ಹುಣಸೂರು; 5 ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಬಸ್‌ ಚಾಲಕ ಆತ್ಮಹತ್ಯೆ

ಮೈಸೂರು, ಮೇ 13: ಐದು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ರಾಜ್ಯ ಸಾರಿಗೆ ಸಂಸ್ಥೆಯ ಚಾಲಕ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಣಸೂರು ತಾಲೂಕಿನ ಪೆಂಜಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತನನ್ನು ಸಂಸ್ಥೆಯ ಪುತ್ತೂರು ಡಿಪೋದ ಚಾಲಕ ಬಾಲರಾಜು (30) ಎಂದು ಗುರುತಿಸಲಾಗಿದೆ. ಬಾಲರಾಜು ಐದು ತಿಂಗಳ ಹಿಂದಷ್ಟೆ ಕುಶಾಲನಗರದ ಜೀವಿತಾ ಎಂಬುವವರನ್ನು ಕುಟುಂಬಸ್ಥರ ಸಮ್ಮುಖದಲ್ಲೇ ಮದುವೆ ಆಗಿದ್ದರು. ಆದರೆ ಮೊದಲನೇ ದಿನದಿಂದಲೂ ಗಂಡ ಹೆಂಡತಿ ನಡುವೆ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಆಗುತ್ತಿತ್ತು ಎನ್ನಲಾಗಿದೆ.

KSRTC Driver Committed Suicide Due To Family Dispute In Hunsur

ಮೇ 4ರಂದು ಗಂಡನೊಡನೆ ಜಗಳವಾಡಿ ಜೀವಿತಾ ತನ್ನ ತವರು ಮನೆ ಕುಶಾಲನಗರಕ್ಕೆ ಹೋಗಿದ್ದಳು. ಇದರಿಂದ ಖಿನ್ನನಾಗಿದ್ದ ಬಾಲರಾಜು ಮನೆಯಲ್ಲೇ ಇಂದು ಕ್ರಿಮಿನಾಶಕ ಸೇವಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಹುಣಸೂರಿನ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಈ ಕುರಿತು ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+