಿಪಾಳ್ಯ ಎಪಿಎಂಸಿ ಜಂಕ್ಷನ್, ಮಣಿಪಾಲ್ ಆಸ್ಪತ್ರೆ ಜಂಕ್ಷನ್ (ಮೈಸೂರು-ಬೆಂಗಳೂರು ಹೈವೇ) , ಉತ್ತನಹಳ್ಳಿ ಜಂಕ್ಷನ್, ಟಿ.ನರಸೀಪುರ ರಸ್ತೆ, ವಿಟಿಯು ಪ್ರಾದೇಶಿಕ ಕಚೇರಿ, RTO ಕಚೇರಿ ಹಾಗೂ ದೇವೇಗೌಡ ಸರ್ಕಲ್ ಸೇರಿದಂತೆ ಹೊರವಲಯದ ವಿವಿಧ ಭಾಗಗಳಲ್ಲಿ ಪ್ರತಿದಿನ ಉದ್ಯೋಗಿಗಳು, ಕಾರ್ಮಿಕರು, ಕಾರ್ಖಾನೆ ಕೆಲಸಗಾರರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಓಡಾಡುತ್ತಾರೆ. ಹೀಗಾಗಿ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ವಿಸ್ತರಣೆಗೆ ಬೇಡಿಕೆ ಸೃಷ್ಟಿಯಾಗಿದೆ.
ಸದ್ಯ KSRTC ನಿಗಮದ ಅಧಿಕಾರಿಗಳು ಬಸ್ ಸಂಚಾರಕ್ಕೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸೂಕ್ತ ರೀತಿಯಲ್ಲಿ ರೂಟ್ ಶೀಟ್ ಅನ್ನು ಸಿದ್ಧಪಡಿಸುತ್ತಿದೆ. ಇದು ಪೂರ್ಣಗೊಳ್ಳುತ್ತಿದ್ದಂತೆ ಪ್ರತಿದಿನ ಬೆಳಗ್ಗೆಯಿಂದ ರಾತ್ರಿವರೆಗೆ ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳನ್ನು ಓಆರ್‌ಆರ್ ಸುತ್ತಮುತ್ತಲಿನ ಪ್ರದೇಶಗಳಿಗೆ ಕಾರ್ಯಾಚರಣೆ ನಡೆಸಲಿದೆ ಎಂದು 'ಸ್ಟಾರ್ ಆಫ್ ಮೈಸೂರು' ವರದಿ ಮಾಡಿದೆ.
ಕೆಎಸ್‌ಆರ್‌ಟಿಸಿ ನಿಗಮವು ರಾಜ್ಯದಲ್ಲಿ ಹೊಸ ಹೊಸ ಮಾದರಿಯ ಬಸ್‌ಗಳನ್ನು ಪರಿಚಯ ಮಾಡುತ್ತಿದೆ. ಇನ್ನೂ ಹಲವು ಘಟಕಗಳಿಗೆ ಹೊಸ ಬಸ್ ನೀಡುವುದಾಗಿ ಇತ್ತೀಚೆಗೆ ಸಾರಿಗೆ ಸಚಿವರೇ ತಿಳಿಸಿದ್ದಾರೆ. ಪ್ರಯಾಣಿಕರ ದೃಷ್ಟಿಯಿಂದ ಹೊಸ ಹೊಸ ಉಪಕ್ರಮಗಳನ್ನು ಸರ್ಕಾರ ಪರಿಚಯಿಸುತ್ತಿದೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications