ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನ ಬಸ್‌ನಲ್ಲಿ ಮಕ್ಕಳಿಗೆ ಅಳತೆಗೋಲಿಗೆ ತಕ್ಕಂತೆ ಟಿಕೆಟ್!

|
Google Oneindia Kannada News

ಮೈಸೂರು, ಫೆಬ್ರವರಿ 28: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‍ಗಳಲ್ಲಿ ಸಂಚರಿಸುವಾಗ ಮಕ್ಕಳಿಗೆ ಟಿಕೆಟ್ ತೆಗೆದುಕೊಳ್ಳುವ ವಿಚಾರದಲ್ಲಿ ನಿರ್ವಾಹಕ ಮತ್ತು ಪ್ರಯಾಣಿಕರ ನಡುವೆ ಆಗಾಗ್ಗೆ ಕಿರಿಕಿರಿಗಳು, ವಾಗ್ವಾದಗಳು ನಡೆಯುತ್ತಲೇ ಇರುತ್ತವೆ.

ಹಣ ಉಳಿಸುವ ಸಲುವಾಗಿ ಮಕ್ಕಳ ವಯಸ್ಸನ್ನು ಕಡಿಮೆ ಹೇಳುವ ಪೋಷಕರಿಗೇನು ಕಡಿಮೆಯಿಲ್ಲ. ಕೆಲವೊಮ್ಮೆ ಮಕ್ಕಳ ನಿಜ ವಯಸ್ಸು ತಿಳಿಯುವ ಸಲುವಾಗಿ ನಿರ್ವಾಹಕರು ನೇರವಾಗಿ ಮಕ್ಕಳನ್ನೇ ಯಾವ ತರಗತಿಯಲ್ಲಿ ಓದುತ್ತೀಯ? ಎಂಬ ಪ್ರಶ್ನೆ ಕೇಳಿ ಆತನ ವಯಸ್ಸು ತಿಳಿದು ಟಿಕೆಟ್ ನೀಡುತ್ತಾರೆ.

 ಮತ್ತೆ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ ಮತ್ತೆ ವಿದ್ಯಾರ್ಥಿ ಬಸ್ ಪಾಸ್ ಅವಧಿ ವಿಸ್ತರಣೆ

ಆದರೆ, ಮೊದಲೇ ನಿರ್ವಾಹಕರು ವಯಸ್ಸು ಮತ್ತು ತರಗತಿ ಕೇಳುತ್ತಾರೆ ಎಂದು ತಿಳಿದು ಓದುತ್ತಿರುವ ತರಗತಿಯನ್ನು ಕೂಡ ಕಡಿಮೆ ಹೇಳುವಂತೆ ಮಕ್ಕಳಿಗೆ ಹೇಳಿಕೊಡುವ ಪೋಷಕರು ಇಲ್ಲದಿಲ್ಲ.

ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ನೌಕರರ ಪ್ಲಾನ್ ರಾಜ್ಯದಲ್ಲಿ ಮತ್ತೆ ಬಸ್ ಸಂಚಾರ ಸ್ಥಗಿತಕ್ಕೆ ಸಾರಿಗೆ ನೌಕರರ ಪ್ಲಾನ್

Mysuru KSRTC Conductor Issuing Ticket To Children According To Height

ನಿರ್ವಾಹಕರ ಜೊತೆ ವಾಗ್ವಾದ; ಸಾಮಾನ್ಯವಾಗಿ ಬಸ್‍ನಲ್ಲಿ ಪ್ರಯಾಣಿಸುವ ಸಂದರ್ಭ ಬಂದಾಗ ಹೆಚ್ಚಿನವರು ಮಕ್ಕಳ ವಯಸ್ಸಿಗೆ ತಕ್ಕಂತೆ ಟಿಕೆಟ್ ಪಡೆಯುತ್ತಾರೆಯಾದರೂ ಕೆಲವರು ಮಕ್ಕಳು ಪ್ರಾಪ್ತ ವಯಸ್ಸಿನವರಾದರೂ ಸುಳ್ಳು ಹೇಳುವುದರೊಂದಿಗೆ ನಿರ್ವಾಹಕರೊಂದಿಗೆ ಜಗಳಕ್ಕಿಳಿಯುತ್ತಾರೆ.

ಮಂಗಳೂರು-ಕುಟುಟಾ ನಡುವೆ ವೋಲ್ವೊ ಬಸ್ ಸೇವೆ ಮಂಗಳೂರು-ಕುಟುಟಾ ನಡುವೆ ವೋಲ್ವೊ ಬಸ್ ಸೇವೆ

ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ರಗಳೆಗಳು ತುಸು ಹೆಚ್ಚಾಗಿಯೇ ಇರುತ್ತದೆ. ಬೆಳಗ್ಗಿನಿಂದ ಸಂಜೆ ತನಕ ಇಂತಹ ಘಟನೆಗಳು ನಡೆಯುತ್ತಲೇ ಇರುವುದರಿಂದ ಈ ವಿಚಾರದಲ್ಲಿ ನಿರ್ವಾಹಕರು ಕೆಲವೊಮ್ಮೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಆಗ ಪ್ರಯಾಣಿಕರು ಮತ್ತು ನಿರ್ವಾಹಕರ ನಡುವಿನ ವಾಗ್ವಾದಗಳು ತಾರಕಕ್ಕೇರುತ್ತವೆ.

Mysuru KSRTC Conductor Issuing Ticket To Children According To Height

ವಿನೂತನ ಕ್ರಮ; ದಿನನಿತ್ಯದ ಈ ಕಿರಿಕಿರಿಯನ್ನು ತಪ್ಪಿಸುವ ಸಲುವಾಗಿ ಮೈಸೂರು ನಗರ ಸಾರಿಗೆಯ ಕೆಲವು ಬಸ್‍ಗಳಲ್ಲಿ ಹೊಸದೊಂದು ಉಪಾಯವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಅಳತೆಗೋಲನ್ನು ವ್ಯವಸ್ಥೆ ಮಾಡಿ ಅದರಲ್ಲಿ ವಯಸ್ಸನ್ನು ಕಂಡು ಹಿಡಿದು ಟಿಕೆಟ್ ನೀಡಲಾಗುತ್ತಿದೆ.

ಇದು ಎಷ್ಟರ ಮಟ್ಟಿಗೆ ಸರಿಯೋ ಗೊತ್ತಿಲ್ಲ. ಕೆಲವರು ಇದೊಂದು ಅವೈಜ್ಞಾನಿಕ ಕ್ರಮ ಎಂದು ಹೇಳುತ್ತಿದ್ದಾರೆ. ಆದರೆ ಈ ಅಳತೆಗೋಲಿನಿಂದಾಗಿ ನಿರ್ವಾಹಕರು ಸ್ವಲ್ಪ ನಿರಾಳರಾಗಿದ್ದಾರೆ.

ಬಿಳಿ ಬಣ್ಣದ ಅಳತೆಗೋಲು; ಸಾರಿಗೆ ಬಸ್‍ನಲ್ಲಿ ಬಿಳಿ ಬಣ್ಣದ ಅಳತೆಗೋಲನ್ನು ಮಾಡಲಾಗಿದ್ದು ಬಸ್ ಹತ್ತುವ ಮಕ್ಕಳು ವಯಸ್ಸಿನ ಸುಳ್ಳು ಹೇಳಿದರೆ ಅವರ ಎತ್ತರವನ್ನು ಅಳೆಯುವ ನಿರ್ವಾಹಕರು ಅಳತೆಗೋಲನ್ನು ನೋಡಿಕೊಂಡು ಟಿಕೆಟ್ ನೀಡುತ್ತಾರೆ.

ಅದು ಹೇಗಿದೆ ಎಂದರೆ ಬಸ್‍ನ ಒಳಗಿನ ಕಂಬಿಗೆ ಬಿಳಿಬಣ್ಣವನ್ನು ಬಳಿದು ಅಳತೆಗೋಲನ್ನು ನಿರ್ಮಿಸಲಾಗಿದೆ. ಮಗುವಿನ ಎತ್ತರ ಬಣ್ಣಕ್ಕಿಂತ ಕೆಳಗಿದ್ದರೆ ಅಂತಹ ಮಗು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಇನ್ನು ಆ ಬಣ್ಣದ ಮಟ್ಟಕ್ಕೆ ಮಗುವಿನ ಎತ್ತರವಿದ್ದರೆ ಅಂತಹ ಮಗುವಿಗೆ ಅರ್ಧ ಟಿಕೆಟ್, ನೀಡಲಾಗುತ್ತದೆ. ಮಗುವಿನ ಎತ್ತರ ಬಿಳಿಬಣ್ಣಕ್ಕಿಂತ ಮೇಲಿದ್ದರೆ ಪೂರ್ತಿ ಟಿಕೆಟ್‍ನ್ನು ಪಡೆದುಕೊಂಡು ಪ್ರಯಾಣಿಸಬೇಕಾಗುತ್ತದೆ.

ಶಾಲಾ ಗುರುತಿನ ಪತ್ರ; ಒಂದು ವೇಳೆ ಮಗುವಿನ ಬೆಳವಣಿಗೆ ಹೆಚ್ಚಿದ್ದು ವಯಸ್ಸು ಕಡಿಮೆಯಿದ್ದು ಅಳತೆ ಗೋಲಿಗೆ ಹೊಂದಿಕೆಯಾಗದಿದ್ದರೆ ಆಗ ಮಕ್ಕಳ ವಯಸ್ಸಿನ ಶಾಲಾ ಗುರುತಿನ ಪತ್ರ ಅಥವಾ ಇನ್ಯಾವುದೇ ರೀತಿಯ ಗುರುತಿನ ಚೀಟಿಯನ್ನು ನೀಡಿ ಅದರಲ್ಲಿರುವ ವಯಸ್ಸಿಗೆ ತಕ್ಕಂತೆ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶವಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಕೆಎಸ್ ಆರ್ ಟಿಸಿಯ ಈ ವಿನೂತನ ಕ್ರಮ ಅಚ್ಚರಿ ಮೂಡಿಸಿರುವುದಂತು ನಿಜ.

English summary
In a Mysuru city bus KSRTC bus conductor issuing ticket to children according to the height. Some passengers opposed for a new system.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X